ಮಕ್ಕಳನ್ನು ಶಿಕ್ಷಣದ ಮೂಲಕ ಸುಸಂಸ್ಕೃತರನ್ನಾಗಿಸಿ: ಶಾರದಮ್ಮ ಸಲಹೆ

KannadaprabhaNewsNetwork |  
Published : Apr 25, 2025, 12:36 AM IST
ಚಿತ್ರ 1 | Kannada Prabha

ಸಾರಾಂಶ

Utilize the facilities of the Milk Union Association

-ವಾಗ್ದೇವಿ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಶಿಕ್ಷಕರಿಗೆ ಗುರುವಂದನೆ

-----

ಕನ್ನಡಪ್ರಭ ವಾರ್ತೆ ಹಿರಿಯೂರು

ಗುರುವಿನ ಸ್ಥಾನಕ್ಕೆ ಪೂಜ್ಯನೀಯ ಸ್ಥಾನವಿದೆ. ಕಳೆದ 20ವರ್ಷಗಳ ಹಿಂದಿನ ತಮ್ಮ ವಿದ್ಯಾರ್ಥಿ ಜೀವನವನ್ನು ಸ್ಮರಣೆ ಮಾಡಿಕೊಂಡು ಆ ಸಮಯದ ಗುರುಗಳಿಗೆ ಗೌರವ ಸಲ್ಲಿಸುತ್ತಿರುವುದು ಪ್ರಶಂಸನೀಯ. ಶಿಕ್ಷಕರ ವೃತ್ತಿ ಜೀವನದಲ್ಲಿ ಇದು ಮರೆಯಲಾಗದ ದಿನ. ಮಕ್ಕಳನ್ನು ಶಿಕ್ಷಣದ ಮೂಲಕ ಸುಸಂಸ್ಕೃತರನ್ನಾಗಿ ಸಂಸ್ಕಾರಯುತರನ್ನಾಗಿ ಮಾಡಿ, ನಿಮ್ಮಂತೆ ಗುರುಗಳ ಸೇವೆಯನ್ನು ಮಾಡುವಂತೆ ಬೆಳೆಸಿ ಎಂದು ನಿವೃತ್ತ ಶಿಕ್ಷಕಿ ಶಾರದಮ್ಮ ಹೇಳಿದರು.

ಅವರು ನಗರದ ಸಂಗೀತ್ ಕಂಫರ್ಟ್ ಸಭಾಂಗಣದಲ್ಲಿ ವಾಗ್ದೇವಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ1990ರಿಂದ 2002ನೇ ಸಾಲಿನವರೆಗೆ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನೆ ಮತ್ತು ಗುರುಶಿಷ್ಯರ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು.

ಕಳೆದ 20ವರ್ಷಗಳ ಹಿಂದಿನ ವಿದ್ಯಾರ್ಥಿ ಜೀವನವನ್ನು ಸ್ಮರಿಸಿ ಗುರುಗಳಿಗೆ ಗೌರವ ಸಲ್ಲಿಸುತ್ತಿರುವುದು ಪ್ರಶಂಸನೀಯ. ಮಕ್ಕಳನ್ನು ಶಿಕ್ಷಣದ ಮೂಲಕ ಸುಸಂಸ್ಕೃತರನ್ನಾಗಿ ಸಂಸ್ಕಾರಯುತರನ್ನಾಗಿ ಮಾಡಿ, ನಿಮ್ಮಂತೆ ಗುರುಗಳ ಸೇವೆಯನ್ನು ಮಾಡುವಂತೆ ಬೆಳೆಸಿ ಎಂದರು.

ಹಿರಿಯ ದೈಹಿಕ ಶಿಕ್ಷಣ ಶಿಕ್ಷಕ ಶಿವಶಂಕರ್‌ಮಠದ್ ಮಾತನಾಡಿ, ಜೀವನದಲ್ಲಿ ಶಿಸ್ತು , ಸಂಸ್ಕಾರ, ವಿದ್ಯೆ ಮನುಷ್ಯನನ್ನು ಉನ್ನತ ಸ್ಥಾನಕ್ಕೆ ಕೊಂಡೂಯ್ಯುತ್ತವೆ. ಹಳೆಯ ವಿದ್ಯಾರ್ಥಿಗಳಾದ ನೀವುಗಳು ಇಂದು ನಿಮ್ಮದೇ ಆದ ಬದುಕನ್ನು ಕಟ್ಟಿಕೊಂಡಿದ್ದೀರಿ. ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಸಮಾಜದ ಅಭಿವೃದ್ಧಿಗೆ ಕೈ ಜೋಡಿಸುವ ಜೊತೆಗೆ ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ನಿಮ್ಮ ಕರ್ತವ್ಯ ಎಂದರು.

ನಿವೃತ್ತ ಶಿಕ್ಷಕರಾದ ಗಿರಿಜಮ್ಮ, ಕಸ್ತೂರಿ, ವರಮಹಾಲಕ್ಷ್ಮಿ, ಜಯಲಕ್ಷ್ಮಿ, ಶಿರೀನ್, ವಿಶಾಲಾಕ್ಷಿ , ಯಶೋಧ, ಗೀತಾಲಕ್ಷ್ಮಿ, ಶಕೀಲಾ, ಶೋಭಾ , ರುಕ್ಮಿಣಿ, ಶಿಕ್ಷಕರುಗಳಾದ ರಾಜನ್, ಭರತ್, ವೀರೇಶ್, ಹಳೆಯ ವಿದ್ಯಾರ್ಥಿಗಳಾದ ಅಬ್ದುಲ್ ಕರೀಮ್, ತನ್ವೀರ್‌ ಉಲ್ಲಾ, ಮೈಲಾರಿ, ಅರುಣಾ,

ಜಗದೀಶ್‌ ಭಂಡಾರಿ, ಪೈರೋಜ್, ಅಂಬಿಕಾ, ನೀತಾ,ಲಕ್ಷ್ಮಿ, ದೀಪಾ, ಶಿಲ್ಪಾ ಉಪಸ್ಥಿತರಿದ್ದರು.

----

ಫೋಟೊ: ನಗರದ ಸಂಗೀತ ಕಂಫರ್ಟ್ ಸಭಾಂಗಣದಲ್ಲಿ ವಾಗ್ದೇವಿ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಶಿಕ್ಷಕರಿಗೆ ಗುರುವಂದನೆ ಕಾರ್ಯಕ್ರಮ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ದ್ವೇಷ ಮಸೂದೆಯಿಂದ ಭಿನ್ನ ದನಿ ದಮನ ಆಗಲ್ಲ ''
3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