ಮಾಹೆ ಆತಿಥ್ಯದಲ್ಲಿ ಯುಎಸ್‌-ಇಂಡಿಯ ಟ್ರಸ್ಟ್‌ ಫೆಲೋಶಿಪ್‌

KannadaprabhaNewsNetwork |  
Published : Sep 09, 2026, 03:00 AM IST
ಯುಎಸ್‌-ಇಂಡಿಯ ಟ್ರಸ್ಟ್‌ ಫೆಲೋಶಿಪ್‌ ಆತಿಥ್ಯ ಪ್ರಮಾಣಪತ್ರ ಹಸ್ತಾಂತರ ನಡೆಯಿತು | Kannada Prabha

ಸಾರಾಂಶ

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿವಿಯು ಭಾರತ ಮತ್ತು ಅಮೆರಿಕ ನಡುವಿನ ವೈಜ್ಞಾನಿಕ ಹಾಗೂ ತಾಂತ್ರಿಕ ಸಹಯೋಗವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ‘ಯುಎಸ್‌ ಇಂಡಿಯ ಟ್ರಸ್ಟ್‌ ಫೆಲೋಶಿಪ್‌ 2026-27’ಕ್ಕೆ ಆತಿಥ್ಯ ವಹಿಸಲು ಆಯ್ಕೆಯಾಗಿದೆ. ಈ ಪ್ರತಿಷ್ಠಿತ ಅವಕಾಶ ಪಡೆದಿರುವ ಭಾರತದ ಮೂರು ಸಂಸ್ಥೆಗಳಲ್ಲಿ ಮಾಹೆಯೂ ಒಂದಾಗಿದೆ.

ಕನ್ನಡಪ್ರಭ ವಾರ್ತೆ ಮಣಿಪಾಲ

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿವಿಯು ಭಾರತ ಮತ್ತು ಅಮೆರಿಕ ನಡುವಿನ ವೈಜ್ಞಾನಿಕ ಹಾಗೂ ತಾಂತ್ರಿಕ ಸಹಯೋಗವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ‘ಯುಎಸ್‌ ಇಂಡಿಯ ಟ್ರಸ್ಟ್‌ ಫೆಲೋಶಿಪ್‌ 2026-27’ಕ್ಕೆ ಆತಿಥ್ಯ ವಹಿಸಲು ಆಯ್ಕೆಯಾಗಿದೆ. ಈ ಪ್ರತಿಷ್ಠಿತ ಅವಕಾಶ ಪಡೆದಿರುವ ಭಾರತದ ಮೂರು ಸಂಸ್ಥೆಗಳಲ್ಲಿ ಮಾಹೆಯೂ ಒಂದಾಗಿದೆ.

