ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರ ಬಿಡುಗಡೆಗೆ ಆಗ್ರಹಿಸಿ ಕರವೇ ಕಾರ್ಯಕರ್ತರು ಗದಗ ನಗರದ ಎಪಿಎಂಸಿ ಆವರಣದಿಂದ ಪಂ.ಪುಟ್ಟರಾಜ ಗವಾಯಿಗಳ ಮಠದವರೆಗೆ ಉರುಳು ಸೇವೆ ಮಾಡುವ ಮೂಲಕ ಒತ್ತಾಯಿಸಿದರು.
ಗದಗ: ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರ ಬಿಡುಗಡೆಗೆ ಆಗ್ರಹಿಸಿ ಕರವೇ ಕಾರ್ಯಕರ್ತರು ನಗರದ ಎಪಿಎಂಸಿ ಆವರಣದಿಂದ ಪಂ.ಪುಟ್ಟರಾಜ ಗವಾಯಿಗಳ ಮಠದವರೆಗೆ ಉರುಳು ಸೇವೆ ಮಾಡುವ ಮೂಲಕ ಒತ್ತಾಯಿಸಿದರು.
ಈ ವೇಳೆ ಕರವೇ ಜಿಲ್ಲಾಧ್ಯಕ್ಷ ಶರಣು ಎಸ್. ಗೋಡಿ ಮಾತನಾಡಿ, ಡಿ.೨೭ರಂದು ಬೆಂಗಳೂರಿನಲ್ಲಿ ನಾಮಫಲಕದಲ್ಲಿ ಕನ್ನಡಕ್ಕೆ ಆದ್ಯತೆಗೆ ಒತ್ತಾಯಿಸಿ ಹೋರಾಟ ಮಾಡುವ ಸಮಯದಲ್ಲಿ ಬಂಧಿಸಲಾಗಿರುವ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ್ರ ಸೇರಿದಂತೆ ಕರವೇ ಮುಖಂಡರನ್ನು ಹಾಗೂ ಕಾರ್ಯಕರ್ತರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಮತ್ತು ಕೇಸುಗಳನ್ನು ವಾಪಸ್ ಪಡೆಯಲು ಸರ್ಕಾರ ಕ್ರಮ ಕೈಗೊಳ್ಳಬೇಕು. ನಾಮಫಲಕದಲ್ಲಿ ಕನ್ನಡಕ್ಕೆ ಹೆಚ್ಚಿನ ಆದ್ಯತೆಗಾಗಿ ನಡೆಯುತ್ತಿರುವ ಅಭಿಯಾನವನ್ನು ರಾಜ್ಯಾದ್ಯಂತ ಹಾಗೂ ಜಿಲ್ಲೆಯಾದ್ಯಂತ ಮುಂದುವರಿಸಲಾಗುವುದು ಎಂದರು.
ಜಿಲ್ಲಾ ಯುವ ಘಟಕದ ಅಧ್ಯಕ್ಷ ನಿಂಗನಗೌಡ ಮಾಲಿಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತ ಪೂಜಾರ, ಮಹಿಳಾ ಘಟಕದ ಅಧ್ಯಕ್ಷೆ ಆಶಾ ಜೂಲಗುಡ್ಡ, ಮಹಾದೇವಿ ದೊಡ್ಡಗೌಡ್ರ, ರತ್ನಮ್ಮ ಯಲಬುರ್ಗಿ, ತಾಲೂಕು ಅಧ್ಯಕ್ಷರಾದ ಲೋಕೇಶ ಸುತಾರ, ರಾಮನಗೌಡ ಹಳೆಮನಿ, ಪ್ರಕಾಶ ಸಂದಿಗೋಡ, ಈರಣ್ಣ ಹುರಕಡ್ಲಿ, ಅಲ್ಲಾಬಕ್ಷಿ ನದಾಫ್, ಆನಂದ ಹೊಸಮನಿ, ಯಲ್ಲಪ್ಪ ಬೋವಿ, ಮಾರುತಿ ಈಳಗೇರ, ಆಶ್ಪಾಕ ಬಾಗೋಡಿ, ಪ್ರವೀಣ್ ಗಾಣಿಗೇರ ಮೈನು ಮನಿಯಾರ, ಅಪ್ಪು ಉಮಚಗಿ, ಗಣೇಶ ಕಳಸೂರ, ವೀರೇಶ ಮಡಿವಾಳರ, ನಾಗರಾಜ ಬಂಡಿವಡ್ಡರ, ಮಂಜುನಾಥ ಹುಲ್ಲೂರು, ರಾಹುಲ್ ಹೂಗಾರ, ಚಂದ್ರು ಮಣ್ಣೂರ, ಮಲ್ಲಪ್ಪ ಗೊಜನೂರು, ರವಿ ಕೋರಿ, ಸೇರಿದಂತೆ ಕಾರ್ಯಕರ್ತರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.