ಯುಪಿಎಸ್ ಬ್ಯಾಟರಿ ಕಳ್ಳರ ಬಂಧನ: ₹೩೦.೬೯ ಲಕ್ಷ ಮೊತ್ತದ ಸ್ವತ್ತು ವಶಕ್ಕೆ

KannadaprabhaNewsNetwork |  
Published : Oct 16, 2024, 12:38 AM IST
೧೫ ಬೀರೂರು ೧ಬೀರೂರಿನ ವಿವಿಧ ಶಾಲಾ ಕಾಲೇಜುಗಳಲ್ಲಿ ಯುಪಿಎಸ್ ಮತ್ತಿತರ ವಸ್ತುಗಳನ್ನು ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸಿ ವಸ್ತುಗಳನ್ನು ವಶಪಡಿಸಿಕೊಂಡಿರುವುದು. , ತರೀಕೆರೆ ಡಿವೈಎಸ್‌ಪಿ ಹಾಲಮೂರ್ತಿರಾವ್ ವೈ.ಎಸ್. ಮಾರ್ಗದರ್ಶನದಲ್ಲಿ ಬೀರೂರು ಸಿಪಿಐ ಎಸ್.ಎನ್.ಶ್ರೀಕಾಂತ್, ಪಿಎಸ್‌ಐ ಸಜಿತ್ ಕುಮಾರ್ ಇದ್ದರು. | Kannada Prabha

ಸಾರಾಂಶ

ಬೀರೂರು, ಶಾಲಾ, ಕಾಲೇಜುಗಳಲ್ಲಿ ಯುಪಿಎಸ್ ಬ್ಯಾಟರಿಗಳನ್ನು ಕಳವು ಮಾಡುತ್ತಿದ್ದ ಮೂವರು ಅಂತರ ಜಿಲ್ಲಾ ಕಳ್ಳರನ್ನು ಬಂಧಿಸಿರುವ ಬೀರೂರು ಠಾಣೆ ಪೊಲೀಸರು ಅವರಿಂದ ₹೩೦.೬೯ ಲಕ್ಷ ಮೌಲ್ಯದ ಯುಪಿಎಸ್ ಬ್ಯಾಟರಿಗಳು, ಗೂಡ್ಸ್ ವಾಹನ ಹಾಗೂ ಇನ್ವರ್ಟರನ್ನು ವಶಕ್ಕೆ ಪಡೆದಿದ್ದಾರೆ.

ಬೀರೂರು ಪೋಲಿಸರಿಂದ ಮಿಂಚಿನ ಕಾರ್ಯಾಚರಣೆ

ಕನ್ನಡಪ್ರಭವಾರ್ತೆ,ಬೀರೂರು

ಶಾಲಾ, ಕಾಲೇಜುಗಳಲ್ಲಿ ಯುಪಿಎಸ್ ಬ್ಯಾಟರಿಗಳನ್ನು ಕಳವು ಮಾಡುತ್ತಿದ್ದ ಮೂವರು ಅಂತರ ಜಿಲ್ಲಾ ಕಳ್ಳರನ್ನು ಬಂಧಿಸಿರುವ ಬೀರೂರು ಠಾಣೆ ಪೊಲೀಸರು ಅವರಿಂದ ₹೩೦.೬೯ ಲಕ್ಷ ಮೌಲ್ಯದ ಯುಪಿಎಸ್ ಬ್ಯಾಟರಿಗಳು, ಗೂಡ್ಸ್ ವಾಹನ ಹಾಗೂ ಇನ್ವರ್ಟರನ್ನು ವಶಕ್ಕೆ ಪಡೆದಿದ್ದಾರೆ.ಕಳೆದ ತಿಂಗಳು ಬೀರೂರಿನ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಕೆಎಲ್‌ಕೆ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ವಿಭಾಗಗಳಲ್ಲಿ ಸಿಸಿಟಿವಿ ಡಿವಿಆರ್, ೬೩ ಯುಪಿಎಸ್ ಬ್ಯಾಟರಿ ಕಳವಾಗಿರುವ ಬಗ್ಗೆ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಜಾಡು ಹಿಡಿದ ಪೊಲೀಸರು ಖಚಿತ ಮಾಹಿತಿ ಮೇರೆಗೆ ಮಂಡ್ಯದ ರವಿಕುಮಾರ್, ಮೈಸೂರು ಜಿಲ್ಲೆ ಊರುಗಳ್ಳಿ ಗ್ರಾಮದ ಪುನೀತ್ ಕುಮಾರ್ ಮತ್ತು ಮಂಡ್ಯದ ಶಶಿಕುಮಾರ್ ಎಂಬುವವರನ್ನು ಬಂಧಿಸಿದ್ದಾರೆ.

