ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಬುಧವಾರ ಬೆಳಗಾವಿ ಜಿಲ್ಲೆಯಿಂದ ರಾಜ್ಯೋತ್ಸವ ಹಾಗೂ ಈ ಬಾರಿಯ ವಿಶೇಷ ಸುವರ್ಣ ಕರ್ನಾಟಕ ಪ್ರಶಸ್ತಿಗೆ ಆಯ್ಕೆಯಾದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮತ್ತು ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹೊಸ ಭಾಷೆ ಕಲಿಯುವುದು ಬದುಕಿಗೆ ಹೊಸ ಅರ್ಥವನ್ನು ನೀಡುತ್ತದೆ. ಭಾರತವು ಒಂದು ರಾಷ್ಟ್ರವಾಗಿ ವಿಭಿನ್ನ ಸಂಸ್ಕೃತಿಗಳ ಸಮ್ಮಿಲನವಾಗಿದೆ ಮತ್ತು ಅದೇ ರೀತಿ, ಕರ್ನಾಟಕವು ಅನೇಕ ಪ್ರಪಂಚಗಳನ್ನೇ ಹೊಂದಿರುವ ಒಂದು ರಾಜ್ಯವಾಗಿದೆ ಎಂದು ಬಣ್ಣಿಸಿದರು.ವಿಟಿಯು ಕುಲಪತಿ ಪ್ರೊ.ವಿದ್ಯಾಶಂಕರ.ಎಸ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾತೃಭಾಷೆ ಹೃದಯದ ಭಾಷೆ. ಮಾತೃಭಾಷೆಯಲ್ಲಿ ಯಾವುದಾದರೂ ವಿಷಯವನ್ನು ಯಾರಾದರೂ ಕಲಿತರೇ ಅದು ಚೆನ್ನಾಗಿ ಅರ್ಥವಾಗುತ್ತದೆ ಮತ್ತು ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ. ಮಾತೃಭಾಷೆ ವಿಷಯದ ಜ್ಞಾನದ ಜತೆಗೆ ಕೌಶಲ್ಯ ಕಲಿಸುತ್ತದೆ ಎಂದು ತಿಳಿಸಿದರು.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ ಡಾ.ಬಾಳಾಸಾಹೇಬ ಲೋಕಾಪುರ, ಸುವರ್ಣ ಕರ್ನಾಟಕ ಪ್ರಶಸ್ತಿ ಪುರಸ್ಕೃತರಾದ ಎಸ್.ಎಂ.ಚಲವಾದಿ ಮತ್ತು ಯಮುನಾಬಾಯಿ ಕಲಾಚಂದ್ರ ಅವರನ್ನು ಸನ್ಮಾನಿಸಲಾಯಿತು.ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಸಿ.ಕೆ.ಸುಬ್ಬರಾಯ ಗೌರವ ಅತಿಥಿಯಾಗಿದ್ದರು. ಹಣಕಾಸು ಅಧಿಕಾರಿ ಡಾ.ಪ್ರಶಾಂತ ನಾಯಕ್ ಉಪಸ್ಥಿತರಿದ್ದರು. ಪ್ರೊ.ಬಿ.ಈ.ರಂಗಸ್ವಾಮಿ ಸ್ವಾಗತಿಸಿದರು. ಪ್ರೊ.ಟಿ.ಎನ್.ಶ್ರೀನಿವಾಸ್ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಭೈರವ ತಂಡದ ಹೆಸರಾಂತ ಕಲಾವಿದರು ಸಿತಾರ್ ಫ್ಯೂಷನ್ ವಾದ್ಯ ಗೋಷ್ಠಿ ಮತ್ತು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಮೆರಗು ತಂದ ಕಲಾತಂಡಗಳ ಪ್ರದರ್ಶನ:ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಮೊದಲು ಕರ್ನಾಟಕದ ಸಾಂಪ್ರದಾಯಿಕ ಪ್ರಸಿದ್ಧ ನೃತ್ಯ, ಡೊಳ್ಳು ಕುಣಿತ, ಕರಡಿ ಮಜಲು ಮತ್ತು ವೀರ್ ಗಾಸೆ ಕಲಾತಂಡಗಳ ಪ್ರದರ್ಶನ ಮೂಲಕ ವಿಟಿಯುನ ರಾಜ್ಯೋತ್ಸವ ಆಚರಣೆ ಮೆರವಣಿಗೆ ಅದ್ಧೂರಿಯಾಗಿ ನಡೆಯುವ ಮೂಲಕ ಪ್ರಾರಂಭವಾಯಿತು.
-ಮೊಹಮ್ಮದ್ ರೋಷನ್,
ಜಿಲ್ಲಾಧಿಕಾರಿ.ಮಾತೃಭಾಷೆ ಹೃದಯದ ಭಾಷೆ. ಮಾತೃಭಾಷೆಯಲ್ಲಿ ಯಾವುದಾದರೂ ವಿಷಯವನ್ನು ಯಾರಾದರೂ ಕಲಿತರೇ ಅದು ಚೆನ್ನಾಗಿ ಅರ್ಥವಾಗುತ್ತದೆ ಮತ್ತು ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ. ಮಾತೃಭಾಷೆ ವಿಷಯದ ಜ್ಞಾನದ ಜತೆಗೆ ಕೌಶಲ್ಯ ಕಲಿಸುತ್ತದೆ.-ಪ್ರೊ.ವಿದ್ಯಾಶಂಕರ.ಎಸ್, ವಿಟಿಯ ಕುಲಪತಿಗಳು.