ನೆಲಜಿ ಇಗ್ಗುತ್ತಪ್ಪ ದೇವರ ಭಕ್ತ ಸಮಾರಾಧನೆ ವಾರ್ಷಿಕ ಉತ್ಸವ

KannadaprabhaNewsNetwork |  
Published : May 04, 2026, 02:45 AM IST
ನೆಲಜಿ ಗ್ರಾಮದ ಶ್ರೀ ಇಗ್ಗುತ್ತಪ್ಪ ದೇವರ ಭಕ್ತ ಸಮಾರಾಧನೆಉತ್ಸವದಲ್ಲಿ ದೇವರ ನೃತ್ಯ ಬಲಿ ಶ್ರದ್ಧಾ ಭಕ್ತಿಯಿಂದ ಜರುಗಿತು. | Kannada Prabha

ಸಾರಾಂಶ

ನೆಲಜಿ ಗ್ರಾಮದ ಶ್ರೀ ಇಗ್ಗುತ್ತಪ್ಪ ದೇವರ ಭಕ್ತ ಸಮಾರಾಧನೆ ವಾರ್ಷಿಕ ಉತ್ಸವ ಶ್ರದ್ಧಾ ಭಕ್ತಿ ಹಾಗೂ ವಿಜೃಂಭಣೆಯಿಂದ ನಡೆಯಿತು.

ನಾಪೋಕ್ಲು: ನೆಲಜಿ ಗ್ರಾಮದ ಶ್ರೀ ಇಗ್ಗುತ್ತಪ್ಪ ದೇವರ ಭಕ್ತ ಸಮಾರಾಧನೆ ವಾರ್ಷಿಕ ಉತ್ಸವ ಶ್ರದ್ಧಾ ಭಕ್ತಿ ಹಾಗೂ ವಿಜೃಂಭಣೆಯಿಂದ ನಡೆಯಿತು.ದೇವಾಲಯದ ಭಕ್ತ ಜನ ಸಂಘದ ವತಿಯಿಂದ ಪ್ರತಿ ವರ್ಷ ನಡೆಸುವ ಭಕ್ತ ಸಮಾರಾಧನೆ ಉತ್ಸವದಲ್ಲಿ ತುಲಾಭಾರ ಸೇವೆ, ಮಹಾಮಂಗಳಾರತಿ, ಮಹಾಪೂಜೆ, ಬಲಿ ಹಾಗೂ ಅನ್ನಸಂತರ್ಪಣೆ ನಡೆಯಿತು. ಉತ್ಸವದಲ್ಲಿ 16 ತುಲಾಭಾರ ಸೇವೆಗಳು ಜರುಗಿದವು ಭಕ್ತರು ಕಾಫಿ, ಕಾಳು ಮೆಣಸು ಮತ್ತು ಇತರ ಧಾನ್ಯಗಳನ್ನು ದೇವಾಲಯಕ್ಕೆ ಉದಾರವಾಗಿ ನೀಡಿದರು.

ಇದಕ್ಕೂ ಮೊದಲು ಭಕ್ತ ಜನ ಸಂಘದ ವಾರ್ಷಿಕ ಮಹಾಸಭೆಯ ದೇವಾಲಯದ ಆವರಣದಲ್ಲಿ ಆಯೋಜಿಸಲಾಯಿತು. ಸಂಘದ ಅಧ್ಯಕ್ಷ ಮುಕ್ಕಾಟಿರ ವಿನಯ್ ಅವರ ಅಧ್ಯಕ್ಷತೆಯಲ್ಲಿ ಜರಗಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಲೋಕೋಪಯೋಗಿ ಇಲಾಖೆಯ ಜ್ಯೂನಿಯರ್ ಎಂಜಿನಿಯರ್ ಮೊಣ್ಣಂಡ ಡಿ. ಸೋಮಯ್ಯ, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಮುಂಡಂಡ ಸಿ. ನಾಣಯ್ಯ, ಭಕ್ತ ಜನ ಸಂಘದ ಕಾರ್ಯದರ್ಶಿ ಸಿ. ಈರಪ್ಪ, ಸಮಿತಿ ಸದಸ್ಯರು, ತಕ್ಕ ಮುಖ್ಯಸ್ಥರಾದ ಬದಂಚೆಟ್ಟಿರ ಬಿ. ನಾಣಯ್ಯ, ನಾಪನೆರವಂಡ ಸಿ.ಪೊನ್ನಪ್ಪ, ಕೈಯಂದಿರ ರಮೇಶ್ ಉತ್ತಯ್ಯ, ಬಾಲೆಯಡ ಕುಂಞಪ್ಪ ಪಾಲ್ಗೊಂಡಿದ್ದರು.

ಮನಿಯಪಂಡ ಪಾರ್ವತಿ ಪ್ರಾರ್ಥನೆಗೆ ಸಭೆಯಲ್ಲಿ ಬಾಲೆಯಡ ಬೆಳ್ಯಪ್ಪ ಲೆಕ್ಕಪತ್ರ ಮಂಡಿಸಿದರು. ಸಭೆಯಲ್ಲಿ ಭಕ್ತ ಜನ ಸಂಘದ ಕಾರ್ಯವೈಖರಿ ಬಗ್ಗೆ, ದೇವಸ್ಥಾನದ ಅಭಿವೃದ್ಧಿ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆಗಾಲದ ಮೊದಲು ಸೇತುವೆ ಕಾಮಗಾರಿ ಪೂರ್ಣವಾಗದಿದ್ದರೆ ಸಂಚಾರಕ್ಕೆ ಸಂಚಕಾರ
ಉದ್ಯಮ- ತಂತ್ರಜ್ಞಾನ ಬೆಳವಣಿಗೆಯ ಕೇಂದ್ರವಾಗಿ ಮಂಗಳೂರು