ಭಾರತೀಯ ನೆಲದಲ್ಲಿ ಉರ್ದು ಭಾಷೆಗಿದೆ ಪುರಾತನ ಇತಿಹಾಸ: ತಮ್ಮಯ್ಯ

KannadaprabhaNewsNetwork |  
Published : Nov 26, 2025, 02:00 AM IST
ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಭಾನುವಾರ ನಡೆದ ಉರ್ದು ರ್‍ಯಾಲಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಾಸಕ ಎಚ್‌.ಡಿ. ತಮ್ಮಯ್ಯ ಅವರು ಉದ್ಘಾಟಿಸಿದರು. | Kannada Prabha

ಸಾರಾಂಶ

ಚಿಕ್ಕಮಗಳೂರುಭಾರತೀಯ ನೆಲದಲ್ಲಿ ಉರ್ದು ಭಾಷೆಗೆ 600 ವರ್ಷಗಳ ಇತಿಹಾಸವಿದೆ. ಮಾತೃ ಭಾಷೆ ಉರ್ದುವನ್ನು ಮುಸ್ಲೀಂ ಜನಾಂಗ ಪ್ರೀತಿಸಿದಂತೆ ಕನ್ನಡ ಭಾಷೆಯನ್ನು ಅಪ್ಪಿ ಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ಉರ್ದು ರ್‍ಯಾಲಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಭಾರತೀಯ ನೆಲದಲ್ಲಿ ಉರ್ದು ಭಾಷೆಗೆ 600 ವರ್ಷಗಳ ಇತಿಹಾಸವಿದೆ. ಮಾತೃ ಭಾಷೆ ಉರ್ದುವನ್ನು ಮುಸ್ಲೀಂ ಜನಾಂಗ ಪ್ರೀತಿಸಿದಂತೆ ಕನ್ನಡ ಭಾಷೆಯನ್ನು ಅಪ್ಪಿ ಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.ನಗರದ ಕುವೆಂಪು ಕಲಾಮಂದಿರದಲ್ಲಿ ಭಾನುವಾರ ಉರ್ದು ಅರಬ್ ಚಿಕ್ಕಮಗಳೂರು ಮತ್ತು ಕರ್ನಾಟಕ ಉರ್ದು ಅಕಾಡೆಮಿ ಯಿಂದ ಆಯೋಜಿಸಿದ್ಧ ಉರ್ದು ರ್‍ಯಾಲಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿವಿಧತೆಯಲ್ಲಿ ಏಕತೆ, ಸರ್ವ ಧರ್ಮದ ಕೂಡಿದಜಾತ್ಯಾತೀತ ದೇಶ ಭಾರತ. ಇಲ್ಲಿನ ಪ್ರಜೆಗಳು ಮೊದಲು ಭಾರತೀಯರಾಗಬೇಕು. ನಾಡು, ನುಡಿಯ ಬಗ್ಗೆ ಅಪಾರ ಅಭಿಮಾನವಿರುವ ಮೂಲಕ ಮಾತೃ ಭಾಷೆಗೆ ಪ್ರಾಮುಖ್ಯತೆ ನೀಡುವುದು ಕರ್ತವ್ಯ ಎಂದು ಹೇಳಿದರು.

ಮುಸ್ಲೀಂ ಬಾಂಧವರಿಗೆ ಮಾತೃಭಾಷೆ ಉರ್ದು, ನಾಡಿನಲ್ಲಿ ವ್ಯವಹರಿಸಲು ಕನ್ನಡ ಕಡ್ಡಾಯವಿರಬೇಕು. ಹೊರದೇಶ ಅಥವಾ ರಾಜ್ಯಗಳಲ್ಲಿ ಕೆಲಸಕ್ಕೆ ತೆರಳಲು ಆಂಗ್ಲಭಾಷೆಯು ಅವಶ್ಯಕ. ಹೀಗಾಗಿ ಎಲ್ಲಾ ಭಾಷೆಗಳನ್ನು ಕಲಿಯುವುದು ತಪ್ಪಲ್ಲ. ಆದರೆ, ತಾಯಿ ಹಾಗೂ ಆಡು ಭಾಷೆಗೆ ಹೆಚ್ಚು ಒತ್ತು ನೀಡಬೇಕು ಎಂದರು.ಜಿಲ್ಲೆಯಲ್ಲಿ ಉರ್ದು ಭಾಷೆ ಕಲಿಕಾಸ್ತರಿಗೆ ಹೆಚ್ಚಿನ ಮಹತ್ವ ನೀಡಲು ಸಮಾಜದ ಮನವಿ ಮೇರೆಗೆ ರಾಜ್ಯ ಸರ್ಕಾರ ಹಾಗೂ ಸಚಿವ ಜಮೀರ್ ಅಹ್ಮದ್‌ರೊಂದಿಗೆ ಚರ್ಚಿಸಿ ಉರ್ದು ಕಲಿಕೆಗಾಗಿ ಸಮುದಾಯ ಭವನ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ಭರವಸೆ ನೀಡಿದರು.ನಾಡಿನ ಕಾಯಕ ಯೋಗಿ ಬಸವಣ್ಣ, ಮಹಮ್ಮದ್ ಪೈಗಂಬರ್ ತತ್ವಾದರ್ಶಗಳು ಎಲ್ಲವೂ ಒಂದೇ. ಹಸಿದವರಿಗೆ ಉಣ ಬಡಿಸುವುದು. ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡುವುದು. ಹಾಗಾಗಿ ಎಲ್ಲರೂ ಒಟ್ಟಾಗಿ ಮಹಾ ಪುರುಷರ ಆದರ್ಶಗಳನ್ನು ಮಾತಿಗೆ ಸೀಮಿತಗೊಳಿಸದೇ ಆಚರಣೆಗೆ ತರುವ ಕಾರ್ಯ ಮಾಡಬೇಕಿದೆ ಎಂದು ತಿಳಿಸಿದರು.ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮೊಹಮ್ಮದ್ ನಯಾಜ್ ಮಾತನಾಡಿ ಇತ್ತೀಚಿನ ದಿನಮಾನದಲ್ಲಿ ಉರ್ದು ಕಲಿಕೆಗೆ ಯುವ ಸಮೂಹ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಅದಕ್ಕಾಗಿ ಭಾಷೆಯ ಬೆಳವಣಿಗೆಗಾಗಿ ಜಿಲ್ಲಾ ಹಾಗೂ ರಾಜ್ಯ ಕಮಿಟಿ ಕಾರ್ಯಕ್ರಮ ಹಮ್ಮಿಕೊಂಡು ಉರ್ದು ಭಾಷೆ ಉಳಿವಿಗಾಗಿ ಶ್ರಮಿಸುತ್ತಿದೆ ಎಂದರು.

