ಮರಳು ರೂಪ ತಾಳುವ ಅಪಾಯಕಾರಿ ಗಾಜು ಕಸ!

KannadaprabhaNewsNetwork |  
Published : May 04, 2026, 03:00 AM IST
ಫೋಟೋ: ಗ್ಲಾಸ್ ೧, ಗ್ಲಾಸ್ ೨, ಗ್ಲಾಸ್ ೩, ಗ್ಲಾಸ್ ೪, ಗ್ಲಾಸ್ ೫, ಗ್ಲಾಸ್ ೬, ಗ್ಲಾಸ್ ೭ | Kannada Prabha

ಸಾರಾಂಶ

ಕಸಗಳಲ್ಲಿ ಅಪಾಯಕಾರಿ ಕಸವಾಗಿರುವ ಗಾಜು (ಕುಪ್ಪಿ) ಕಸ ವಿಲೇವಾರಿ ಸ್ಥಳೀಯಾಡಳಿತಗಳಿಗೆ ದೊಡ್ಡ ಸವಾಲು. ಪ್ಲಾಸ್ಟಿಕ್ ಕಸ ಪರಿಸರಕ್ಕೆ ಹೆಚ್ಚು ಹಾನಿ ಮಾಡಿದರೆ, ಗಾಜು ಕಸವು ದೇಹಕ್ಕೆ ಹೆಚ್ಚು ಹಾನಿ ಮಾಡುತ್ತದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಆರ್ಯಾಪು ಗ್ರಾಮ ಪಂಚಾಯಿತಿ ಹೊಸ ಯೋಜನೆಯನ್ನು ರೂಪಿಸಿದೆ. ಅಪಾಯಕಾರಿ ಕಸವನ್ನು ಯಂತ್ರದಲ್ಲಿ ಮರಳಾಗಿ ಪರಿವರ್ತಿಸುತ್ತಿದೆ.

ಸಂಶುದ್ದೀನ್‌ ಸಂಪ್ಯ

ಕನ್ನಡಪ್ರಭ ವಾರ್ತೆ ಪುತ್ತೂರು

ಕಸಗಳಲ್ಲಿ ಅಪಾಯಕಾರಿ ಕಸವಾಗಿರುವ ಗಾಜು (ಕುಪ್ಪಿ) ಕಸ ವಿಲೇವಾರಿ ಸ್ಥಳೀಯಾಡಳಿತಗಳಿಗೆ ದೊಡ್ಡ ಸವಾಲು. ಪ್ಲಾಸ್ಟಿಕ್ ಕಸ ಪರಿಸರಕ್ಕೆ ಹೆಚ್ಚು ಹಾನಿ ಮಾಡಿದರೆ, ಗಾಜು ಕಸವು ದೇಹಕ್ಕೆ ಹೆಚ್ಚು ಹಾನಿ ಮಾಡುತ್ತದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಆರ್ಯಾಪು ಗ್ರಾಮ ಪಂಚಾಯಿತಿ ಹೊಸ ಯೋಜನೆಯನ್ನು ರೂಪಿಸಿದೆ. ಅಪಾಯಕಾರಿ ಕಸವನ್ನು ಯಂತ್ರದಲ್ಲಿ ಮರಳಾಗಿ ಪರಿವರ್ತಿಸುತ್ತಿದೆ. ಗ್ರಾಮ ಪಂಚಾಯಿತಿ ಕಸ ನಿರ್ವಹಣೆಯ ಜವಾಬ್ದಾರಿಯನ್ನು ಸಂಜೀವಿನಿ ಒಕ್ಕೂಟ ವಹಿಸಿಕೊಂಡಿದೆ. ಒಕ್ಕೂಟದ ಮಹಿಳಾ ಸ್ವಚ್ಚತಾ ಸೇನಾನಿಗಳ ತಂಡ ಪ್ರತೀ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುವ ಕೆಲಸ ಮಾಡುತ್ತಿದೆ. ಈ ಸಂದರ್ಭದಲ್ಲಿ ಮನೆಗಳಿಂದ ಸಂಗ್ರಹವಾಗುವ ಒಣ ಕಸಗಳಲ್ಲಿ ಗಾಜಿನ ಗ್ಲಾಸುಗಳು, ಬಾಟಲ್‌ಗಳು ಹೀಗೆ ಅತ್ಯಂತ ಅಪಾಯಕಾರಿಯಾದ ವಸ್ತುಗಳು ಕಸದ ರೂಪದಲ್ಲಿ ಗ್ರಾಮ ಪಂಚಾಯಿತಿ ಘಟಕಕ್ಕೆ ಸೇರುತ್ತದೆ. ಅಲ್ಲಿ ಕಸ ವಿಂಗಡಣೆ ಮಾಡುವಾಗ ಇಂತಹ ಗಾಜುಗಳು ಕೈ ಕಾಲುಗಳಿಗೆ ತರಚುವ, ಚುಚ್ಚುವ ಸಾಧ್ಯೆತೆಗಳು ಹೆಚ್ಚಾಗಿದೆ. ಇಡಿಯಾಗಿ ಸಿಗುವ ಗಾಜಿನ ಬಾಟಲ್ ಗಳನ್ನು ಗುಜರಿಗೆ ಹಾಕಬಹುದಾದರೂ, ಪುಡಿಯಾದ ಗಾಜಿನ ಚೂರುಗಳ ನಿರ್ವಹಣೆ ಸುಲಭವಲ್ಲ. ಇದನ್ನು ಮನಗಂಡ ಪುತ್ತೂರು ತಾಲೂಕಿನ ಆರ್ಯಾಪು ಗ್ರಾ.ಪಂ. ಕಸವನ್ನು ಮರಳಾಗಿ ಪರಿವರ್ತನೆ ಮಾಡುವ ಗಾಜು ಹುಡಿ ಮಾಡುವ ಘಟಕ ಅಳವಡಿಸಿಕೊಂಡಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಕಸದ ರೂಪದಲ್ಲಿ ಸಂಗ್ರಹವಾಗುವ ಎಲ್ಲಾ ಗಾಜುಗಳನ್ನು ಇಲ್ಲಿ ಮರಳು ರೂಪದಲ್ಲಿ ಪರಿವರ್ತನೆ ಮಾಡಲಾಗುತ್ತಿದೆ. ಈ ಯಂತ್ರದಲ್ಲಿ ಸುತ್ತ ಮುತ್ತಲ ಗ್ರಾಮ ಪಂಚಾಯತ್‌ಗಳಿಂದ ಎಷ್ಟು ಗಾಜು, ಬಾಟಲಿಗಳು ಬಂದರೂ ಅದನ್ನು ಮರಳು ಮಾಡಲು ಅವಕಾಶಗಳಿವೆ.ಯೋಜನೆಗೆ ವರ್ಷ ಪೂರ್ಣ: ವರ್ಷದ ಹಿಂದೆ ಆರ್ಯಾಪು ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗೇಶ್ ಎಂ. ಅವರು ಗಾಜಿನ ಬಾಟಲಿಗಳ ಮತ್ತು ಚೂರುಗಳ ನಿರ್ವಹಣೆಗೆ ಏನಾದರೂ ಉಪಾಯ ಮಾಡಬೇಕು ಎಂದು ನಿರಂತರ ಹುಡುಕಾಟದಲ್ಲಿ ತೊಡಗಿದ್ದರು. ಆ ಸಂದರ್ಭ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಗಾಜುಗಳನ್ನು ಹುಡಿ ಮಾಡಿ ಮರಳು ಮಾಡುವಂತಹ ಯಂತ್ರದ ಬಗ್ಗೆ ಮಾಹಿತಿ ದೊರೆಯಿತು.

