ಗ್ರಾಪಂ ಅಭಿವೃದ್ಧಿಗೆ ಅಧಿಕಾರ ಚಲಾಯಿಸಿ: ಡಿ.ಆರ್‌. ಪಾಟೀಲ

KannadaprabhaNewsNetwork |  
Published : May 04, 2026, 02:45 AM IST
ಪಾಟೀಲ್‌ | Kannada Prabha

ಸಾರಾಂಶ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳಾಗಿದ್ದು, ಆ ದಿಸೆಯಲ್ಲಿ ಗ್ರಾಪಗಳಿಗೆ ಸರ್ಕಾರ ಹೆಚ್ಚಿನ‌ ಅಧಿಕಾರ ನೀಡಿದ್ದು, ಅದನ್ನು ನಿಯಮಾನುಸಾರ ಬಳಸುವಂತಾಗಬೇಕು ಎಂದು ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಹೇಳಿದರು.

ಮಡಿಕೇರಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳಾಗಿದ್ದು, ಆ ದಿಸೆಯಲ್ಲಿ ಗ್ರಾಪಗಳಿಗೆ ಸರ್ಕಾರ ಹೆಚ್ಚಿನ‌ ಅಧಿಕಾರ ನೀಡಿದ್ದು, ಅದನ್ನು ನಿಯಮಾನುಸಾರ ಬಳಸುವಂತಾಗಬೇಕು ಎಂದು ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಹೇಳಿದರು.

ತಾಲೂಕಿನ ಹೊದ್ದೂರು ಗ್ರಾಪಂ ಸಭಾಂಗಣದಲ್ಲಿ 2026-27ನೇ ಸಾಲಿನ‌ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆ ತಯಾರಿ ಬಗ್ಗೆ ಮಾಹಿತಿ ಪಡೆದು ಮಾತನಾಡಿದರು.ಗ್ರಾಪಂ ಅಭಿವೃದ್ದಿಗೆ ಕಾನೂನಿನ ಅಧಿಕಾರ ಚಲಾಯಿಸಬೇಕು. ಸಂವಿಧಾನದ ಆಶಯದಂತೆ ನಡೆದುಕೊಳ್ಳಬೇಕು. ಪಂಚಾಯತ್ ರಾಜ್ ವ್ಯವಸ್ಥೆ ಬಲಿಷ್ಠವಾಗಿರಬೇಕು. ಆ ಮೂಲಕ ಗ್ರಾಮಗಳ ಅಭಿವೃದ್ಧಿ ಆಗಬೇಕು ಎಂದು ಹೇಳಿದರು.

ಜನರ ಪ್ರತಿನಿಧಿಗಳು ಜನರೇ ಆಗಿದ್ದಾರೆ. ಆದ್ದರಿಂದ ಸ್ಥಳೀಯವಾಗಿಯೇ ಶಾಲೆ, ಆಸ್ಪತ್ರೆ, ಅಂಗನವಾಡಿ ಮತ್ತಿತರ ಅಗತ್ಯ ಹುದ್ದೆಗಳ ನೇಮಕವೂ ಆಗಬೇಕು ಎಂದು ಸಲಹೆ ಮಾಡಿದರು. ಕಾನೂನಿನ‌ ಅಧಿಕಾರ ಹಸ್ತಾಂತರ ಆಗಬೇಕು. ಗ್ರಾಮ ಸಭೆಯ ನಿರ್ಣಯವೇ ಅಂತಿಮ‌ ಆಗಬೇಕು. ಗ್ರಾಮ ಅಭಿವೃದ್ಧಿಗೆ ಸ್ಥಳೀಯರೇ ಚಿಂತಿಸಬೇಕು ಎಂದು ವಿವರಿಸಿದರು. ಗ್ರಾಪಂ ವ್ಯವಸ್ಥೆಯಲ್ಲಿ ಪಕ್ಷ ರಾಜಕಾರಣ ಇರುವುದಿಲ್ಲ. ಆದ್ದರಿಂದ ಗ್ರಾಮಸ್ಥರೇ ಎಲ್ಲ ಬಡ ಜನರ ಏಳ್ಗೆಯನ್ನು ಬಯಸಿ ಒಮ್ಮತದ ತೀರ್ಮಾನ‌ ತೆಗೆದುಕೊಳ್ಳಬಹುದಾಗಿದೆ ಎಂದರು. ಗ್ರಾಪಂಗಳಿಗೆ ಇರುವ ಅಧಿಕಾರ ಮತ್ತು ಕಾನೂನಿನ ಬಗ್ಗೆ ಕೈಪಿಡಿ ಮುದ್ರಿಸಿ ನೀಡುವಂತಾಗಬೇಕು ಎಂದು ಸಲಹೆ ನೀಡಿ, ಮಹಾತ್ಮ ಗಾಂಧಿಯವರ ಕನಸಿನ ರಾಮ ರಾಜ್ಯ ಮತ್ತು ರಾಜೀವ್ ಗಾಂಧಿ ಅವರ ಗ್ರಾಮೀಣಾಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಆಧುನಿಕ ತಂತ್ರಜ್ಞಾನದ ಆಶಯದೊಂದಿಗೆ ಗ್ರಾಮಗಳ ಅಭಿವೃದ್ಧಿ ಮತ್ತಷ್ಟು ಆಗಬೇಕು ಎಂದು ಹೇಳಿದರು.

ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ವಿಶೇಷ ಸಲಹೆಗಾರರಾದ ಕೆಂಪೇಗೌಡ ಅವರು ಮಾತನಾಡಿ, ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಚುನಾಯಿತ ಸರ್ಕಾರ ಇರಬೇಕು ಎಂಬುದು ಸರ್ಕಾರದ ಆಶಯವಾಗಿದ್ದು, ಆ ನಿಟ್ಟಿನಲ್ಲಿ ಸ್ಥಳೀಯ ಆಡಳಿತಕ್ಕೆ ವಿಶೇಷವಾದ ಅಧಿಕಾರ ನೀಡಲಾಗಿದೆ ಎಂದರು. 2027-28ನೇ ಸಾಲಿನಲ್ಲಿ ಜನರ ಯೋಜನೆಯಾಗಿ ರೂಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿಂತನೆ ನಡೆಸಿದ್ದು, ಅದರಂತೆ ಜನರ ಭಾಗವಹಿಸುವಿಕೆ ಅತಿ ಮುಖ್ಯ ಎಂದು ಕೆಂಪೇಗೌಡ ವಿವರಿಸಿದರು. ಗ್ರಾಪಂ ನಿಕಟಪೂರ್ವ ಸದಸ್ಯ ಮೊಣ್ಣಪ್ಪ‌ ಮಾತನಾಡಿ ಗ್ರಾಪಂಗಳಿಗೆ ಅನುದಾನ ಹೆಚ್ಚಿಸಬೇಕು ಎಂದು ಕೋರಿದರು. ಗ್ರಾಪಂ ನಿಕಟಪೂರ್ವ ಅಧ್ಯಕ್ಷರಾದ ಹಂಸ ಮಾತನಾಡಿ, ಗ್ರಾಮೀಣ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ. ಆ ನಿಟ್ಟಿನಲ್ಲಿ ಸರ್ಕಾರ ಮತ್ತು ಸ್ಥಳೀಯ ಆಡಳಿತ ಸಮನ್ವಯತೆ ಮತ್ತು ದೂರದೃಷ್ಟಿಯಿಂದ ಕಾರ್ಯನಿರ್ವಹಣೆ ಅಗತ್ಯ ಎಂದರು. ಗ್ರಾಪಂ ಮಾಜಿ ಸದಸ್ಯರಾದ ಕುಸುಮಾವತಿ, ಹಮೀದ್, ಲಕ್ಷ್ಮಿ, ಜಿಪಂ ಸಹಾಯಕ ಕಾರ್ಯದರ್ಶಿ ಅಬ್ದುಲ್ ನಬಿ, ತಾಪಂ ಇಒ ಶೇಖರ್, ಆಡಳಿತಾಧಿಕಾರಿ ಪಿ.ಪಿ. ಕವಿತಾ, ಪಿಡಿಒ ವತ್ಸಲಾ, ಅಬ್ದುಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು, ಸ್ಥಳೀಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆಗಾಲದ ಮೊದಲು ಸೇತುವೆ ಕಾಮಗಾರಿ ಪೂರ್ಣವಾಗದಿದ್ದರೆ ಸಂಚಾರಕ್ಕೆ ಸಂಚಕಾರ
ಉದ್ಯಮ- ತಂತ್ರಜ್ಞಾನ ಬೆಳವಣಿಗೆಯ ಕೇಂದ್ರವಾಗಿ ಮಂಗಳೂರು