ಕೊಯಿಲ ಎಂಡೋ ಪಾಲನಾ ಕೇಂದ್ರದಲ್ಲಿ ಪೋಷಕರ ಸಭೆ, ವಾರ್ಷಿಕೋತ್ಸವ ಸಮಾರಂಭದಲ್ಲಿ ಎಂಡೋ ಸಂತ್ರಸ್ತ ಮಕ್ಕಳಿಗಾಗಿ ವಿವಿಧ ಸಾಂಸ್ಕೃತಿಕ ಕಾರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸಂತ್ರಸ್ತ ವಿದ್ಯಾರ್ಥಿಗಳು ತಮ್ಮಲ್ಲಿನ ಪ್ರತಿಭೆ
ಉಪ್ಪಿನಂಗಡಿ: ಕೊಯಿಲ ಎಂಡೋ ಪಾಲನಾ ಕೇಂದ್ರದಲ್ಲಿ ಪೋಷಕರ ಸಭೆ, ವಾರ್ಷಿಕೋತ್ಸವ ಸಮಾರಂಭದಲ್ಲಿ ಎಂಡೋ ಸಂತ್ರಸ್ತ ಮಕ್ಕಳಿಗಾಗಿ ವಿವಿಧ ಸಾಂಸ್ಕೃತಿಕ ಕಾರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸಂತ್ರಸ್ತ ವಿದ್ಯಾರ್ಥಿಗಳು ತಮ್ಮಲ್ಲಿನ ಪ್ರತಿಭೆಗಳನ್ನು ಅನಾವರಣಗೊಳಿಸಿದರು.ವಾರ್ಷಿಕೋತ್ಸವ ಸಮಾರಂಭವನ್ನು ಕೊಯಿಲ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಂಜುನಾಥ ಉಧ್ಘಾಟಿಸಿ ಮಾತನಾಡಿ, ಎಂಡೋ ಸಂತ್ರಸ್ತ ಮಕ್ಕಳನ್ನು ಪಾಲನೆ ಮಾಡುವಂತದ್ದು ಸಣ್ಣ ಕೆಲಸವಲ್ಲ. ಬಹಳ ಶ್ರಮ ಮತ್ತು ತಾಳ್ಮೆ ಮುಖ್ಯ. ಇವರ ಆರೈಕೆ ಮಾಡುವಂತದ್ದು ವೈದ್ಯಕೀಯ ಕ್ಷೇತ್ರದ ಸವಾಲು ಆಗಿದ್ದು, ಇಲ್ಲಿನ ಸಿಬ್ಬಂದಿಗಳು ಪ್ರಶಂಶನೀಯರು ಎಂದರು.
ದ.ಕ. ಜಿಲ್ಲಾ ಎಂಡೋ ಸೆಲ್ ಸಂಯೋಜಕ ಶಜೀವುದ್ದೀನ್ ಮಾತನಾಡಿ, ಮಕ್ಕಳ ಬೆಳವಣಿಗೆಯಲ್ಲಿ ಮತ್ತು ಅವರ ಚಟುವಟಿಕೆಗಳಲ್ಲಿ ದಿನೇ ದಿನೆ ಬೆಳವಣಿಗೆ ಕಾಣುತ್ತಿದ್ದೇವೆ. ಇಲ್ಲಿಗೆ ಬರುವ ಮಕ್ಕಳ ಪೋಷಕರು ದಿನಕ್ಕೆ ಒಬ್ಬರಂತೆ ಬಂದು ಅವರ ಚಟುವಟಿಕೆಗಳನ್ನು ಗಮನಿಸಿದರೆ ಅವರಿಗೂ ಸ್ಫೂರ್ತಿ ಬರುತ್ತದೆ. ಅವರಲ್ಲಿ ಬದಲಾವಣೆ ನೋಡಲು ಸಾಧ್ಯವಾಗಬಹುದು ಎಂದರು.