ಕುಮಟಾ: ಹೆಬ್ಬಾವು ಕೊಲ್ಲಲು ಹೋದ ವ್ಯಕ್ತಿ ನಾಡ ಬಂದೂಕಿನಿಂದ ಏಕಾಏಕಿ ಗುಂಡು ಸಿಡಿದು ಸಾವು

Published : Sep 01, 2024, 10:21 AM IST
 rain death

ಸಾರಾಂಶ

ಕೋಳಿ ಶೆಡ್ಡಿಗೆ ಬಂದಿದ್ದ ಹೆಬ್ಬಾವನ್ನು ಕೊಲ್ಲಲು ಹೋದಾಗ ನಾಡಬಂದೂಕಿನಿಂದ ಏಕಾಏಕಿ ಗುಂಡು ಸಿಡಿದು ತಾಲೂಕಿನ ಕತಗಾಲದ ಮುರಗೋಳಿ ನಿವಾಸಿ ಪ್ರಥಮ ಸುಬ್ಬು ನಾಯ್ಕ (32) ಎಂಬುವರು ಮೃತಪಟ್ಟಿದ್ದಾರೆ.

ಕುಮಟಾ:  ಕೋಳಿ ಶೆಡ್ಡಿಗೆ ಬಂದಿದ್ದ ಹೆಬ್ಬಾವನ್ನು ಕೊಲ್ಲಲು ಹೋದಾಗ ನಾಡಬಂದೂಕಿನಿಂದ ಏಕಾಏಕಿ ಗುಂಡು ಸಿಡಿದು ತಾಲೂಕಿನ ಕತಗಾಲದ ಮುರಗೋಳಿ ನಿವಾಸಿ ಪ್ರಥಮ ಸುಬ್ಬು ನಾಯ್ಕ (32) ಎಂಬುವರು ಮೃತಪಟ್ಟಿದ್ದಾರೆ. 

ಶುಕ್ರವಾರ ತಡರಾತ್ರಿ ಕೋಳಿ ಶೆಡ್ಡಿನಲ್ಲಿ ಹೆಬ್ಬಾವು ಸಾಯಿಸಲು ನಾಡಬಂದೂಕು ತೆಗೆದುಕೊಂಡು ಹೋಗಿದ್ದರು. ಈ ವೇಳೆ ಆಕಸ್ಮಿಕವಾಗಿ ಫೈರ್‌ ಆಗಿದ್ದರಿಂದ ಗುಂಡು ಹಣೆಗೆ ತಗುಲಿ ಸಾವಿಗೀಡಾಗಿದ್ದಾರೆ ಎಂದು ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ. ಮನೆಯಲ್ಲಿದ್ದ ಬಂದೂಕು ಅನಧಿಕೃತ ಎಂದು ತಿಳಿದು ಬಂದಿದೆ.

PREV

Recommended Stories

ಹಾನಿಗೊಳಗಾದ ಬೆಳೆ ಪರಿಶೀಲಿಸಿದ ಬಿಜೆಪಿ ಬೆಳೆ ಸಮಿಕ್ಷೆ ತಂಡ
ಆಟದ ಮೈದಾನ ನಿರ್ಮಾಣಕ್ಕೆ ಭೂಮಿ ಮಂಜೂರಿಗಾಗಿ ಒತ್ತಾಯ