ವೆನುಜುವೆಲಾ ಮೇಲೆ ಅಮೆರಿಕ ದಾಳಿ: ಸಿಪಿಐಎಂ ತೀವ್ರ ಖಂಡನೆ

KannadaprabhaNewsNetwork |  
Published : Jan 14, 2026, 02:45 AM IST
13ಎಚ್ಎಸ್ಎನ್4 :  | Kannada Prabha

ಸಾರಾಂಶ

ವೆನುಜುವೆಲಾ ದೇಶದ ಮೇಲೆ ಸಾಮ್ರಾಜ್ಯಶಾಹಿ ಅಮೆರಿಕ ನಡೆಸಿರುವ ದಾಳಿ ಅಂತಾರಾಷ್ಟ್ರೀಯ ನೀತಿಗಳಿಗೆ ವಿರುದ್ಧವಾದುದು ಮಾತ್ರವಲ್ಲ, ಅತ್ಯಂತ ದುರಾಕ್ರಮಣ ಮತ್ತು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ ಎಂದು ಖಂಡಿಸಿ ನಗರದ ಮಹಾವೀರ ವೃತ್ತದಲ್ಲಿ ಮಂಗಳವಾರ ಸಿಪಿಐಎಂನಿಂದ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭವಾರ್ತೆ ಹಾಸನ

ವೆನುಜುವೆಲಾ ದೇಶದ ಮೇಲೆ ಸಾಮ್ರಾಜ್ಯಶಾಹಿ ಅಮೆರಿಕ ನಡೆಸಿರುವ ದಾಳಿ ಅಂತಾರಾಷ್ಟ್ರೀಯ ನೀತಿಗಳಿಗೆ ವಿರುದ್ಧವಾದುದು ಮಾತ್ರವಲ್ಲ, ಅತ್ಯಂತ ದುರಾಕ್ರಮಣ ಮತ್ತು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ ಎಂದು ಖಂಡಿಸಿ ನಗರದ ಮಹಾವೀರ ವೃತ್ತದಲ್ಲಿ ಮಂಗಳವಾರ ಸಿಪಿಐಎಂನಿಂದ ಪ್ರತಿಭಟನೆ ನಡೆಸಲಾಯಿತು. ಇದೆ ವೇಳೆ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಎಚ್.ಆರ್.ನವೀನ್ ಕುಮಾರ್ ಮಾತನಾಡಿ, ವೆನುಜುವೆಲಾ ದೇಶದ ಮೇಲೆ ಅಮೆರಿಕದ ದಾಳಿ ಖಂಡಿಸಿ, ವೆನುಜುವೆಲಾದ ಅಧ್ಯಕ್ಷ ನಿಕೊಲೊಸ್ ಮಡುರೋ ಮತ್ತು ಅವರ ಪತ್ನಿಯ ಬಿಡುಗಡೆಗೆ ಆಗ್ರಹಿಸಿದರು, ಪ್ರಜಾಪ್ರಭುತ್ವದ ಪಾಠ ಹೇಳುವ ಅಮೆರಿಕ ತಾನೇ ಸರ್ವಾಧಿಕಾರಿಯಾಗಿ ವರ್ತಿಸುತ್ತಿದೆ. ಸ್ವತಂತ್ರ ಹಾಗೂ ಸಾರ್ವಭೌಮ ರಾಷ್ಟ್ರವಾದ ವೆನುಜುವೆಲಾದ ಮೇಲೆ ಏಕಾಏಕಿ ನುಗ್ಗಿ ಬಾಂಬ್ ದಾಳಿ ನಡೆಸಿ ನೂರಾರು ಜನರನ್ನು ಹತ್ಯೆ ಮಾಡಿರುವುದು ಹಾಗೂ ಅಧ್ಯಕ್ಷರನ್ನು ಅಪಹರಿಸಿರುವುದು ಅತ್ಯಂತ ಖಂಡನೀಯ. ವೆನುಜುವೆಲಾದ ತೈಲ ಮತ್ತು ಖನಿಜ ಸಂಪತ್ತನ್ನು ತನ್ನ ವಶಕ್ಕೆ ಪಡೆಯುವ ಉದ್ದೇಶದಿಂದಲೇ ಅಮೆರಿಕ ಈ ದಾಳಿಗೆ ಮುಂದಾಗಿದೆ ಎಂದರು.