ಉದ್ಭವ್ ಎಜುಕೇಶನ್ ಅಂಡ್ ಗ್ರಾಮೀಣಾಭಿವೃದ್ಧಿ ಸೊಸೈಟಿ ಕಾರ‍್ಯದರ್ಶಿ ಚಂದ್ರಕಲಾ ಅಧ್ಯಕ್ಷತೆ ವಹಿಸಿದ್ದರು. ಕೊಯಿಲ ಗ್ರಾಪಂ ನಿಕಟಪೂರ್ವ ಅಧ್ಯಕ್ಷೆ ಪುಷ್ಪಾ ಸುಭಾಶ್ ರೈ, ಉದ್ಭವ್ ಸಂಸ್ಥೆಯ ಕಾರ‍್ಯನಿರ್ವಹಣಾಧಿಕಾರಿ ಶಿವಾನಂದ, ಪೋಷಕರಾದ ಬಾಲಕೃಷ್ಣ ಮಾತನಾಡಿದರು. ಮಕ್ಕಳಿಂದ ಹಾಡು ಕುಣಿತ:ಬೆಳಗ್ಗಿನಿಂದ ಆರಂಭಗೊಂಡ ಕಾರ‍್ಯಕ್ರಮದಲ್ಲಿ ಸಂತ್ರಸ್ತ ಮಕ್ಕಳ ಮೂಲಕ ತುಳು ಜಾನಪದ ಹಾಡು, ಕನ್ನಡ ಭಕ್ತಿ ಗೀತೆ, ದೇಶಭಕ್ತಿ ಗೀತೆ, ಕನ್ನಡ ಸಿನಿಮಾ ಹಾಡಿಗೆ ಡ್ಯಾನ್ಸ್, ಯೋಗಾಸನ ಹೀಗೆ ನಾನಾ ರೀತಿಯಲ್ಲಿ ಮಕ್ಕಳಲ್ಲಿ ಇರುವ ಕಲೆಯನ್ನು ಗುರುತಿಸಲಾಯಿತು ಹಾಗೂ ಮಕ್ಕಳು ತಯಾರಿಸಿದ ಕ್ರಾಫ್ಟ್ ವಸ್ತುಗಳು ಪ್ರದರ್ಶನ ಮತ್ತು ಮಾರಾಟ ನಡೆಯಿತು.
ಸನ್ಮಾನ: ಈ ಸಂದರ್ಭ ಕಳೆದ ಅವಧಿಯಲ್ಲಿ ಗ್ರಾಪಂ ಮೂಲಕ ಪಾಲನಾ ಕೇಂದ್ರಗಳಿಗೆ ಹಲವು ಸೌಲಭ್ಯಗಳನ್ನು ನೀಡುವಲ್ಲಿ ಸಹಕರಿಸಿದ ಪುಷ್ಪಾ ಸುಭಾಶ್ ರೈ ಅವರನ್ನು ಸನ್ಮಾನಿಸಲಾಯಿತು.ಕೊಯಿಲ ಆರೋಗ್ಯ ಕೇಂದ್ರದ ರವಿಶಂಕರ್, ಮರಿಯಮ್ಮ, ಕೊಯಿಲ ಶಾಲಾ ಮುಖ್ಯ ಶಿಕ್ಷಕಿ ಅನುಪಮ, ವಿಕಲಚೇತನ ಪುನರ್ವಸತಿ ಕಾರ‍್ಯಕರ್ತೆ ಆತಿಕಮ್ಮ, ಪಂಚಾಯಿತಿ ಕಾರ‍್ಯದರ್ಶಿ ಪಮ್ಮು, ಅಂಗನವಾಡಿ ಕಾರ‍್ಯಕರ್ತೆ ಯಮುನ ಇದ್ದರು. ಎಂಡೋ ಪಾಲನಾ ಕೇಂದ್ರದ ವ್ಯವಸ್ಥಾಪಕಿ ಶೈನಿ ಸ್ವಾಗತಿಸಿ, ನಮಿತ ವಂದಿಸಿದರು. ಹವ್ಯ, ಇಂತಿಯಾಝ್ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.