ಬ್ಯಾಡಗಿ: ನೈಸರ್ಗಿಕ ಪ್ರಪಂಚದ ಮೇಲೆ ನಮ್ಮ ಬದುಕು ಅವಲಂಬಿತವಾಗಿದ್ದು, ಜಾಗತಿಕ ತಾಪಮಾನ ಬಹುಚರ್ಚಿತ ವಿಷಯವಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ ಅಭಿಪ್ರಾಯಪಟ್ಟರು.ವಿಶ್ವ ಅರಣ್ಯ ದಿನಾಚರಣೆ ಅಂಗವಾಗಿ ಪುರಸಭೆ ವತಿಯಿಂದ ಪಟ್ಟಣದ ಉದ್ಯಾನವನಗಳಲ್ಲಿ ಸಸಿ ನೆಟ್ಟು ಚಾಲನೆ ನೀಡಿದ ಅವರು, ಪ್ರಸಕ್ತ ಶತಮಾನದಲ್ಲಿ ಬದುಕುಳಿಯಬೇಕಾದರೆ ನೈಸರ್ಗಿಕ ಪ್ರಪಂಚದ ಭವಿಷ್ಯದ ಬಗ್ಗೆ ಕಾಳಜಿಯು ನಮಗಿರಬೇಕಾಗಿದೆ. ಪರಿಸರ ನಾಶಕ್ಕೆ ಕಡಿವಾಣ ಹಾಕಲು ತ್ವರಿತವಾಗಿ ಕೆಲ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕಾಗಿದೆ ಎಂದರು.ಅರಣ್ಯ ಸಂರಕ್ಷಣೆ: ಪುರಸಭೆ ಆಶ್ರಯ ಸಮಿತಿ ಸದಸ್ಯ ಗಿರೀಶ ಇಂಡಿಮಠ ಮಾತನಾಡಿ, ಜಾಗತಿಕ ಜನಸಂಖ್ಯೆ ವೇಗವಾಗಿ ಬೆಳೆಯುತ್ತಿದೆ. ಇದಕ್ಕೆ ವಿರುದ್ಧವಾಗಿ ಪರಿಸರ ನಾಶವಾಗುತ್ತಿದೆ. ಹವಾಮಾನ ವೈಪರಿತ್ಯದಿಂದ ಆಗಾಗ ಬದುಕನ್ನು ದುಸ್ತರಗೊಳಿಸುತ್ತಿವೆ. ಅರಣ್ಯ ಪ್ರದೇಶವನ್ನು ಹೇಗೆ ಉತ್ತಮವಾಗಿ ಸಂರಕ್ಷಿಸಬಹುದು ಎಂಬುದಕ್ಕೆ ತಜ್ಞರ ಅಭಿಪ್ರಾಯವನ್ನು ಸರ್ಕಾರಗಳು ಪಡೆದುಕೊಳ್ಳುವ ಮೂಲಕ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಎಂಜಿನಿಯರ್ ಚನ್ನಪ್ಪ ಅಂಗಡಿ, ಮಾಲತೇಶ ಹಳ್ಳಿ ಸೇರಿದಂತೆ ಇತರರಿದ್ದರು.ಆಧ್ಯಾತ್ಮಿಕ ಶಕ್ತಿ ಹೆಚ್ಚಿಸಲು ಉಪವಾಸ ಸಹಕಾರಿಶಿಗ್ಗಾಂವಿ: ನಮ್ಮ ದೇಶದಲ್ಲಿ ರಂಜಾನ್ ಹಬ್ಬವನ್ನು ಭಾವೈಕ್ಯದಿಂದ ಆಚರಿಸಲಾಗುತ್ತಿದ್ದು, ಮುಸ್ಲಿಮರಿಗೆ ಇದು ಪವಿತ್ರ ತಿಂಗಳಾಗಿದೆ ಎಂದು ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ತಿಳಿಸಿದರು.ತಾಲೂಕಿನ ಬನ್ನೂರು ಗ್ರಾಮದಲ್ಲಿ ರಂಜಾನ್ ನಿಮಿತ್ತ ನಡೆದ ಇಫ್ತಿಯಾರ್ ಕೂಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರಂಜಾನ್ ತಿಂಗಳಲ್ಲಿ ಉಪವಾಸ ಧಾರ್ಮಿಕ ಶುದ್ಧತೆ ಮತ್ತು ಆಧ್ಯಾತ್ಮಿಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದರು.ಫಕ್ರುದ್ದೀನ್ ಹಕ್ಕಿ, ಬನ್ನೂರ ಅಂಜುಮನ್ ಕಮಿಟಿ ಅಧ್ಯಕ್ಷ ರಾಜೇಸಾಬ ಶೇತಸನದಿ, ಅಬ್ದುಲರಜಾಕ್ ಮದ್ದು ಖಾನವರ, ಗೌಸ್‌ಪೀರಾ ಖಾದ್ರಿ, ಜಾಫರ್ ಇಸ್ಮಿಯಾನವರ, ಖಾದರಗೌಸ್ ಮಕ್ಕುಬಾಯಿ, ತೌಸಿಫ್ ಶೇಕಸನದಿ ಹಾಗೂ ಮುಸ್ಲಿಂ ಸಮಾಜದ ಹಿರಿಯರು ಭಾಗವಹಿಸಿದ್ದರು.