ಉಪ್ಪಿನಂಗಡಿ ಕಾಳಿಕಾಂಬಾ ಭಜನಾ ಮಂಡಳಿ 61ನೇ ವಾರ್ಷಿಕ ಮಹಾಸಭೆ

KannadaprabhaNewsNetwork | Published : Oct 22, 2024 12:09 AM

ಸಾರಾಂಶ

ಉಪ್ಪಿನಂಗಡಿ ಕಾಳಿಕಾಂಬಾ ಭಜನಾ ಮಂಡಳಿಯ ೬೧ ನೇ ವರ್ಷದ ಮಹಾ ಸಭೆ ಮಂಡಳಿಯ ಅಧ್ಯಕ್ಷ ಶರತ್ ಕೋಟೆ ಅಧ್ಯಕ್ಷತೆಯಲ್ಲಿ ನಡೆಯಿತು. ಭಜನಾ ಮಂಡಳಿ ಈಗಾಗಲೇ ೬೦ ವರ್ಷ ಪೂರೈಸಿದ ಬಗ್ಗೆ ನಡೆಸಲಾದ ೬೦ ರ ಸಂಭ್ರಮ ಕಾರ್ಯಕ್ರಮದ ಬಗ್ಗೆ ಚರ್ಚೆ ಗಳು ನಡೆದು, ವರದಿ ಹಾಗೂ ಲೆಕ್ಕಪತ್ರಗಳ ಮಂಡನೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಇಲ್ಲಿನ ಕಾಳಿಕಾಂಬಾ ಭಜನಾ ಮಂಡಳಿಯ ೬೧ ನೇ ವರ್ಷದ ಮಹಾ ಸಭೆ ಮಂಡಳಿಯ ಅಧ್ಯಕ್ಷ ಶರತ್ ಕೋಟೆ ಅಧ್ಯಕ್ಷತೆಯಲ್ಲಿ ನಡೆಯಿತು.

ಭಜನಾ ಮಂಡಳಿ ಈಗಾಗಲೇ ೬೦ ವರ್ಷ ಪೂರೈಸಿದ ಬಗ್ಗೆ ನಡೆಸಲಾದ ೬೦ ರ ಸಂಭ್ರಮ ಕಾರ್ಯಕ್ರಮದ ಬಗ್ಗೆ ಚರ್ಚೆ ಗಳು ನಡೆದು, ವರದಿ ಹಾಗೂ ಲೆಕ್ಕಪತ್ರಗಳ ಮಂಡನೆ ಮಾಡಲಾಯಿತು. ಆರುವತ್ತರ ಸಂಭ್ರಮದ ನಿಮಿತ್ತ ೬೦ ಮನೆಗಳಲ್ಲಿ ನಡೆದ ಭಜನಾ ಕಾರ್ಯಕ್ರಮ, ಅದರ ಮೂಲಕ ನಡೆದ ಜಾಗೃತಿ ಕಾರ್ಯಕ್ರಮ, ಲಭಿಸಿದ ಫಲಶ್ರುತಿ ಬಗ್ಗೆ ವಿಚಾರ ವಿಮರ್ಶೆ ನಡೆಸಲಾಯಿತು. ಹೊಸದಾಗಿ ಸೇರ್ಪಡೆಗೊಳ್ಳಲಿಚ್ಚಿಸುವ ಭಜನಾ ಸೇವಾದಾರರ ಸೇರ್ಪಡೆಗೆ ಒಪ್ಪಿಗೆ ಸೂಚಿಸಲಾಯಿತು.

ಪ್ರಧಾನ ಕಾರ್ಯದರ್ಶಿ ಮಾಧವ ಆಚಾರ್ಯ, ಉಪಾಧ್ಯಕ್ಷ ಕುಮಾರ ಕಿಶನ್, ಜೊತೆ ಕಾರ್ಯದರ್ಶಿ ಪ್ರಶಾಂತ್ ನೆಕ್ಕಿಲಾಡಿ, ಕೋಶಾಧಿಕಾರಿ ಯತೀಶ್ ಶೆಟ್ಟಿ ಹಾಜರಿದ್ದರು.

ಮಂಡಳಿಯ ಮಾಜಿ ಅಧ್ಯಕ್ಷ ಐ ಪುರುಷೋತ್ತಮ ನಾಯಕ್, ಉದಯ ಕುಮಾರ್, ಕೆ ಜಗದೀಶ್ ಶೆಟ್ಟಿ, ಎನ್ ಹರೀಶ್ ನಾಯಕ್, ಕೆ ಸುಧಾಕರ ಶೆಟ್ಟಿ, ಐ ಚಿದಾನಂದ ನಾಯಕ್, ಪ್ರಮುಖರಾದ ಅಶೋಕ್ ಕುಮಾರ್ ರೈ ಎ, ಐ ಪುಷ್ಪಾಕರ್ ನಾಯಕ್, ವೇಣುಗೋಪಾಲ, ಕಿಶೋರ್ ಜೋಗಿ, ಜಯಪ್ರಕಾಶ್ ಶೆಟ್ಟಿ, ಐ ಕೇಶವ ನಾಯಕ್, ಸಚಿನ್ ಕೋಟೆ, ಶಶಿಧರ ಗೌಡ ಅಂಬೆಲ, ಕಂಗ್ವೆ ವಿಶ್ವನಾಥ ಶೆಟ್ಟಿ, ಸುಂದರ ಆದರ್ಶನಗರ, ಹರಿರಾಮಚಂದ್ರ, ಕೃಷ್ಣ ಕೋಟೆ, ಗಂಗಾಧರ ಟೈಲರ್, ಎನ್ ಗೋಪಾಲ ಹೆಗ್ಡೆ , ಸುಜಯ್ ಶೆಟ್ಟಿ, ಐ ಜಯಂತ ನಾಯಕ್, ರಾಧಕೃಷ್ಣ ಭಟ್ ಬೊಳ್ಳಾವು, ರವಿಕಿರಣ್ ಕೊಯಿಲ, ಸುರ್ಯ ಸೀತಾರಾಮ ಶೆಟ್ಟಿ, ಶಶಿಕಲಾ ಭಾಸ್ಕರ್, ಉಮೇಶ್ ಆಚಾರ್ಯ, ಚಂದ್ರಹಾಸ ಹೆಗ್ಡೆ, ಮಾಧವ ಮಯ್ಯ ,ಕೃಷ್ಣ ಪ್ರಸಾದ್ ದೇವಾಡಿಗ, ಸೂರಜ್ ಹೆಗ್ಡೆ ಮೊದಲಾದವರು ಭಾಗವಹಿಸಿದ್ದರು.

Share this article