ಅಮೆರಿಕದ ಬಂಡವಾಳಶಾಹಿ ವ್ಯವಸ್ಥೆ ಬಿಕ್ಕಟ್ಟಿಗೆ ಸಿಲುಕಿದ್ದು, ಅದರಿಂದ ಹೊರಬರಲು ಟ್ರಂಪ್ ನೇತೃತ್ವದಲ್ಲಿ ಇಂತಹ ಆಕ್ರಮಣಕಾರಿ ನೀತಿಗಳನ್ನು ಅನುಸರಿಸಲಾಗುತ್ತಿದೆ. ಇದು ಜಾಗತಿಕ ಶಾಂತಿಗೆ ಗಂಭೀರ ಅಪಾಯ ಉಂಟುಮಾಡುವಂತದ್ದು. ಸಮಾಜವಾದಿ ನಿಲುವು ಹೊಂದಿರುವ ವೆನುಜುವೆಲಾ ಹಾಗೂ ಕ್ಯೂಬಾ ದೇಶಗಳ ವಿರುದ್ಧ ಸುಳ್ಳು ಆರೋಪ ಮಾಡಿ ಆರ್ಥಿಕ ದಿಗ್ಬಂಧನ ಹೇರಲಾಗುತ್ತಿದೆ ಎಂದು ನವೀನ್ ಕುಮಾರ್ ದೂರಿದರು.

ಪ್ರತಿಭಟನೆಯಲ್ಲಿ ಕೆಂಪು ಬಾವುಟ ಹಿಡಿದ ಕಾರ್ಯಕರ್ತರು ಅಮೆರಿಕದ ಸಾಮ್ರಾಜ್ಯಶಾಹಿ ನೀತಿಗಳ ವಿರುದ್ಧ ಘೋಷಣೆ ಕೂಗಿದರು. ಪಕ್ಷದ ಸ್ಥಳೀಯ ಸಮಿತಿ ಕಾರ್ಯದರ್ಶಿ ಎಂ.ಜಿ. ಪೃಥ್ವಿ, ಜಿಲ್ಲಾ ಸಮಿತಿ ಸದಸ್ಯರಾದ ಜಿ.ಪಿ.ಸತ್ಯನಾರಾಯಣ, ಅರವಿಂದ್, ಜನಪರ ಸಂಘಟನೆಗಳ ಮುಖಂಡರಾದ ರಾಜಶೇಖರ್ ಹುಲಿಕಲ್, ರಾಜು ಗೊರೂರು, ಟಿ.ಆರ್. ವಿಜಯ್ ಕುಮಾರ್, ಪ್ರಕಾಶ್, ಮುಬಷಿರ್ ಅಹಮದ್, ಇರ್ಷಾದ್ ಅಹಮದ್ ದೇಸಾಯಿ, ಸಿ. ಸೌಭಾಗ್ಯ, ಮಮತಾಶಿವು, ಚಿನ್ನೇನಹಳ್ಳಿ ಸ್ವಾಮಿ, ಅನ್ಸರ್, ರಮೇಶ್ ಇತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಷೇತ್ರದ ಕೆಲಸವನ್ನು ತಲೆಮೇಲೆ ಹೊತ್ತು ಮಾಡುವೆ
ಜಾತಿ ವೈಷಮ್ಯಕ್ಕೆ ಅವಕಾಶವಿಲ್ಲ:ಡಾ. ತೌಫೀಕ್‌ ಪಾರ್ಥನಳ್ಳಿ