ಬಸವನಗೌಡ್ರು ಮಾಹಿತಿ । ಕಕ್ಕರಗೊಳ್ಳದಲ್ಲಿ ದೇವಿಯ ನೂತನ ದೇಗುಲ ಆರಂಭ । ಇಡೀ ಊರಿಗೆ ಬೇಲಿ ಹಾಕಿ ಉತ್ಸವ
ಶತಮಾನಗಳ ಇತಿಹಾಸ ಹೊಂದಿರುವ ತಾಲೂಕಿನ ಕಕ್ಕರಗೊಳ್ಳ ಗ್ರಾಮ ದೇವತೆ ಶ್ರೀ ಊರಮ್ಮ ದೇವಿ ದೇವಸ್ಥಾನದ ಲೋಕಾರ್ಪಣೆ, ದೇವತೆಯ ನೂತನ ದೇವಸ್ಥಾನಕ್ಕೆ ಸ್ಥಳಾಂತರ ಹಾಗೂ ಕಳಸಾರೋಹಣ ಸಮಾರಂಭ ಏ.28ರಿಂದ 30ರವರೆಗೆ ಗ್ರಾಮದಲ್ಲಿ ನಡೆಯಲಿವೆ ಎಂದು ಗ್ರಾಮದ ಹಿರಿಯರಾದ ಕೆ.ಜಿ.ಬಸವನಗೌಡ್ರು ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುಮಾರು 3.5 ಕೋಟಿ ರು. ವೆಚ್ಚದಲ್ಲಿ ಶ್ರೀ ದ್ಯಾಮಮ್ಮ ದೇವಿ (ಶ್ರೀ ಊರಮ್ಮ ದೇವಿ) ದೇವಸ್ಥಾನ ಲೋಕಾರ್ಪಣೆ ಹಿನ್ನೆಲೆಯಲ್ಲಿ ಏ.28ರ ಮಧ್ಯಾಹ್ನ 3ಕ್ಕೆ ಶ್ರೀ ದೇವಿಯೊಂದಿಗೆ ಗ್ರಾಮ ದೇವರುಗಳನ್ನು ಒಡಗೂಡಿ ಗಂಗಾಪೂಜೆ, ಅದೇ ರಾತ್ರಿ 7.30ಕ್ಕೆ ಯಾಗ ಮಂಟಪದಿಂದ ದೇವಿಯ ಪ್ರವೇಶ ಕಾರ್ಯ ನಡೆಯಲಿದೆ ಎಂದರು.ಏ.29ರ ಬೆಳಿಗ್ಗೆ 7ಕ್ಕೆ ನವಗ್ರಹ ಆರಾಧನೆ, ವಾಸ್ತುಪೂಜೆ, ದಿಕ್ಪಾಕರ ಪೂಜೆ, ಇತರೆ ಧಾರ್ಮಿಕ ಕೈಂಕರ್ಯ ನೆರವೇರಲಿದೆ. ಸಂಜೆ 4.30ರಿಂದ ಹೋಮ ಹವನ, ವಾಸ್ತು ಪೂಜೆ, ಗಣಹೋಮ, ಲಘು ಚಂಡಿಕಾ ಹೋಮ, ದುರ್ಗಾ ಹೋಮ, ಶ್ರೀ ಸೂಕ್ತ ಹೋಮ ಇತ್ಯಾದಿ ನಡೆಯಲಿದೆ. ರಾತ್ರಿ 9ಕ್ಕೆ ನಂತರ ಧಾರವಾಡ ಜಿಲ್ಲೆ ಕಲಘಟಗಿ ತಾ. ಬಸವನಕೊಪ್ಪದ ಶ್ರೀ ಬಸವೇಶ್ವರ ಭಜನಾ ತಂಡ, ಕಣವಿ ಹೊನ್ನಾಪುರದ ಹಾ.ಮಾ.ಮಹಾಂತೇಶ ಬ.ಹಡಪದ ತಂಡ, ಡಗ್ಗಾ ಮೈಲಾರಿ ಆಯಟ್ಟಿ ಶ್ರೀ ಮಾರುತಿ ಭಜನಾ ಸಂಘ, ಹಾ.ಮಾ. ಮಾರುತಿ ಕ. ಹಳಕಟ್ಟಿ ಡಗ್ಗಾ ಜಗದೀಶ ಹರ್ತಿ ತಂಡದಿಂದ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಮೇ.1, ಕಕ್ಕರಗೊಳ್ಳ ಶ್ರೀ ಬಸವ ಜಯಂತಿ, ಶರಣ ಸಮ್ಮೇಳನ:
ಅಂದು ಬೆಳಿಗ್ಗೆ 11ಕ್ಕೆ ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಹೊಸದುರ್ಗದ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ, ನರಸೀಪುರದ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ಚಿತ್ರದುರ್ಗದ ಶ್ರೀ ಮಡಿವಾಳ ಮಾಚಿದೇವ ಸ್ವಾಮೀಜಿ, ಬಸವ ಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಬಸವ ನಾಗಿದೇವ ಸ್ವಾಮೀಜಿ, ಮುಸ್ಲಿಂ ಧರ್ಮಗುರು ಇಬ್ರಾಹಿಂ ಸಖಾಫಿ ಸಾನ್ನಿಧ್ಯದಲ್ಲಿ ಗ್ರಾಮದ ಮುಖಂಡ ಕೆ.ಜಿ.ಬಸವನಗೌಡ್ರು ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಲಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಇಡೀ ಊರಿಗೆ ಬೇಲಿ ಹಾಕಿ ಜಾತ್ರೆ