ಉಪ್ಪಿನಂಗಡಿ ಶ್ರೀ ಮಾಧವ ಶಿಶು ಮಂದಿರದ ಆಶ್ರಯದಲ್ಲಿ ಮಾತೃ ಮಂಡಳಿಯ ನೇತೃತ್ವದಲ್ಲಿ ೧೮ ನೇ ವರ್ಷದ ಪವಿತ್ರ ಗಂಗಾಪೂಜೆ ಮಾತೃ ಸಂಗಮ ಕಾರ್ಯಕ್ರಮ ನೇತ್ರಾವತಿ ಕುಮಾರಧಾರಾ ನದಿ ಸಂಗಮ ತಟದಲ್ಲಿ ಭಾನುವಾರ ರಾತ್ರಿ ನಡೆಯಿತು.
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಇಲ್ಲಿನ ಶ್ರೀ ಮಾಧವ ಶಿಶು ಮಂದಿರದ ಆಶ್ರಯದಲ್ಲಿ ಮಾತೃ ಮಂಡಳಿಯ ನೇತೃತ್ವದಲ್ಲಿ ೧೮ ನೇ ವರ್ಷದ ಪವಿತ್ರ ಗಂಗಾಪೂಜೆ ಮಾತೃ ಸಂಗಮ ಕಾರ್ಯಕ್ರಮ ನೇತ್ರಾವತಿ ಕುಮಾರಧಾರಾ ನದಿ ಸಂಗಮ ತಟದಲ್ಲಿ ಭಾನುವಾರ ರಾತ್ರಿ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಉಪ್ಪಿನಂಗಡಿ ಶ್ರೀ ರಾಮ ಶಾಲಾ ಪ್ರಾಥಮಿಕ ವಿಭಾಗದ ಮುಖ್ಯೋಪಾದ್ಯಾಯಿನಿ ವಿಮಲಾ ತೇಜಾಕ್ಷಿ , ಸಮಾಜದಲ್ಲಿ ವ್ಯಕ್ತಿ ನಿರ್ಮಾಣ ಕಾರ್ಯದಲ್ಲಾಗಲಿ, ವ್ಯಕ್ತಿಯ ಸಾಧನೆಯ ಮಾರ್ಗದಲ್ಲಾಗಲಿ ಮಾತೃ ಶಕ್ತಿಯ ತ್ಯಾಗ ಪರಿಶ್ರಮಗಳೇ ಪ್ರಧಾನ ಪಾತ್ರವಹಿಸುತ್ತಿದೆ. ಮಾತೆಯರನ್ನು ಗೌರವಿಸುವ ಮೂಲಕ ಅವರು ಮನೆಯ ಮಕ್ಕಳಿಗಾಗಿ ಕುಟುಂಬದ ಶ್ರೇಯಸ್ಸಿಗಾಗಿ ಎಲೆಮರೆಯ ಕಾಯಿಯಂತೆ ತ್ಯಾಗಕ್ಕೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ ರೈತಬಂಧು ಸಂಸ್ಥೆಯ ಮಾಲಕಿ ಉಮಾ ಎಸ್. ನಾಯಕ್, ವ್ಯಕ್ತಿಯನ್ನು ಸಮಾಜಕ್ಕೆ ಶಕ್ತಿಯನ್ನಾಗಿಸುವ ಕಾರ್ಯ ಸಂಸ್ಕಾರ ಶಿಕ್ಷಣದಿಂದ ಮಾತ್ರ ಸಾಧ್ಯ. ಅಂತಹ ಶಿಕ್ಷಣವನ್ನು ನೀಡುತ್ತಾ, ಪ್ರಕೃತಿಯ ಆರಾಧನೆಯಲ್ಲಿ ಪರಮಾತ್ಮನನ್ನು ಕಾಣುವ ಗಂಗಾ ಪೂಜನದಂತಹ ಕಾರ್ಯಗಳು ನವ ಸಮಾಜಕ್ಕೆ ಪ್ರೇರಣಾದಾಯಿಯಾಗಿದೆ ಎಂದರು.
ಹರಿಣಾಕ್ಷಿ ರಾಜೇಶ್ ನಿರೂಪಿಸಿದರು. ಮಾತೃ ಮಂಡಳಿಯ ಅಧ್ಯಕ್ಷೆ ಸುಜಾತಕೃಷ್ಣ ಆಚಾರ್ಯ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪುಷ್ಪಲತಾ ಜನಾರ್ದನ್ ವಂದಿಸಿದರು. ಪ್ರಧಾನ ಸಂಚಾಲಕಿ ಶ್ಯಾಮಲಾ ಶೆಣೈ ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.