ಉತ್ತರ ಕನ್ನಡ ಕ್ಷೇತ್ರದಲ್ಲಿ ಶೇ. ೭೬.೫೩ ಮತದಾನ

KannadaprabhaNewsNetwork |  
Published : May 09, 2024, 01:01 AM IST
ಕುಮಟಾದ ಬಾಳಿಗಾ ಕಾಲೇಜಿನಲ್ಲಿ ಮತಯಂತ್ರ ಇಟ್ಟಿರುವ ಕೊಠಡಿಗೆ ಭದ್ರತೆ ನೀಡಿರುವುದು. | Kannada Prabha

ಸಾರಾಂಶ

೮,೨೩,೬೦೪ ಪುರುಷ ಮತದಾರರಲ್ಲಿ ೬,೩೩,೬೩೦, ೮,೧೭,೫೩೬ ಮಹಿಳೆಯರಲ್ಲಿ ೬,೨೨,೩೯೨, ೧೬ ಇತರೆ ಮತದಾರರಲ್ಲಿ ೫ ಜನರು ಮತದಾನ ಮಾಡಿದ್ದಾರೆ.

ಕಾರವಾರ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಂಗಳವಾರ ನಡೆದ ಮತದಾನದ ಪ್ರಮಾಣ ಉತ್ತರ ಕನ್ನಡ ಕ್ಷೇತ್ರದಲ್ಲಿ ಶೇ. ೭೬.೫೩ರಷ್ಟು ಆಗಿದ್ದು, ಕ್ಷೇತ್ರದಲ್ಲಿ ದಾಖಲೆ ಮತದಾನ ಆದಂತಾಗಿದೆ. ಕಳೆದ ಚುನಾವಣೆ(2019)ಯಲ್ಲಿ ಅತಿಹೆಚ್ಚು ಅಂದರೆ ಶೇ. 74.16ರಷ್ಟು ಮತದಾನವಾಗಿತ್ತು. ಈ ಬಾರಿ ಆ ದಾಖಲೆಯನ್ನೂ ಮತದಾರರು ಅಳಿಸಿಹಾಕಿದ್ದಾರೆ.

ಖಾನಾಪುರ ೨,೧೯,೪೪೨ ಮತದಾರರಲ್ಲಿ ೧,೬೨,೦೬೫, ಕಿತ್ತೂರು ೨,೦೦,೩೦೧ ಜನರಲ್ಲಿ ೧,೫೨,೭೭೨, ಹಳಿಯಾಳ ೧,೮೫,೬೯೫ ಮತದಾರರಲ್ಲಿ ೧,೪೦,೯೭೧, ಕಾರವಾರ ೨,೨೪,೮೪೯ ಮತದಾರರಲ್ಲಿ ೧,೬೫,೫೯೯, ಕುಮಟಾ ೧,೯೧,೪೭೫ ಜನರಲ್ಲಿ ೧,೪೭,೩೦೭, ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ೨,೨೭,೭೦೬ ಜನರಲ್ಲಿ ೧,೭೩,೦೭೧, ಶಿರಸಿ ೨,೦೪,೮೯೮ ಜನರಲ್ಲಿ ೧,೬೪,೯೦೫ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ೧,೮೬,೭೪೫ ಮತದಾರರಲ್ಲಿ ೧,೪೯,೩೩೭ ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ವಿಧಾನಸಭಾ ಕ್ಷೇತ್ರದ ಶೇಕಡಾವಾರು: ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ ಶೇ. ೭೩.೮೫, ಕಿತ್ತೂರು ಶೇ. ೭೬.೨೭, ಹಳಿಯಾಳ ಶೇ. ೭೫.೯೧, ಕಾರವಾರ ಶೇ. ೭೩.೬೩, ಕುಮಟಾ ಶೇ. ೭೬.೯೩, ಭಟ್ಕಳ ಶೇ. ೭೬.೦೦ ಶಿರಸಿ ಶೇ. ೮೦.೪೮, ಯಲ್ಲಾಪುರ ಕ್ಷೇತ್ರದಲ್ಲಿ ಶೇ. ೭೯.೯೬ ರಷ್ಟು ಮತದಾನವಾಗಿದೆ.

ಒಟ್ಟೂ ೮ ವಿಧಾನಸಭಾ ಕ್ಷೇತ್ರದಿಂದ ೧೬,೪೧,೧೫೬ ಮತದಾರರಿದ್ದು, ಇವರಲ್ಲಿ ೧೨,೫೬,೦೨೭ ಜನರು ಮತದಾನ ಮಾಡಿದ್ದಾರೆ. ೮,೨೩,೬೦೪ ಪುರುಷ ಮತದಾರರಲ್ಲಿ ೬,೩೩,೬೩೦, ೮,೧೭,೫೩೬ ಮಹಿಳೆಯರಲ್ಲಿ ೬,೨೨,೩೯೨, ೧೬ ಇತರೆ ಮತದಾರರಲ್ಲಿ ೫ ಜನರು ಮತದಾನ ಮಾಡಿದ್ದಾರೆ.

೨೫ ಮತಗಟ್ಟೆಗಳಲ್ಲಿ ಕಡಿಮೆ ಮತದಾನವಾಗಿದ್ದು, ಹಳಿಯಾಳದ ಮಹಾತ್ಮ ಗಾಂಧಿ ಸೆಂಟರಿ ಮೆಮೋರಿಯಲ್ಲಿ ವಿದ್ಯಾಲಯದಲ್ಲಿ ಶೇ. ೪೭.೦೫ ರಷ್ಟಾಗಿದೆ. ೨೫ ಮತಗಟ್ಟೆಗಳಲ್ಲಿ ಹೆಚ್ಚಿನ ಮತದಾನವಾಗಿದ್ದು, ಶಿರಸಿ ತಾಲೂಕಿನ ಶಿರಗುಣಿ ಸಕಿಪ್ರಾ ಶಾಲೆಯಲ್ಲಿ ೯೪.೩೮ರಷ್ಟು ಮತದಾನವಾಗಿದೆ.ಸ್ಟ್ರಾಂಗ್ ರೂಮ್

ಕುಮಟಾದ ಡಾ. ಎ.ಬಿ. ಬಾಳಿಗಾ ಕಾಲೇಜಿನಲ್ಲಿ ಮತಯಂತ್ರಗಳನ್ನು ಇಡಲು ಸ್ಟ್ರಾಂಗ್ ರೂಮ್ ತೆರೆಯಲಾಗಿದ್ದು, ಈಗಾಗಲೇ ಯಂತ್ರಗಳು ಕೊಠಡಿಯೊಳಗೆ ಭದ್ರಗೊಂಡಿವೆ. ೮ ವಿಧಾನಸಭಾ ಕ್ಷೇತ್ರಕ್ಕೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದ್ದು, ಸಿಆರ್‌ಪಿಎಫ್ ತಂಡ ೨೪x೭ ಭದ್ರತೆ ನೀಡುತ್ತಿದೆ. ಜೂ. ೪ರಂದು ನಡೆಯುವ ಮತ ಎಣಿಕೆಯ ದಿನ ಭದ್ರತಾ ಕೊಠಡಿಗಳನ್ನು ತೆರೆಯಲಾಗುತ್ತದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