ಕನ್ನಡಪ್ರಭ ವಾರ್ತೆ ಚನ್ನಗಿರಿ
ಅವರು ಬುಧುವಾರ ಪಟ್ಟಣದ ಗಾಂಧಿವೃತ್ತದಲ್ಲಿ ಲೇಖಕ ರವಿಹಂಜ್ ಬರೆದಿರುವ ಬಸವ ಮಂಟಪ ಕೃತಿಯಲ್ಲಿ ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಲೇಖಕ ರವಿಹಂಜ್ ಮತ್ತು ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ಇವರುಗಳ ವಿರುದ್ಧ ಬಸವಪರ ಸಂಘಟನೆಗಳ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
12ನೇ ಶತಮಾನದಲ್ಲಿ ಸಮಾಜದಲ್ಲಿದ್ದ ಮೌಢ್ಯತೆ, ಕಂದಾಚಾರ, ಜಾತೀಯತೆಯ ವಿರುದ್ಧ ಹೋರಾಡಿದ ಮಹಾನ್ ಮಾನವತಾವಾದಿ ಬಸವೇಶ್ವರರಾಗಿದ್ದು ಇವರ ಬಗ್ಗೆ ಅವಹೇಳನಕಾರಿಯಾಗಿ ಬರೆದಿರುವ ಲೇಖಕ ರವಿಹಂಜ್ ಮತ್ತು ವಿಶ್ವೇಶ್ವರ ಭಟ್ ಅವರನ್ನು ಕೂಡಲೇ ಗಡಿಪಾರು ಮಾಡಬೇಕು ಎಂದು ತಿಳಿಸಿ, ರಾಜ್ಯ ಸರ್ಕಾರ ಕೂಡಲೇ ಈ ಕೃತಿಯನ್ನು ಮುಟ್ಟುಗೋಲು ಹಾಕಿಕೊಂಡಿರುವುದು ಸ್ವಾಗತಾರ್ಹವಾಗಿದೆ ಎಂದರು.ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣವರ ಪೋಟೋ ಕಡ್ಡಾಯ ಮಾಡಿರುವಾಗ ಬಸವಣ್ಣನವರನ್ನು ದರೋಡೆಕೋರ, ಲಂಚಕೋರ, ಸುಳ್ಳುಗಾರ ಎಂಬ ಪದಬಳಕೆ ಮಾಡುವುದು ಹೇಯ ಕೃತ್ಯ ವಾಗಿದೆ ಎಂದರು.
ಬಿಜೆಪಿ ರಾಜ್ಯಪರಿಷತ್ ಸದಸ್ಯ ಮಾಡಾಳು ಮಲ್ಲಿಕಾರ್ಜುನ್ ಮಾತನಾಡಿ, 12ನೇ ಶತಮಾನದಲ್ಲಿಯೇ ಸಮ ಸಮಾಜದ ಪರಿಕಲ್ಪನೆಯನ್ನು ಜಗತ್ತಿಗೆ ಸಾರಿದ ವಿಶ್ವಗುರು ಬಸವಣ್ಣನವರ ವಿರುದ್ಧ ಅವಹೇಳನಕಾರಿಯಾಗಿ ಬರೆದಿರುವ ಲೇಖಕನನ್ನು ಮತ್ತು ಇದಕ್ಕೆ ಉತ್ತೇಜನ ನೀಡಿದ ವಿಶ್ವೇಶ್ವರ ಭಟ್ ಇವರನ್ನು ಕೂಡಲೇ ಗಡಿಪಾರು ಮಾಡಬೇಕು ಎಂದರು.
ಪ್ರತಿಭಟನೆಯಲ್ಲಿ ಪಟ್ಟಣದ ಹಾಲಸ್ವಾಮಿ ವಿರಕ್ತ ಮಠದ ಡಾ.ಶ್ರೀ.ಬಸವ ಜಯಚಂದ್ರಸ್ವಾಮಿಗಳು, ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು, ಗೊಲ್ಲಹಳ್ಳಿಯ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ವಿಭವವಿದ್ಯಾಶಂಕರ ಸ್ವಾಮಿಗಳು, ತುಮ್ ಕೋಸ್ ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಶಿವಕುಮಾರ್, ಬಸವ ಬಳಗದ ಚಂದ್ರಪ್ಪ, ಎಂ.ಎಸ್.ಮಲ್ಲೇಶಪ್ಪ, ಮಂಜುಳಾ ಟಿ.ವಿ.ರಾಜು, ಜ್ಯೋತಿಕೊಟ್ರೇಶ್ ಕೋರಿ, ರಾಜಪ್ಪ, ಎಚ್.ಎಸ್.ಮಲ್ಲಿಕಾರ್ಜುನ್, ಸಿ.ಎಂ.ಗುರುಸಿದ್ದಯ್ಯ, ಎಂ.ರಾಜಪ್ಪ, ಎಂ.ಯು.ಚನ್ನಬಸಪ್ಪ, ಸಿ.ಆರ್.ನಾಗೇಂದ್ರಪ್ಪ, ಎಸ್.ಶಿವಲಿಂಗಮ್ಮ, ಜಿ.ಎಸ್.ಪ್ರೇಮ, ಆರ್.ಎಂ.ರವಿ, ಚಿಕ್ಕೂಲಿಕೆರೆ ಸಂಗಮೇಶ್, ಬೇಕರಿ ಶಿವಲಿಂಗಪ್ಪ ಸೇರಿದಂತೆ ಮೊದಲಾದವರು ಭಾಗವಹಿಸಿದ್ದರು.