ಕಂಬಳದಲ್ಲಿ ತಂತ್ರಜ್ಞಾನ ಬಳಕೆ ದೊಡ್ಡ ಕೊಡುಗೆ: ಡಾ.ಮೋಹನ ಆಳ್ವ

KannadaprabhaNewsNetwork |  
Published : May 18, 2024, 12:32 AM IST
ಡಾ.ಮೋಹನ ಆಳ್ವ ಮಾತನಾಡುತ್ತಿರುವುದು | Kannada Prabha

ಸಾರಾಂಶ

ಈ ಸಾಲಿನ 24 ಕಂಬಳಗಳಲ್ಲಿ ಅತೀ ಹೆಚ್ಚು ಬಹುಮಾನ ಪಡೆದ ಮಾನದಂಡದ ಆಧಾರದಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ, ಸರಣಿ ಶ್ರೇಷ್ಠ ದ್ವಿತೀಯ ಪ್ರಶಸ್ತಿ, ಸರಣಿ ಶ್ರೇಷ್ಠ ದ್ವಿತೀಯ ಓಟಗಾರರಿಗೆ, ನಮ್ಮ ಕಂಬಳ ಗೌರವ ಸಮ್ಮಾನ, ನಮ್ಮ ಕಂಬಳ ಅಭಿನಂದನೆ ನಮ್ಮ ಕಂಬಳ ವಿಶೇಷ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಕಂಬಳದ ಮೂಲಕ ಸಾಂಪ್ರದಾಯಿಕತೆಯನ್ನು ಉಳಿಸುವ ಕೆಲಸ ನಡೆದಿದೆ. ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಕಂಬಳ ಕ್ಷೇತ್ರದ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡಲಾಗಿದೆ ಎಂದು ಮೂಡುಬಿದಿರೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ ಹೇಳಿದರು.

ನಮ್ಮ ಕುಡ್ಲ, ನಮ್ಮ ಕಂಬಳ ಟೀಂ ದುಬೈ ಹಾಗೂ ಸಂತ ಅಲೋಶಿಯಸ್‌ (ಪರಿಗಣಿತ ವಿ.ವಿ.) ಆಯೋಜನೆಯಲ್ಲಿ ಶುಕ್ರವಾರ ಸಂತ ಅಲೋಶಿಯಸ್‌ ಕಾಲೇಜಿನ ಎಲ್‌.ಎಫ್‌. ರಸ್ಕಿನ್ಹಾ ಹಾಲ್‌ನಲ್ಲಿ ನಡೆದ ‘ನಮ್ಮ ಕಂಬಳ ಪ್ರಶಸ್ತಿ 2024’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತುಳುನಾಡಿಗೆ ಬೇರೆ ಬೇರೆ ಆಯಾಮಗಳಲ್ಲಿ ಜಗತ್ತಿನಲ್ಲಿ ವಿಶೇಷ ಸ್ಥಾನಮಾನಗಳು ಸಿಕ್ಕಿವೆ. ಅದರಲ್ಲಿ ಪ್ರಮುಖ ಕ್ಷೇತ್ರವೆಂದರೆ ಕಂಬಳ. ಜಾಗತಿಕ ಮಟ್ಟದಲ್ಲಿ ಕರಾವಳಿಯನ್ನು ‘ಕಂಬಳ’ದ ಮೂಲಕ ಗುರುತಿಸಲಾಗುತ್ತಿದೆ. ಇಂದು ಕಂಬಳ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. 24 ಕರೆಗಳು ಅವಿಭಜಿತ ಜಿಲ್ಲೆಯಲ್ಲಿ ನಿರ್ಮಾಣವಾಗಿರುವುದು ದೊಡ್ಡ ಕ್ರಾಂತಿ ಎಂದರು.

