ವಕೀಲರ ಸಂಘದ ಅಧ್ಯಕ್ಷರಾಗಿ ವಿ.ಜಿ.ಪ್ರಕಾಶ್‌ಗೌಡ ಆಯ್ಕೆ

KannadaprabhaNewsNetwork |  
Published : Sep 17, 2026, 02:15 AM IST
ಹರಪನಹಳ್ಳಿ ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ವಿ.ಜಿ.ಪ್ರಕಾಶಗೌಡ ಅವರನ್ನು ವಕೀಲರು ಅಭಿನಂದಿಸಿ ಶುಭಕೋರಿದರು. | Kannada Prabha

ಸಾರಾಂಶ

ತ ಎಣಿಕೆಯಲ್ಲಿ ವಿ.ಜಿ. ಪ್ರಕಾಶಗೌಡ ಇವರಿಗೆ 140 ಮತ ಪಡೆದು ಜಯಶೀಲರಾಗಿದಾರೆ

ಹರಪನಹಳ್ಳಿ: ಹರಪನಹಳ್ಳಿ ತಾಲೂಕು ವಕೀಲರ ಸಂಘದ ಅಧ್ಯಕ್ಷರಾಗಿ ವಿ.ಜಿ. ಪ್ರಕಾಶ್ ಗೌಡ ಬುಧವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.

ನಗರದ ನ್ಯಾಯಾಲಯದ ವಕೀಲರ ಸಂಘದ ಕಚೇರಿಯಲ್ಲಿ 2026-27ನೇ ಸಾಲಿಗೆ ನಡೆದ ವಕೀಲರ ಸಂಘದ ಅಧ್ಯಕ್ಷ ಸ್ಥಾನದ ಚುನಾವಣೆಗೆ ರಾಮನಗೌಡ ಪಾಟೀಲ್ ಹಾಗೂ ವಿ.ಜಿ. ಪ್ರಕಾಶ್‌ಗೌಡ ಸ್ಪರ್ಧಿಸಿದ್ದರು. ಅಧ್ಯಕ್ಷರ ಆಯ್ಕೆಗೆ ಬೆಳಗ್ಗೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ಪ್ರಕ್ರಿಯೇ ನಡೆದಿದ್ದು, ಒಟ್ಟು 231 ಮತ ದಾನವಾಯಿತು. ಸಂಜೆ ನಡೆದ ಮತ ಎಣಿಕೆಯಲ್ಲಿ ವಿ.ಜಿ. ಪ್ರಕಾಶಗೌಡ ಇವರಿಗೆ 140 ಮತ ಪಡೆದು ಜಯಶೀಲರಾಗಿದಾರೆ, ರಾಮನಗೌಡ ಪಾಟೀಲ್‌ರು 87 ಮತ ಪಡೆದು ಪರಾಭವಗೊಂಡರು.1 ಮತ ತಿರಸ್ಕೃತಗೊಂಡಿತು. ವಿ.ಜಿ.ಪ್ರಕಾಶಗೌಡ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ವಿ.ಮಂಜಣ್ಣ ಹಾಗೂ ಡಿ.ಹನುಮಂತಪ್ಪ ಘೋಷಣೆ ಮಾಡಿದರು.

ವಕೀಲರ ಸಂಘದ ಪದಾಧಿಕಾರಿಗಳು: ಉಪಾಧ್ಯಕ್ಷರಾಗಿ ಕೆ.ದಾಕ್ಷಾಯಿಣಿ, ಕಾರ್ಯದರ್ಶಿಯಾಗಿ ಕೆ. ಪ್ರಕಾಶ, ಜಂಟಿ ಕಾರ್ಯದರ್ಶಿ ರೇಣುಕ ಎಫ್ ಮೇಟಿ, ಖಜಾಂಚಿಯಾಗಿ ಬಿ.ತಿಪ್ಪೇಶ, ಕಾರ್ಯಕಾರಿ ಮಂಡಳಿ ಸ್ಥಾನಕ್ಕೆ ಎ.ಲಕ್ಷ್ಮಣ, ಕೆ.ಕಂಡ್ಯಪ್ಪ, ಎಸ್. ರಾಮಚಂದ್ರನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಹಿರಿಯ ವಕೀಲ ಮತ್ತಿಹಳ್ಳಿ ಅಜ್ಜಣ್ಣ, ಕೆ.ಪ್ರಕಾಶ, ಗೋಣಿಬಸಪ್ಪ, ಬಸವರಾಜ ಸಂಗಪ್ಪನವರ್, ಚನ್ನಪ್ಪ, ಹೂಲೆಪ್ಪ, ಕೆ.ನಾಗರಾಜ, ವಾಸುದೇವ, ಕೆ.ಮೆಹಬೂಬ್‌ಸಾಬ್, ಬಸವರಾಜ, ಎಸ್.ಜಿ.ತಿಪ್ಪೇಸ್ವಾಮಿ, ಮುಜಬುರ್ ರೇಹಮಾನ್, ದಿನಕರ್ ಸೇರಿದಂತೆ ಹಿರಿಯ ಹಾಗೂ ಕಿರಿಯ ವಕೀಲರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೋಗ - ಮುಪ್ಪುಮೀರಲು ಉಷಃಪಾನ, ನಾಸಾಪಾನ ಸಹಕಾರಿ
ಗೌರಿ​ಗಣೇಶ ಹಬ್ಬಕ್ಕೆ ಮನಸೋತ ಜರ್ಮನ್ ಪ್ರಜೆ