ಕನ್ನಡಪ್ರಭ ವಾರ್ತೆ ಬಾದಾಮಿಸಮೀಪದ ಬನಶಂಕರಿ ದೇವಸ್ಥಾನದ ಸಮೀಪ, ಕಸದ ಗುಂಪಿಗಳು ಸಾಕಷ್ಟಿದ್ದು, ಅವುಗಳಿಗೆ ಬೆಂಕಿ ಹಚ್ಚಿ ಪರಿಸರ ಮಾಲಿನ್ಯ ಮಾಡುತ್ತಿದ್ದಾರೆ. ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಗಮನಹರಿಸಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬಾದಾಮಿ
ಸಮೀಪದ ಬನಶಂಕರಿ ದೇವಸ್ಥಾನದ ಸಮೀಪ, ಕಸದ ಗುಂಪಿಗಳು ಸಾಕಷ್ಟಿದ್ದು, ಅವುಗಳಿಗೆ ಬೆಂಕಿ ಹಚ್ಚಿ ಪರಿಸರ ಮಾಲಿನ್ಯ ಮಾಡುತ್ತಿದ್ದಾರೆ. ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಗಮನಹರಿಸಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
ನಿತ್ಯ ಸಾವಿರಾರು ಭಕ್ತರು ಬನಶಂಕರಿದೇವಿ ದರ್ಶನಕ್ಕೆ ಆಗಮಿಸುತ್ತಾರೆ. ಅಟೋ ರಿಕ್ಷಾದವರು ರಸ್ತೆಯಲ್ಲಿ ವಾಹನ ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದಾರೆ. ಈ ಜಾಗದಲ್ಲಿ ವಾಟರ್ ಫಿಲ್ಟರ್ ಘಟಕ, ಬಸ್ ನಿಲ್ದಾಣವಿದೆ. ಅವು ಸಾರ್ವಜನಿಕರಿಗೆ ಕಾಣಿಸುವುದಿಲ್ಲ. ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿ, ಅಂಗಡಿಕಾರರು ವ್ಯಾಪಾರ ಮಾಡುತ್ತಿದ್ದಾರೆ. ಕೂಡಲೇ ಸಂಬಂಧಿಸಿದ ಪಿಡಿಒಗಳು ಗಮನಹರಿಸಿ ಸ್ವಚ್ಛತೆ ಕಲ್ಪಿಸಿ, ಪಾದಚಾರಿ ರಸ್ತೆಯನ್ನು ತೆರವುಗೊಳಿಸಬೇಕು ಎಂದು ಭಕ್ತರು, ನಾಗರಿಕರು ಆಗ್ರಹಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.