ಹಾಲು ಖರೀದಿಗೆ ನೂತನ ತಂತ್ರಾಂಶ ಬಳಕೆ ಸ್ವಾಗತಾರ್ಹ: ಚಿಕ್ಕೊನಹಳ್ಳಿ ತಮ್ಮಯ್ಯ

KannadaprabhaNewsNetwork |  
Published : Jul 24, 2024, 12:20 AM IST
23ಕೆಎಂಎನ್ ಡಿ17 | Kannada Prabha

ಸಾರಾಂಶ

ಕೆಎಂಎಫ್‌ನ ನಂದಿನಿ ಬ್ರಾಂಡ್ ಸಾಕಷ್ಟು ಎತ್ತರಕ್ಕೆ ಬೆಳೆದಿದೆ. ಕೆಎಂಎಫ್ ಮತ್ತು ಘಟಕಗಳು ಪ್ರಾರಂಭದ ದಿನದಿಂದ ಇಲ್ಲಿಯವರೆಗೂ ಹಾಲು ಸಂಗ್ರಹ, ಉತ್ಪಾದನೆಯಲ್ಲಿ‌ ವೈಜ್ಞಾನಿ ಅಂಶಗಳನ್ನು ಅನುಸರಿಸಿಕೊಂಡು ಬಂದಿವೆ. ಕೆಎಂಎಫ್ ಮತ್ತಷ್ಟು ಅಭಿವೃದ್ಧಿ ಹೊಂದಲು ಮುಂದುವರಿದ ಭಾಗವೇ ನೂತನ ತಂತ್ರಾಂಶ ಕಾಮನ್ ಸಾಪ್ಟ್ ವೇರ್ ಬಳಕೆ ಮತ್ತು ಇಂಟರ್ ಪೇಸ್ ಅಳವಡಿಕೆ, ಆನ್ ಲೈನ್ ವ್ಯವಸ್ಥೆಯಡಿ ಹಾಲು ಸಂಗ್ರಹ ಆಡಳಿತದಲ್ಲಿ ಪಾರದರ್ಶಕತೆ ತರುವುದಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಹಾಲು ಖರೀದಿಗೆ ನೂತನ ತಂತ್ರಾಂಶ ಕಾಮನ್ ಸಾಪ್ಟ್ ವೇರ್ ಬಳಕೆ ಸ್ವಾಗತಾರ್ಹವಾಗಿದೆ ಎಂದು ಮನ್ಮುಲ್ ಮಾಜಿ ನಿರ್ದೆಶಕ ಚಿಕ್ಕೊನಹಳ್ಳಿ ತಮ್ಮಯ್ಯ ಅಭಿಪ್ರಾಯಪಟ್ಟರು

ತಾಲೂಕಿನ ಕೊಪ್ಪದ ಯಾಂಬರ್ಜಿಯರ್ ಮಠದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರತಿನಿಧಿಗಳು ಮತ್ತು ಹಾಲು ಉತ್ಪಾದಕರಿಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ಏರ್ಪಡಿಸಿದ್ದ ಕಾಮನ್ ಸಾಪ್ಟ್ ವೇರ್ ಉಪಯುಕ್ತತೆ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೆಎಂಎಫ್‌ನ ನಂದಿನಿ ಬ್ರಾಂಡ್ ಸಾಕಷ್ಟು ಎತ್ತರಕ್ಕೆ ಬೆಳೆದಿದೆ. ಕೆಎಂಎಫ್ ಮತ್ತು ಘಟಕಗಳು ಪ್ರಾರಂಭದ ದಿನದಿಂದ ಇಲ್ಲಿಯವರೆಗೂ ಹಾಲು ಸಂಗ್ರಹ, ಉತ್ಪಾದನೆಯಲ್ಲಿ‌ ವೈಜ್ಞಾನಿ ಅಂಶಗಳನ್ನು ಅನುಸರಿಸಿಕೊಂಡು ಬಂದಿವೆ ಎಂದರು.

