ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನ: ೧೫ರಿಂದ ಕಾಲಾವಧಿ ಜಾತ್ರೆ

KannadaprabhaNewsNetwork |  
Published : Feb 14, 2026, 03:15 AM IST
ಇಲ್ಲಿನ ಮಹತೋಭಾರ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದಲ್ಲಿ ಫೆ.೧೫ರಿಂದ ಆರಂಭಗೊAಡು ಮಾ.೨೪ರ ತನಕ ಕಾಲಾವಧಿ ಜಾತ್ರೆ, ಮಖೆ ಜಾತ್ರೆ ಮತ್ತು ಉತ್ಸವಾದಿಗಳು | Kannada Prabha

ಸಾರಾಂಶ

ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದಲ್ಲಿ ಫೆ. 15ರಿಂದ ಆರಂಭಗೊಂಡು ಮಾ.೨೪ರ ತನಕ ಕಾಲಾವಧಿ ಜಾತ್ರೆ, ಮಖೆ ಜಾತ್ರೆ ಮತ್ತು ಉತ್ಸವಾದಿಗಳು ವೇ.ಮೂ. ಕೆಮ್ಮಿಂಜೆ ನಾಗೇಶ ತಂತ್ರಿ ನೇತೃತ್ವದಲ್ಲಿ, ಪವಿತ್ರಪಾಣಿ ಕರಾಯ ವಿಷ್ಣುಮೂರ್ತಿ ಕುದ್ದಣ್ಣಾಯ ಅವರ ಉಪಸ್ಥಿತಿಯಲ್ಲಿ ಜರುಗಲಿದೆ

ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದಲ್ಲಿ ಫೆ. 15ರಿಂದ ಆರಂಭಗೊಂಡು ಮಾ.೨೪ರ ತನಕ ಕಾಲಾವಧಿ ಜಾತ್ರೆ, ಮಖೆ ಜಾತ್ರೆ ಮತ್ತು ಉತ್ಸವಾದಿಗಳು ವೇ.ಮೂ. ಕೆಮ್ಮಿಂಜೆ ನಾಗೇಶ ತಂತ್ರಿ ನೇತೃತ್ವದಲ್ಲಿ, ಪವಿತ್ರಪಾಣಿ ಕರಾಯ ವಿಷ್ಣುಮೂರ್ತಿ ಕುದ್ದಣ್ಣಾಯ ಅವರ ಉಪಸ್ಥಿತಿಯಲ್ಲಿ ಜರುಗಲಿದೆ ಎಂದು ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ರಾಧಾಕೃಷ್ಣ ನಾಯ್ಕ್‌ ತಿಳಿಸಿದರು.

ಮಹಾಶಿವರಾತ್ರಿ ಮಖೆ ಕೂಟ: ದೇವಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. ೧೫ರಂದು ಮಹಾಶಿವರಾತ್ರಿ ೧ನೇ ಮಖೆಕೂಟ ಜರುಗಲಿದ್ದು, ರಾತ್ರಿ ೮ರಿಂದ ೯ರವರೆಗೆ ರುದ್ರಪಾರಾಯಣ, ಬಲಿ ಹೊರಟು ಉತ್ಸವ, ಮಹಾಪೂಜೆ ನಡೆಯಲಿದೆ.

