ಬಸವ ಉತ್ಸವವನ್ನು ಸರ್ಕಾರವೆ ಆಚರಿಸುವಂತೆ ಒತ್ತಾಯ

KannadaprabhaNewsNetwork |  
Published : Feb 06, 2024, 01:32 AM ISTUpdated : Feb 06, 2024, 03:32 PM IST
ಬಸವಕಲ್ಯಾಣದಲ್ಲಿ ಬಸವ ಪರ ಸಂಘಟನೆಗಳು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಸಹಾಯಕ ಆಯುಕ್ತರ ಕಚೇರಿಗೆ ಸಲ್ಲಿಸಿ ರಾಜ್ಯ ಸರ್ಕಾರ ಅನೇಕ ಉತ್ಸವಗಳನ್ನು ಮಾಡುತ್ತ ಬಂದಿದೆ ಅದರಂತೆ ಬಸವ ಉತ್ಸವವನ್ನು ಪ್ರತಿವರ್ಷ ಆಚರಿಸುತ್ತಿಲ್ಲ ಎಂದು ಖಂಡಿಸಿ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಬಸವ ಉತ್ಸವವನ್ನು 2009-10 ಸಾಲಿನಿಂದ ಪ್ರಾರಂಭಿಸಿದೆ. ಆದರೆ, ಪ್ರತಿವರ್ಷ ಆಚರಿಸುತ್ತಿಲ್ಲ ಎಂದು ಖಂಡಿಸಿ ಬಸವ ಪರ ಸಂಘಟನೆಗಳು ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಸಹಾಯಕ ಆಯುಕ್ತರ ಕಚೇರಿಗೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಈ ನಾಡಿನ ಪರಂಪರೆ ಮತ್ತು ಇತಿಹಾಸ ಜನಸಾಮಾನ್ಯರಿಗೆ ಮುಟ್ಟಿಸಲು ರಾಜ್ಯ ಸರ್ಕಾರ ಅನೇಕ ಉತ್ಸವಗಳನ್ನು ಮಾಡುತ್ತ ಬಂದಿದೆ ಅದರಂತೆ ಬಸವ ಉತ್ಸವವನ್ನು 2009-10 ಸಾಲಿನಿಂದ ಪ್ರಾರಂಭಿಸಿದೆ. ಆದರೆ, ಪ್ರತಿವರ್ಷ ಆಚರಿಸುತ್ತಿಲ್ಲ ಎಂದು ಖಂಡಿಸಿ ಬಸವ ಪರ ಸಂಘಟನೆಗಳು ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಸಹಾಯಕ ಆಯುಕ್ತರ ಕಚೇರಿಗೆ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಬಸವೇಶ್ವರ ಹಿರಿಯ ನಾಗರಿಕರ ಒಕ್ಕೂಟದ ಅಧ್ಯಕ್ಷ ಪ್ರೊ. ಸಿ.ಬಿ ಪ್ರತಾಪೂರೆಯವರು ಮಾತನಾಡಿ, ಸರ್ಕಾರ ಒಂದೆಡೆ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಇನ್ನೊಂದೆಡೆ ಬಸವ ಉತ್ಸವ ಆಚರಿಸಲು ನಿಷ್ಕಾಳಜಿ ವಹಿಸುತ್ತಿರುವುದು ಖಂಡನೀಯವಾಗಿದೆ ಎಂದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಉಪಾಧ್ಯಕ್ಷರಾದ ಪ್ರೊ. ಎಸ್‌.ಜೆ ಕರಣೆ ಮಾತನಾಡಿ, ಮೈಸೂರು ದಸರಾ ಉತ್ಸವ, ಹಂಪಿ ಉತ್ಸವ ಪ್ರತಿ ವರ್ಷ ಆಚರಿಸುತ್ತಾರೆ. ಅದರಂತೆ ಬಸವ ಉತ್ಸವವನ್ನೂ ಪ್ರತಿ ವರ್ಷ ಆಚರಿಸಬೇಕು. ಈ ವರ್ಷ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ಘೋಷಿಸಿದ್ದು, ಬಸವ ಉತ್ಸವವನ್ನು ವಿಶ್ವಮಟ್ಟದ ಉತ್ಸವವಾಗಿ ಬಸವಕಲ್ಯಾಣದಲ್ಲಿ ಪ್ರತಿ ವರ್ಷ ಆಚರಿಸುವಂತೆ ಸರ್ಕಾರ ಮುಂಬರುವ ಬಜೆಟ್‌ನಲ್ಲಿ ಘೋಷಿಸಿ ಅದಕ್ಕೆ 15 ಕೋಟಿಗೂ ಅಧಿಕ ಅನುದಾನ ಮೀಸಲಿಡುವತಂತೆ ಮನವಿ ಮಾಡಿದರು.

ಶರಣ ಸಾಹಿತ್ಯ ಪರಿಷತ್‌ ತಾಲೂಕು ಅಧ್ಯಕ್ಷ ಗುರುನಾಥ ಗಡ್ಡೆ ವನವಿ ಪತ್ರ ಓದಿ ತಹಸೀಲ್ದಾರ್‌ ಮುಖಾಂತರ ಮಖ್ಯಮಂತ್ರಿಗೆ ಪತ್ರ ಸಲ್ಲಿಸಲು ವಿನಂತಿಸಿದರು. ಈ ಸಂಧರ್ಭದಲ್ಲಿ ಬಸವಕಲ್ಯಾಣದ ಗ್ರೇಡ್‌-2 ತಹಸೀಲ್ದಾರ್‌ ರಮೇಶ ಬಾಬು, ಮುಖಂಡರಾದ ಜಗನ್ನಾಥ ಪತಂಗೆ, ಪ್ರೊ. ಎ.ಡಿ ಪಾಟೀಲ್‌, ಶಾಮರಾವ್‌ ಸಿಂಗ್‌ ವಕೀಲರು, ಶ್ರೀಶೈಲ ಹುಡೆದ, ಬಾಬುರಾವ್‌ ಗೌಡಗಾಂವೆ, ಮಹಾದೇವಪ್ಪ ಇಜಾರೆ, ಗಣಪತಿ ಕಾಸ್ತೆ, ಜೈಪ್ರಕಾಶ ಸದಾನಂದೆ, ಬಸವಣಪ್ಪ ನೆಳಗಿ, ಬಂವವರ ಒಣಿಯ ಸತ್ಯಕ್ಕ ತಾಯಿ ಮತ್ತಿತರರು ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