ಕೆಎಂಎಫ್ ಮತ್ತಷ್ಟು ಅಭಿವೃದ್ಧಿ ಹೊಂದಲು ಮುಂದುವರಿದ ಭಾಗವೇ ನೂತನ ತಂತ್ರಾಂಶ ಕಾಮನ್ ಸಾಪ್ಟ್ ವೇರ್ ಬಳಕೆ ಮತ್ತು ಇಂಟರ್ ಪೇಸ್ ಅಳವಡಿಕೆ, ಆನ್ ಲೈನ್ ವ್ಯವಸ್ಥೆಯಡಿ ಹಾಲು ಸಂಗ್ರಹ ಆಡಳಿತದಲ್ಲಿ ಪಾರದರ್ಶಕತೆ ತರುವುದಾಗಿದೆ. ಇದರಿಂದ ಹಾಲು ಉತ್ಪಾದನೆಗೆ ಪ್ರೇರಣೆ ಮಾಡುತ್ತದೆ. ಗ್ರಾಹಕರ ಒಲವು ನಂದಿನಿ ಉತ್ಪನ್ನಗಳ ಕಡೆ ಬರಲಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ನ.ಲಿ.ಕೃಷ್ಣ ಮಾತನಾಡಿ, ಖಾಸಗಿ ಕಂಪನಿಗಳ ಹೊಡೆತದಿಂದ ಹಾಲು ಉತ್ಪಾದಕರನ್ನು ರಕ್ಷಿಸಿರುವುದು ಸರ್ಕಾರ ನೀಡುವ ಪ್ರೊತ್ಸಾಹ ಧನ ಮುಂದೆ ಸುಸ್ಥಿರತೆ ಸಾಧಿಸುವ ನಿಟ್ಟಿನಲ್ಲಿ‌ ನೂತನ ತಂತ್ರಜ್ಞಾನ ಬಳಕೆ, ಗುಣಮಟ್ಟದ ಹಾಲು ಉತ್ಪಾದನೆಗೆ ಒತ್ತು ನೀಡುವುದು ಅನಿವಾರ್ಯವಾಗಿದೆ ಎಂದರು.

ಎನ್ ಡಿಡಿಬಿ ಅಭಿವೃದ್ಧಿ ಪಡಿಸಿ ಆಟೊಮ್ಯಾಟಿಕ್ ಮಿಲ್ಕ್ ಕಲೆಕ್ಷನ್ ಸಿಸ್ಟಮ್ ಇದರ ನಿರ್ವಹಣೆಗೆ ಬಂದಿದೆ. ಕಾಮನ್ ಸಾಪ್ಟ್ ವೇರ್ ಹಾಲು ಉತ್ಪಾದಕರ ಸ್ನೇಹಿಯಾಗಿದೆ. ಕಾಮನ್ ಸಾಪ್ಟ್ ವೇರ್ ಬಳಕೆಗೆ ಹಾಲು ಉತ್ಪಾದಕರ ಸಂಘಗಳು ನೆರವಾಗಬೇಕು ಎಂದು ಕೋರಿದರು.

ಡಾ.ನೂತನ್ ಗೌಡ ಹಾಲಿನ ಜಿಡ್ಡಿನಾಂಶ ಹಾಗು ಘನೇತರ ಜಿಡ್ಡನಾಂಶದ ಗುಣಮಟ್ಟ ಹೆಚ್ಚಿಸುವಲ್ಲಿ ರಾಸುಗಳ ವೈಜ್ಞಾನಿಕ ಪಾಲನೆ ಅಗತ್ಯವಾಗಿದೆ. ಕಾಮನ್ ಸಾಪ್ಟ ವೇರ್ ಬಳಕೆಯಿಂದ ಉಂಟಾಗಬಹುದಾದ ತಾಂತ್ರಿಕ ಅಡಚಣೆಗಳನ್ನು ಪರಿಹರಿಸಿ ಮಾರ್ಗದರ್ಶನ ಮಾಡಲು ಮನ್ಮುಲ್ ನ ಪಶು ವೈದ್ಯಕೀಯ ವಿಭಾಗ ನಿಮ್ಮೊಟ್ಟಿಗೆ ಇರಲಿದೆ ಎಂದರು.

ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಸಿ.ಎಂ.ಕ್ರಾಂತಿಸಿಂಹ ನೂತನ ತಂತ್ರಾಂಶ ಬಳಕೆ ಬಗ್ಗೆ ಹಾಲು ಉತ್ಪಾದಕರಿಗೆ ಸಲಹೆ ನೀಡಿದರು. ವಿಸ್ತರಣಾಧಿಕಾರಿಗಳಾದ ರತ್ನಮ್ಮ ದಿಲ್ವರ್ ಸಾಬ್ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