ಫೆ. ೧೬ರಂದು ಪ್ರಾತಃಕಾಲ ತೀರ್ಥಸ್ನಾನ ನಡೆಯಲಿದ್ದು, ಬೆಳಗ್ಗೆ ೬:೩೦ರಿಂದ ಬಲಿ ಹೊರಟು ರಥೋತ್ಸವ, ಉತ್ಸವ, ದರ್ಶನ ಬಲಿ, ಬಟ್ಟಲುಕಾಣಿಕೆ, ಮಹಾಪೂಜೆ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್‍ಯಕ್ರಮದ ಅಂಗವಾಗಿ ಫೆ.೧೫ರಂದು ಸಂಜೆ ೬:೩೦ರಿಂದ ಶಿವಲೀಲಾಮೃತ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.ಫೆ.೨೪ರಂದು ಕುಂಭಮಾಸ ೧೨ರ ಶ್ರೀ ದೇವರ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಪೂರ್ವಾಹ್ನ ಗಣಪತಿ ಹೋಮ, ಶತರುದ್ರಾಭಿಷೇಕ, ಸೀಯಾಳಾಭಿಷೇಕ, ಚಂಡಿಕಾ ಹೋಮ, ಅನ್ನಸಂತರ್ಪಣೆ ನಡೆಯಲಿದೆ. ಫೆ.೨೮ರಂದು ಬೆಳಗ್ಗೆ ೭:೩೦ಕ್ಕೆ ಧ್ವಜಾರೋಹಣ, ಸಂಜೆ ೭ರಿಂದ ಉತ್ಸವ ನಡೆಯಲಿದೆ. ಅದೇ ದಿನ ಉಪ್ಪಿನಂಗಡಿಯ ಟೀಂ ದಕ್ಷಿಣ ಕಾಶಿ ವತಿಯಿಂದ ೬ ವರ್ಷದ ಉಬಾರ್ ಉತ್ಸವ ನಡೆಯಲಿದೆ.

ಹುಣ್ಣಿಮೆ ಮಖೆಕೂಟ: ಮಾ. ೧ರಂದು ಬೆಳಗ್ಗೆ ಉತ್ಸವ, ಸಂಜೆ ೭ರಿಂದ ಉತ್ಸವ ನಡೆಯಲಿದೆ. ಮಾ.೨ರಂದು ಹುಣ್ಣಿಮೆ ೨ನೇ ಮಖೆಕೂಟ ನಡೆಯಲಿದ್ದು, ರಾತ್ರಿ ೮:೩೦ರಿಂದ ಬಲಿ ಹೊರಟು ಉತ್ಸವ, ಬ್ರಹ್ಮರಥ ಸೇವೆ, ರಥೋತ್ಸವ, ಬಲಿ, ಮಹಾಪೂಜೆ ನಡೆಯಲಿದೆ. ಮಾ.೩ರಂದು ಪ್ರಾತಃಕಾಲ ತೀರ್ಥಸ್ನಾನ, ಬೆಳಗ್ಗೆ ೭:೩೦ರಿಂದ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಕಾಳಿ ಅಮ್ಮನವರ ನೇಮಕ್ಕೆ ಪಡಿಯಕ್ಕಿ ಕೊಡುವುದು, ಮಹಾಪೂಜೆ ನಡೆಯಲಿದೆ. ಚಂದ್ರಗ್ರಹಣದ ಪ್ರಯುಕ್ತ ಆ ದಿನ ಮಧ್ಯಾಹ್ನ ಅನ್ನಸಂತರ್ಪಣೆ ಇರುವುದಿಲ್ಲ. ರಾತ್ರಿ ೭ರಿಂದ ಉತ್ಸವ ನಡೆಯಲಿದೆ. ಸಾಂಸ್ಕೃತಿಕ ಕಾರ್‍ಯಕ್ರಮದ ಅಂಗವಾಗಿ ಮಾ. ೨ರಂದು ಸಂಜೆ ೬:೩೦ರಿಂದ ಶ್ರೀ ತುಳಸಿ ಪೌರಣಿಕ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ರಾತ್ರಿ ೯ರಿಂದ ಸಿಡಿಮದ್ದು ಪ್ರದರ್ಶನ ನಡೆಯಲಿದೆ. ಮಾ.೪ರಂದು ಬೆಳಗ್ಗೆ ಉತ್ಸವ, ಸಂಜೆ ೭ರಿಂದ ಉತ್ಸವ ನಡೆಯಲಿದೆ. ಮಾ. ೫ರಂದು ಬೆಳಗ್ಗೆ ಉತ್ಸವ, ಸಂಜೆ ೭ರಿಂದ ಉತ್ಸವ, ಶ್ರೀ ದೇವರ ಶಯನೋತ್ಸವ ನಡೆಯಲಿದೆ ಎಂದರು. ಮಾ.೬ರಂದು ಬೆಳಗ್ಗೆ ೬ಕ್ಕೆ ಕವಾಟೋದ್ಘಾಟನೆ, ಸಂಜೆ ೭ರಿಂದ ದೇವರು ಬಲಿ ಹೊರಟು ರಥಬೀದಿಯಿಂದ ಹಳೆ ಬಸ್ ನಿಲ್ದಾಣದವರೆಗೆ ಹೋಗಿ ಕಟ್ಟೆಪೂಜೆಯಾಗಿ ಸರಕಾರಿ ಪ್ರಾಥಮಿಕ ಶಾಲಾ ಮಾರ್ಗವಾಗಿ ಬಂದು ಸಂಗಮದಲ್ಲಿ ಅವಭೃತ ಸ್ನಾನವಾಗಿ ಧ್ವಜಾವರೋಹಣ ನಡೆಯಲಿದೆ. ಮಾ. ೬ರಂದು ರಾತ್ರಿ ಗೀತ್- ಸಂಗೀತ್ ನಡೆಯಲಿದೆ ಎಂದು ತಿಳಿಸಿದರು.ಅಷ್ಟಮಿ ಮಖೆ ಕೂಟ: ಮಾ.೧೦ರಂದು ಅಷ್ಟಮಿ ೩ನೇ ಮಖೆಕೂಟ ನಡೆಯಲಿದ್ದು, ರಾತ್ರಿ ೮:೩೦ರಿಂದ ಬಲಿ ಹೊರಟು ಉತ್ಸವ, ರಥೋತ್ಸವ, ಬಲಿ, ಮಹಾಪೂಜೆ ನಡೆಯಲಿದೆ. ಮಾ. ೧೧ರಂದು ಪ್ರಾತಃಕಾಲ ತೀರ್ಥಸ್ನಾನ, ಬೆಳಗ್ಗೆ ೭:೩೦ರಿಂದ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಕಾಳಿ ಅಮ್ಮನವರ ನೇಮಕ್ಕೆ ಪಡಿಯಕ್ಕಿ ಕೊಡುವುದು, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್‍ಯಕ್ರಮದ ಅಂಗವಾಗಿ ಮಾ. ೧೦ರಂದು ಸಂಜೆ ೬ರಿಂದ ನೃತ್ಯಾಭಿಷೇಕಂ ನಡೆಯಲಿದೆ. ರಾತ್ರಿ ೯ರಿಂದ ಡಬ್ಬಲ್ ಗೇಮ್ ರಡ್ಡ್ ಮೋನೆದ ನಡುಟು... ತುಳು ಸಾಮಾಜಿಕ ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.