ಈ ಸಂದರ್ಭ ‘ನಮ್ಮ ಕಂಬುಲ ನನ ದುಂಬುಲ’ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು.ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ, ಮಾಜಿ ಸಚಿವ ಕೃಷ್ಣ ಪಾಲೇಮಾರ್‌, ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು, ಸಂತ ಅಲೋಶಿಯಸ್‌ ಶಿಕ್ಷಣ ಸಂಸ್ಥೆಗಳ ರೆಕ್ಟರ್‌ ಫಾ. ಮೆಲ್ವಿನ್‌ ಜೋಸೆಫ್‌ ಪಿಂಟೋ, ರೋಹನ್‌ ಕಾರ್ಪೊರೇಶನ್‌ ನಿರ್ದೇಶಕ ರೋಹನ್‌ ಮೊಂತೇರೋ, ಪ್ರಮುಖರಾದ ಪ್ರತಾಪ್‌ ಮಧುಕರ ಕಾಮತ್‌, ಪ್ರಶಾಂತ್‌ ಶೇಟ್‌, ಪ್ರೊ. ಗುಣಪಾಲ ಕಡಂಬ, ಭಾಸ್ಕರ ಕೋಟ್ಯಾನ್‌, ಡಾ. ಆದರ್ಶ ಗೌಡ, ಹರೀಶ್‌ ಕರ್ಕೇರ, ಮೋಹನ್‌ ಕರ್ಕೇರ, ಸುರೇಶ್‌ ಕರ್ಕೇರ ಮತ್ತಿತರರಿದ್ದರು.

ಕದ್ರಿ ನವನೀತ ಶೆಟ್ಟಿ ಪ್ರಸ್ತಾವಿಕ ಮಾತನಾಡಿದರು. ಲೀಲಾಕ್ಷ ಬಿ. ಕರ್ಕೇರ ಸ್ವಾಗತಿಸಿದರು. ನಿತಿನ್‌ ಸಾಲ್ಯಾನ್‌ ನಿರೂಪಿಸಿದರು. ಈ ಸಾಲಿನ 24 ಕಂಬಳಗಳಲ್ಲಿ ಅತೀ ಹೆಚ್ಚು ಬಹುಮಾನ ಪಡೆದ ಮಾನದಂಡದ ಆಧಾರದಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ, ಸರಣಿ ಶ್ರೇಷ್ಠ ದ್ವಿತೀಯ ಪ್ರಶಸ್ತಿ, ಸರಣಿ ಶ್ರೇಷ್ಠ ದ್ವಿತೀಯ ಓಟಗಾರರಿಗೆ, ನಮ್ಮ ಕಂಬಳ ಗೌರವ ಸಮ್ಮಾನ, ನಮ್ಮ ಕಂಬಳ ಅಭಿನಂದನೆ ನಮ್ಮ ಕಂಬಳ ವಿಶೇಷ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.ನಂದಳಿಕೆಗೆ ಅಗ್ರ ಪ್ರಶಸ್ತಿ

2023-24ನೇ ಸಾಲಿನ ಕಂಬಳ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಹಗ್ಗ ಹಿರಿಯ ವಿಭಾಗದಲ್ಲಿ ಕೋಣಗಳ ಯಜಮಾನ ನಂದಳಿಕೆ ಶ್ರೀಕಾಂತ್‌ ಭಟ್‌ ಪಡೆದುಕೊಂಡಿದ್ದಾರೆ. ಈ ಮೂಲಕ ಈ ಸಾಲಿನ ಕಂಬಳ ಋತುವಿನಲ್ಲಿ ಇದೇ ಮೊದಲ ಬಾರಿಗೆ ಕಂಬಳ ಕ್ಷೇತ್ರದ ಸಾಧನೆಗೂ ಪ್ರತ್ಯೇಕ ಪ್ರಶಸ್ತಿ ನೀಡಿದಂತಾಗಿದೆ.ಉಳಿದಂತೆ 9 ಪ್ರಥಮ, 8 ದ್ವಿತೀಯ ಸೇರಿ ಒಟ್ಟು 19 ಮಂದಿಗೆ ಬಹುಮಾನ ನೀಡಲಾಯಿತು. ನಂದಳಿಕೆಯ ಕೋಣಗಳು 12 ಪ್ರಥಮ ಮತ್ತು 8 ದ್ವಿತೀಯ ಸೇರಿ ಒಟ್ಟು 20 ಬಹುಮಾನ

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