ಕನ್ನಡಪ್ರಭ ವಾರ್ತೆ ಚೇಳೂರು ಕಂದಾಯ ಇಲಾಖೆ ಮತ್ತು ತಾಲೂಕು ಪಂಚಾಯತಿ ಸಹಯೋಗದಲ್ಲಿ ಸೆ10 ಸೋಮವಾರ ನಾರೇಮದ್ದೆಪಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಶಾಸಕರು ತಾಲೂಕಿನ ಇಒ, ಸಿಡಿಪಿಒ, ಆರೋಗ್ಯ ಇಲಾಖೆಯವರು ಸೇರಿದಂತೆ ವಿವಿದ ಇಲಾಖೆಯ ಅಧಿಕಾರಿಗಳು ಚಾಲನೆ ನೀಡಿದರು.
ಸ್ಥಳದಲ್ಲೇ ಸಮಸ್ಯೆಗೆ ಪರಿಹಾರಈ ವೇಳೆ ಪಿಡಿಒ ಕೆ. ವೆಂಕಟಾಚಲಪತಿ ಮಾತನಾಡಿ ಆಡಳಿತವೆ ಜನರ ಮನೆ ಬಾಗಿಲಿಗೆ ಬಂದು ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜನಸ್ಪಂಧನ ಕಾರ್ಯಕ್ರಮವನ್ನು ಆಯೋಜಿಸಲಾದ್ದು, ಸ್ಥಳೀಯ ಜನತೆ ಇದರ ಲಾಭ ಪಡೆಯಬೇಕು ಎಂದರು. ಇಒ ರಮೇಶ್ ರೆಡ್ಡಿ ಮಾತನಾಡಿ, ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರದಲ್ಲಿ ನಡೆಯುವ ಜನಸ್ಪಂದನ ಕಾರ್ಯಕ್ರಮಗಳನ್ನು ಶಾಸಕರು ಗ್ರಾಂ ಪಂಚಾಯತಿ ಮಟ್ಟದಲ್ಲಿ ನಡೆಸುತ್ತಿದ್ದು, ನಿಮ್ಮ ಸಮಸ್ಯೆಗಳನ್ನು ಶಾಸಕರ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಬಗೆ ಹರಿಸಿಕೊಳ್ಳಬೇಕು ಎಂದು ತಿಳಿಸಿದರು.
ವಿವಿಧ ಕಾಮಗಾರಿಗೆ ಚಾಲನೆ:ಕುರುಬರಹಳ್ಳಿ,ದೊಡ್ಡವಾರಪಲ್ಲಿ,ನಾರೇಮದ್ದೆಪಲ್ಲಿ, ಕಲ್ಲುರೋನಿಕುಂಟೆ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ,ಹಾಗೂ ನಾರೇಮದ್ದೆಪಲ್ಲಿ ಗ್ರಾಮದ ಕೆರೆ ಅಭಿವೃದ್ಧಿ,ಸೇರಿದಂತೆ ಗ್ಯಾದವಾಂಡ್ಲಾಪಲ್ಲಿ, ರೇಚನಾಯ್ಕನಪಲ್ಲಿ, ಇಂದುಕರೋಲ್ಲಪಲ್ಲಿ, ದುಗ್ಗಿನಾಯಕನಪಲ್ಲಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಭೂಮಿಪೂಜೆ ಹಾಗೂ ಬೆಸ್ತಲಪಲ್ಲಿ ಗ್ರಾಮದಲ್ಲಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಶಾಸಕರು ಚಾಲನೆ,ನೀಡಿದರು.ತಹಶೀಲ್ದಾರ್ ಶ್ರೀನಿವಾಸ ನಾಯುಡು, ಇಒ ರಮೇಶ್ ರೆಡ್ಡಿ, ಉಪ ತಹಸೀಲ್ದಾರ್ ಈಶ್ವರ್, ಪಿಡಿಒ ವೆಂಕಟಾಚಲಪತಿ, ಸಿಡಿಪಿಒ ರಾಮಚಂದ್ರ, ಟಿಹೆಚ್ಓ ಸತ್ಯ ನಾರಾಯಣ ರೆಡ್ಡಿ ಉಪಸ್ಥಿತರಿದ್ದರು.
ಶಾಸಕ ಸುಬ್ಬಾರೆಡ್ಡಿ ತೆಲುಗು ಪ್ರೇಮ ಜನಸ್ಪಂದನ ಕಾರ್ಯಕ್ರಮದಲ್ಲಿ ಬಾಗೇಪಲ್ಲಿ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ತೆಲುಗಿನಲ್ಲಿ ಮಾತನಾಡಿದರು. ಗಡಿ ಭಾಗದಲ್ಲಿ ತೆಲುಗಿಗೆ ಆದ್ಯತೆ ನೀಡಿ, ಕನ್ನಡದ ಬಗ್ಗೆ ಕೀಳರಿಮೆ ತೋರುತ್ತಿದ್ದಾರೆ ಎಂದು ಶಾಸಕರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.