ಶ್ರೀ ಮಹಾಕಾಳಿ ಅಮ್ಮನವರ ಮೆಚ್ಚಿ:ಮಾ.೨೦ರಂದು ರಾತ್ರಿ ಶ್ರೀ ಮಹಾಕಾಳಿ ಅಮ್ಮನವರ ಮೆಚ್ಚಿ ನಡೆಯಲಿದ್ದು, ರಾತ್ರಿ ೯ರಿಂದ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ೭:೩೦ರಿಂದ ವಾದ್ಯಗೋಷ್ಠಿ ನಡೆಯಲಿದೆ. ರಾತ್ರಿ ೮ರಿಂದ ಭಕ್ತಿ ಭಾನ ಗಾನ ಸಂಭ್ರಮ ನಡೆಯಲಿದೆ.ದೊಂಪದ ಬಲಿ ನೇಮೋತ್ಸವ: ಮಾ.೨೪ರಂದು ರಾತ್ರಿ ೮ಕ್ಕೆ ಕದಿಕ್ಕಾರು ಬೀಡಿನಿಂದ ಭಂಡಾರ ಬಂದು ದೇವಾಲಯದ ಸಂತೆಮಜಲಿನಲ್ಲಿ ದೊಂಪದ ಬಲಿ ನೇಮೋತ್ಸವ ನಡೆಯಲಿದೆ. ರಾತ್ರಿ ಓಲ್ ತತ್ತ್ಂಡ್ ತುಳು ಸಾಮಾಜಿಕ ಹಾಸ್ಯಮಯ ನಾಟಕ ನಡೆಯಲಿದೆ ಎಂದು ಅವರು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಕಾಲದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯಾಗಲಿ
ಕಾರ್ಮಿಕ ದ್ರೋಹವನ್ನು ಸಹಿಸಲಾಗದು: ಬಿ.ಎಂ. ಭಟ್‌