ಭಾರತದಲ್ಲಿನ ಅಮೆರಿಕ ಹಾಗೂ ದಕ್ಷಿಣ - ಮಧ್ಯ ಏಷ್ಯಾದ ವಿಶೇಷ ರಾಯಭಾರಿ ಸರ್ಜಿಯೊ ಗೋರ್ ಅವರು ಭಾನುವಾರ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಮಾಹೆ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್‌ (ಐಐಟಿ ಮದ್ರಾಸ್‌) ಹಾಗೂ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ (ಐಐಎಸ್‌ಸಿ) ಪ್ರತಿನಿಧಿಗಳಿಗೆ ಆತಿಥ್ಯದ ಪ್ರಮಾಣಪತ್ರಗಳನ್ನು ಹಸ್ತಾಂತರಿಸಿದರು.ಅಮೆರಿಕದ ಸ್ವಾತಂತ್ರ್ಯೋತ್ಸವ 250ನೇ ದಿನಾಚರಣೆಯನ್ನು ಜಗತ್ತಿನ ವಿವಿಧೆಡೆಗಳಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ 12 ತಿಂಗಳ ಕಾಲ ಆಯೋಜಿಸಲಾಗುತ್ತಿದ್ದು, ಅದರಲ್ಲಿ ಈ ಯುಎಸ್-ಇಂಡಿಯಾ ಟ್ರಸ್ಟ್ ಫೆಲೋಶಿಪ್ ಎಂಬ ಕಾರ್ಯಕ್ರಮವೂ ಒಂದಾಗಿದೆ.ಈ ಫೆಲೋಶಿಪ್ ಕಾರ್ಯಕ್ರಮ ಜಗತ್ತಿನ ಶೈಕ್ಷಣಿಕ ಕ್ಷೇತ್ರದ ಮಹತ್ವದ ಯೋಜನೆಯಾಗಿದೆ. ಅಮೆರಿಕದ ಪೋಸ್ಟ್‌ ಡಾಕ್ಟೋರಲ್‌ ಮತ್ತು ವೃತ್ತಿಜೀವನದ ಆರಂಭಿಕ ಹಂತದಲ್ಲಿರುವ ಬೋಧಕರನ್ನು ಭಾರತದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನೆಗೆ ಅವಕಾಶ ಮಾಡಿಕೊಡುವುದು, ಕೃತಕ ಬುದ್ಧಿಮತ್ತೆ, ಕ್ವಾಂಟಮ್ ಕಂಪ್ಯೂಟಿಂಗ್, ಸೆಮಿಕಂಡಕ್ಟರ್‌, ಜೈವಿಕ ತಂತ್ರಜ್ಞಾನ, ಇಂಧನ, ರಕ್ಷಣಾ ತಂತ್ರಜ್ಞಾನ ಹಾಗೂ ಬಾಹ್ಯಾಕಾಶ ತಂತ್ರಜ್ಞಾನಗಳು ಈ ಸಹಭಾಗಿತ್ವದ ಮುಖ್ಯ ಉದ್ದೇಶವಾಗಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ರಾಯಭಾರಿ ಸೆರ್ಗಿಯೊ ಗೋರ್, ಈ ಸಹಭಾಗಿತ್ವವು ಅಮೆರಿಕ - ಭಾರತ ಶೈಕ್ಷಣಿಕ ಸಂಬಂಧವನ್ನು ಇನ್ನಷ್ಟು ನಿಕಟಗೊಳಿಸಲಿವೆ’ ಎಂದರು.ಮಾಹೆಯ ಕುಲಪತಿ ಡಾ. ಶರತ್ ಕೆ. ರಾವ್, ಈ ಫೆಲೋಶಿಪ್ ಎರಡೂ ದೇಶಗಳ ನಡುವಿನ ಅತ್ಯಾಧುನಿಕ ಸಂಶೋಧನೆ ಮತ್ತು ಪ್ರಗತಿಗೆ ಮಹತ್ವದ ಕೊಡುಗೆ ನೀಡಲಿದೆ ಎಂದರು.ಚೆನ್ನೈನ ಅಮೆರಿಕದ ಕಾನ್ಸುಲೇಟ್ ಜನರಲ್ ಮರಿಯಾನಾ ಎಲ್. ನಿಸುಲಾರ್, ಪ್ರತೀಕ್ಷಾ ಟ್ರಸ್ಟ್‌ನ ಕ್ರಿಸ್ ಗೋಪಾಲಕೃಷ್ಣನ್, ಬೆಂಗಳೂರಿನ ಐಐಎಸ್‌ಸಿ ನಿರ್ದೇಶಕ ಪ್ರೊ. ಗೋವಿಂದನ್ ರಂಗರಾಜನ್ ಹಾಗೂ ಐಐಟಿ ಮದರಾಸಿನ ಡೀನ್‌ ಪ್ರೀತಿ ಅಘಲಾಯಯಂ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳಗಾವಿಗೆ ಐಟಿ ಕಂಪನಿ ತರಲು ಪ್ರಯತ್ನ
ಗುಂಡಿ ಮುಚ್ಚುವ ಕಾರ್ಯಕ್ಕೆ ಚಾಲನೆ