ಕನ್ನಡ ಪ್ರಭ ವಾರ್ತೆ ಮುಧೋಳ
2024-25ನೇ ಸಾಲಿನ ಅಂತಾರಾಷ್ಟ್ರೀಯ ಲಯನ್ಸ್ ಕ್ಲಬ್ ಸಂಸ್ಥೆಯ ಮುಧೋಳ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಮುಧೋಳ ತಾಲೂಕು ಲಯನ್ಸ್ ಕ್ಲಬ್ ಕ್ರಿಯಾಶೀಲವಾಗಿ ಉತ್ತಮ ಕೆಲಸ ಮಾಡುತ್ತಿರುವುದು ಹೆಮ್ಮೆ ಮತ್ತು ಅಭಿಮಾನದ ಸಂಗತಿ. ಇದೇ ರೀತಿ ನೂತನ ಪದಾಧಿಕಾರಿಗಳು ಮುಂದುವರಿಸಿಕೊಂಡು ಹೋಗಬೇಕೆಂದು ಕಿವಿಮಾತು ಹೇಳಿದರು.
2024-25ನೇ ಸಾಲಿನ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ವಿ. ಪಾಟೀಲ ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿ, ನನ್ನ ಅಧಿಕಾರದ ಅವಧಿಯಲ್ಲಿ ಸಮಾಜಮುಖಿ ಕೆಲಸ ಮಾಡುವ ಉದ್ದೇಶ ಹೊಂದಿದ್ದೇನೆ. ಎಲ್ಲ ನೂತನ ಪದಾಧಿಕಾರಿಗಳ ಸಲಹೆ, ಸೂಚನೆ ಮತ್ತು ವಿಶ್ವಾಸ ಪಡೆದು ತಾವು ಕೈಗೊಳ್ಳುವ ಕೆಲಸ ಕಾರ್ಯರೂಪಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.ಭೂಸೇನೆಯ ನಿವೃತ್ತ ಡೆಪ್ಯೂಟಿ ಚೀಪ್ ರಮೇಶ ಹಲಗಲಿ ಮತ್ತು ನಿರಾಣಿ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕ ಸಂಗಮೇಶ ನಿರಾಣಿ ಮುಖ್ಯ ಅತಿಥಿ ಸ್ಥಾನವಹಿಸಿ ಮಾತನಾಡಿ, ಮುಧೋಳ ತಾಲೂಕು ಔದ್ಯೋಗಿಕ ಕೇಂದ್ರವಾಗಿದ್ದು, ಇಲ್ಲಿ ಸಾಕಷ್ಟು ಕೆಲಸ ಮಾಡಲು ಅವಕಾಶಗಳಿದ್ದು, ಅದನ್ನು ಅರಿತು ಲಯನ್ಸ್ ಕ್ಲಬ್ ಸದಸ್ಯರು ಹೊಸ ಹೊಸ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕಾರ್ಯ ಪ್ರವೃತ್ತರಾಗಬೇಕೆಂದು ಸಲಹೆ ನೀಡಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರೊ .ಅಶೋಕ ಗಂಗಣ್ಣವರ, ಕೆ.ವಿ.ಪಾಟೀಲರಿಗೆ ಅಧಿಕಾರ ಹಸ್ತಾಂತರಿಸಿದರು. ಪ್ರಸಕ್ತ ಸಾಲಿನ ನೂತನ ಪದಾಧಿಕಾರಿಗಳಾದ ಹನುಮಂತ ಸುಕಾಲಿ, ರಾಜಶೇಖರ ಗೋಸಾರ, ಬಸವರಾಜ ಗೋಸಾರ, ಡಾ.ವಿಜಯಕುಮಾರ ಹೊಸಟ್ಟಿ, ಡಾ.ಸತೀಶ ಮಲಘಾಣ, ಡಾ.ಕಲ್ಯಾಣಕುಮಾರ ಮಸಳಿ, ಶಿವಾನಂದ ಕಲ್ಯಾಣಿ, ರಾಜೇಂದ್ರ ಕೋಲೂರ, ಬಿ.ಆರ್. ಬಿರಾದರ, ಮಲ್ಲಿಕಾರ್ಜುನ ಬಟಕುರ್ಕಿ, ಡಾ.ಗುರುರಾಜ ಕುಲಕರ್ಣಿ, ಮಹಾದೇವ ನ್ಯಾಮಗೌಡರ, ಶಿವಾನಂದ ಡಂಗಿ, ಶಿವಾನಂದ ಹಾಡಕರ, ಎ.ಐ. ರಾಮದುರ್ಗ ಅಧಿಕಾರ ವಹಿಸಿಕೊಂಡರು.