ಕರ್ನಾಟಕ ಉರ್ದು ಅಕಾಡೆಮಿ ಅಧ್ಯಕ್ಷ ಮಹಮ್ಮದ್‌ಆಲಿ ಖಾಜಿ ಮಾತನಾಡಿ, ನಾಡಿನಾದ್ಯಂತ ಉರ್ದು ಭಾಷೆ ಬೆಳವಣಿಗೆಗೆ ಪ್ರತಿ ವರ್ಷವು ಎಲ್ಲಾ ಜಿಲ್ಲೆಗಳಲ್ಲಿ ಒಂದು ದಿನ ಸಮಾಜದ ಜನಾಂಗ ಒಗ್ಗೂಡಿಸಿ ಕೊಂಡು ಉರ್ದು ರ್‍ಯಾಲಿ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡು ಉರ್ದು ಭಾಷೆ ಉಳಿವಿಗಾಗಿ ಶ್ರಮಿಸುತ್ತಿದೆ ಎಂದು ತಿಳಿಸಿದರು.

ಇದೇ ವೇಳೆ ಉರ್ದು ರ್‍ಯಾಲಿ ನಗರದ ಅಂಡೆಛತ್ರದಿಂದ ಕುವೆಂಪು ಕಲಾಮಂದಿರದವರೆಗೆ ಕಾಲ್ನಡಿಗೆ ಜಾಥಾ ನಡೆಸಲಾಯಿತು. ನಂತರ ಪ್ರತಿ ವರ್ಷದಂತೆ ಈ ವರ್ಷ ಮೂವರಿಗೆ ಉರ್ದು ಅರಬ್‌ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕರ್ನಾಟಕ ಉರ್ದು ಅಕಾಡೆಮಿ ಸದಸ್ಯ ಮುನೀರ್ ಅಹ್ಮದ್ ಜಾಮಿ, ಉದ್ಯಮಿ ಅಪ್ಸರ್ ಅಹ್ಮದ್, ತಾಲೂಕು ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷ ಅನ್ಸರ್‌ಆಲಿ, ನಗರಸಭೆ ಸದಸ್ಯ ರಾದ ಶಾದಬ್‌ ಆಲಂಖಾನ್, ಜಾವೀದ್, ಜಿಲ್ಲಾ ಉರ್ದು ಅರಬ್ ಸದಸ್ಯರಾದ ಜಿಲ್ಲಾ ಕಮಿಟಿ ಜಂಶೀದ್ ಅಹ್ಮದ್, ನಜ್ಮಾ ನಿಕ್ಕತ್, ಸುಹಾನ್ ಸುಲ್ತಾನ, ನಜ್ಮಾಆಲಿ, ಅಕ್ಬರ್, ಖಾಲೀದ್‌ ರೆಹಮಾನ್, ಶಬ್ಬೀರ್ ಇದ್ದರು. 23 ಕೆಸಿಕೆಎಂ 5ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಭಾನುವಾರ ನಡೆದ ಉರ್ದು ರ್‍ಯಾಲಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಾಸಕ ಎಚ್‌.ಡಿ. ತಮ್ಮಯ್ಯ ಉದ್ಘಾಟಿಸಿದರು.

PREV

Recommended Stories

2 ಕಾರ್ಯಕ್ರಮದಲ್ಲಿ ಮುಖಾಮುಖಿ ಭೇಟಿ ತಪ್ಪಿಸಿಕೊಂಡ ಸಿದ್ದು-ಡಿಕೆಶಿ
ಸಿದ್ದುವೇ ಇರಲಿ, ಇಲ್ಲವೇ ಪರಂ ಸಿಎಂ ಆಗಲಿ: ರಾಜಣ್ಣ ಆಶಯ