ಯಲ್ಲಾಪುರ: ಖಾಸಗಿ ವಾಹಿನಿಯ ಕಾಮಿಡಿ ಕಿಲಾಡಿ ಶೋನಲ್ಲಿ ಭಾಗವಹಿಸಿದ್ದ ಚಂದ್ರಶೇಖರ ಸಿದ್ದಿ (31) ನೇ* ಬಿಗಿದು ಆತ್ಮಹ* ಮಾಡಿಕೊಂಡ ಘಟನೆ ಯಲ್ಲಾಪುರ ತಾಲೂಕಿನ ಕಟ್ಟಿಗೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಗುರುವಾರ ಸಂಜೆ ನಡೆದಿದೆ.
ಚಂದ್ರಶೇಖರ್, ಹೆಂಡತಿ ಮಕ್ಕಳ ಜತೆ ಕಟ್ಟಿಗೆ ಗ್ರಾಮದಲ್ಲಿ ವಾಸಿಸುತ್ತ ಕೃಷಿಯಲ್ಲಿ ತೊಡಗಿದ್ದರು. ಹಲವು ತಿಂಗಳುಗಳಿಂದ ಕಿರುತೆರೆಯಲ್ಲಿ ಅವಕಾಶಗಳು ಲಭಿಸಿರಲಿಲ್ಲ. ಈ ನಡುವೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
ವೈದ್ಯರ ಚಿಕಿತ್ಸೆ ನಂತರ ಸರಿಯಾಗಿದ್ದರೂ ಗುರುವಾರ ಕಾಡಿನಲ್ಲಿ ಆತ್ಮಹ* ಮಾಡಿಕೊಂಡಿದ್ದಾನೆ ಎಂದು ಆತನ ತಾಯಿ ಲಕ್ಷ್ಮೀ ನಾಗಪ್ಪ ಯಲ್ಲಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.