ಖದೀಮರ ತಂಡ ಬೀರೂರು, ಅರಸೀಕೆರೆ, ಗುಬ್ಬಿ, ಹುಳಿಯಾರು, ಶಿರಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಈ ಆರೋಪಿಗಳ ವಿರುದ್ಧ ದೂರು ದಾಖಲಾಗಿವೆ. ಆರೋಪಿಗಳು ವಿವಿಧ ಶಾಲಾ ಕಾಲೇಜುಗಳಲ್ಲಿ ಕಳವು ಮಾಡಿದ್ದ ₹೧೫.೪೩ ಲಕ್ಷ ಮೌಲ್ಯದ ಯುಪಿಎಸ್ ಬ್ಯಾಟರಿಗಳು, ೮.೫೦ಲಕ್ಷ ಮೌಲ್ಯದ ಗೂಡ್ಸ್ ವಾಹನ, ₹೮೮ ಸಾವಿರ ಮೌಲ್ಯದ ಇನ್ವರ್ಟರ್ ಗಳು, ಟಿವಿ ಮತ್ತು ಆಯುಧಗಳು ಸೇರಿದಂತೆ ₹೩೦.೬೯ ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.ಎಸ್‌ಪಿ ವಿಕ್ರಂ ಅಮಟೆ, ಅಡಿಷನಲ್ ಎಸ್‌ಪಿ ಜಿ.ಕೃಷ್ಣಮೂರ್ತಿ, ತರೀಕೆರೆ ಡಿವೈಎಸ್‌ಪಿ ಹಾಲಮೂರ್ತಿರಾವ್ ವೈ.ಎಸ್. ಮಾರ್ಗದರ್ಶನದಲ್ಲಿ ಬೀರೂರು ಸಿಪಿಐ ಎಸ್.ಎನ್.ಶ್ರೀಕಾಂತ್, ಪಿಎಸ್‌ಐ ಸಜಿತ್ ಕುಮಾರ್ ಜಿ.ಆರ್, ಅಜ್ಜಂಪುರ ಪಿಎಸ್‌ಐ ಡಿ.ವಿ.ತಿಪ್ಪೇಶ್ ನೇತೃತ್ವದಲ್ಲಿ ಅಪರಾಧ ವಿಭಾಗದ ಸಿಬ್ಬಂದಿ ಡಿ.ವಿ.ಹೇಮಂತ್ ಕುಮಾರ್, ಬಿ.ಪಿ.ಕೃಷ್ಣಮೂರ್ತಿ, ಬಿ.ಎಚ್.ರಾಜಪ್ಪ, ವಿ.ಟಿ.ಶಿವಕುಮಾರ್, ಕೆ.ದುರ್ಗಪ್ಪ, ತಾಂತ್ರಿಕ ವಿಭಾಗದ ಸಿಬ್ಬಂದಿ ನಯಾಜ್ ಅಂಜುಂ ಮತ್ತು ರಬ್ಬಾನಿ ತನಿಖಾ ತಂಡ ರಚಿಸಲಾಗಿತ್ತು.೧೫ ಬೀರೂರು ೧ಬೀರೂರಿನ ವಿವಿಧ ಶಾಲಾ ಕಾಲೇಜುಗಳಲ್ಲಿ ಯುಪಿಎಸ್ ಮತ್ತಿತರ ವಸ್ತುಗಳನ್ನು ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸಿ ವಸ್ತುಗಳನ್ನು ವಶಪಡಿಸಿ ಕೊಂಡಿರುವುದು. ತರೀಕೆರೆ ಡಿವೈಎಸ್‌ಪಿ ಹಾಲಮೂರ್ತಿರಾವ್ ವೈ.ಎಸ್. ಮಾರ್ಗದರ್ಶನದಲ್ಲಿ ಬೀರೂರು ಸಿಪಿಐ ಎಸ್.ಎನ್. ಶ್ರೀಕಾಂತ್, ಪಿಎಸ್‌ಐ ಸಜಿತ್ ಕುಮಾರ್ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