ಆದರೆ ಯಂತ್ರ ಖರೀದಿ ಸಾಮರ್ಥ್ಯ ತನ್ನ ಗ್ರಾಮಪಂಚಾಯತ್ ಗೆ ಇಲ್ಲ ಎಂದು ಮನದಟ್ಟು ಮಾಡಿಕೊಂಡ ಇವರು ತಮ್ಮ ಗ್ರಾಮಪಂಚಾಯತ್ ನ ಬ್ಯಾಂಕಿಗ್ ವ್ಯವಹಾರವನ್ನು ನಿರ್ವಹಿಸುತ್ತಿರುವ ಕೆನರಾ ಬ್ಯಾಂಕ್‌ನ್ನು ಸಂಪರ್ಕಿಸಿ ಯೋಜನೆಗೆ ಬೇಕಾದ ಹಣವನ್ನು ತನ್ನ ಸಿಎಸ್‌ಆರ್ ಫಂಡ್ ಮೂಲಕ ರು. ೪.೨೫ ಲಕ್ಷ ಹಣಕಾಸು ಬಿಡುಗಡೆ ಆಯಿತು. ಯೋಜನೆಯಂತೆ ತಮಿಳುನಾಡಿನಿಂದ ಈ ಯಂತ್ರ ತರಿಸಿ, ಗ್ಲಾಸ್ ಗಳನ್ನೆಲ್ಲಾ ಹುಡಿ ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ. ಸಾಮಾನ್ಯವಾಗಿ ಮರಳನ್ನು ಗ್ಲಾಸ್ ಮಾಡಲು ಬಳಸುತ್ತಾರೆ. ಅದೇ ಪ್ರಕಾರ ಗಾಜನ್ನು ಮತ್ತೆ ಮರಳಿನ ರೂಪಕ್ಕೆ ತರುವ ಯೋಜನೆ ಇಲ್ಲಿ ಯಶಸ್ವಿಯಾಗಿದೆ. ವಿವಿಧ ಬಣ್ಣದ ಗ್ಲಾಸ್ ಗಳನ್ನು ಬೇರ್ಪಡಿಸಿ, ಒಂದೇ ಬಣ್ಣದ ಗ್ಲಾಸ್ ಬಾಟಲಿಗಳನ್ನು ಯಂತ್ರದೊಳಗೆ ತುಂಬಿಸಿದ ತಕ್ಷಣವೇ ಗ್ಲಾಸ್ ಮರಳಾಗಿ ಪರಿವರ್ತಿತವಾಗುತ್ತದೆ. ಗಾಜಿನ ಹುಡಿ ಮಾಡುವ ಘಟಕಕ್ಕೆ ಸೋಲಾರ್ ವಿದ್ಯುತ್ ಪೂರೈಸಲಾಗಿದ್ದು, ಘಟಕದ ಪಕ್ಕದಲ್ಲೇ ಸೋಲಾರ್ ಪ್ಯಾನಲ್ ಅಳವಡಿಸಲಾಗಿದೆ.ಯಂತ್ರದ ಮೂಲಕ ಹುಡಿ ಮಾಡಲಾದ ಗಾಜಿನ ಮರಳನ್ನು ಗೋಣಿಗಳಲ್ಲಿ ತುಂಬಿಸಿಡಲಾಗುತ್ತಿದ್ದು, ಬೇರೆ ಬೇರೆ ಬಣ್ಣದ ಬಾಟಲ್‌ನಿಂದ ಬೇರೆ ಬೇರೆ ಬಣ್ಣದ ಹುಡಿ ಮರಳು ರೂಪದಲ್ಲಿ ಸಿಗುತ್ತಿದೆ. ಈ ಹುಡಿಗಳಿಗೆ ಬೇಡಿಕೆಯೂ ಇದೆ. ಗಾಜಿನಲ್ಲಿ ತಯಾರಿಸಿದ ಈ ಮರಳನ್ನು ನೈಸರ್ಗಿಕ ಮರಳಿನೊಂದಿಗೆ ಮಿಶ್ರಣ ಮಾಡಿ ಉಪಯೋಗಿಸುವ ಜೊತೆಗೆ ಮರಳಿಗೆ ಪರ್ಯಾಯವಾಗಿ ಇದನ್ನು ಬಳಸಲು ಯೋಜನೆ ರೂಪಿಸಲಾಗುತ್ತಿದೆ. ಕೋಟ್....ಗಾಜಿನ ಬಾಟಲಿಗಳ ಮತ್ತು ಚೂರುಗಳ ನಿರ್ವಹಣೆಗೆ ಏನಾದರೂ ಉಪಾಯ ಮಾಡಬೇಕು ಎಂದು ನಿರಂತರವಾದ ಹುಡುಕಾಟದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಗಾಜುಗಳನ್ನು ಹುಡಿ ಮಾಡಿ ಮರಳು ಮಾಡುವಂತಹ ಯಂತ್ರದ ಬಗ್ಗೆ ಮಾಹಿತಿ ದೊರೆಯಿತು. ಈ ಮರಳನ್ನು ನೈಸರ್ಗಿಕ ಮರಳಿನೊಂದಿಗೆ ಮಿಶ್ರಣ ಮಾಡಿ ಉಪಯೋಗಿಸುವ ಜೊತೆಗೆ ಮರಳಿಗೆ ಪರ್ಯಾಯವಾಗಿ ಇದನ್ನು ಬಳಸಲು ಸಾಧ್ಯವಿದೆ

-ನಾಗೇಶ್ ಎಂ, ಪಿಡಿಒ, ಆರ್ಯಾಪು ಗ್ರಾ.ಪಂ.

ದೇಶದಲ್ಲಿ ಸಂಗ್ರಹವಾಗುವ ಕಸಗಳ ನಿರ್ವಹಣೆಗಾಗಿಯೇ ಕೇಂದ್ರ ಸರ್ಕಾರ ಸ್ವಚ್ಛ ಭಾರತ್ ಮಿಷನ್ ಎನ್ನುವ ಯೋಜನೆಯನ್ನೇ ಪ್ರಾರಂಭಿಸಿದ್ದು, ಕಸಗಳ ನಿರ್ವಹಣೆಗಾಗಿಯೇ ಕೋಟ್ಯಾಂತರ ರು. ಖರ್ಚು ಮಾಡುತ್ತಿದೆ. ಹಸಿಕಸ, ಒಣಕಸ, ಅಪಾಯಕಾಗಿ ಕಸ, ಆಸ್ಪತ್ರೆ ಕಸ, ಇ-ಕಸ ಹೀಗೆ ಹಲವು ವಿಧದಲ್ಲಿ ಕಸಗಳನ್ನು ವಿಂಗಡಿಸಿ ನಿರ್ವಹಣೆ ಮಾಡಬೇಕಾದ ಜವಾಬ್ದಾರಿ ಎಲ್ಲಾ ಗ್ರಾ.ಪಂ.ಗಳು ವಹಿಸಿಕೊಳ್ಳಬೇಕಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಕರಣಗಳ ಇತ್ಯರ್ಥಕ್ಕೆ ವಿಶೇಷ ಲೋಕ್‌ ಅದಾಲತ್‌
ಸತ್ಪುರುಷರ ಒಡನಾಟದಿಂದ ಬದುಕು ಸಾರ್ಥಕ: ಹಿರಿಯ ನಟ ಶ್ರೀಧರ