ತಾರತಮ್ಯ ಮಾಡದೇ ನಗರಸಭೆ ಮಳಿಗೆ ಖಾಲಿ ಮಾಡಿಸಿ: ಕರವೇ

KannadaprabhaNewsNetwork |  
Published : Jan 19, 2025, 02:16 AM IST
ಪೋಟೋ18clk2 ಚಳ್ಳಕೆರೆ ನಗರದ ನಗರಸಭೆ ಕಾರ್ಯಾಲಯದ ಮುಂಭಾಗ ಶನಿವಾರ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಕುಮಾರಶೆಟ್ಟಿ ಬಣ) ಪೌರಾಯುಕ್ತರಿಗೆ  ಮನವಿ ನೀಡಿದರು. | Kannada Prabha

ಸಾರಾಂಶ

Vacate municipal shop without discrimination: Karaway

-ಚಳ್ಳಕೆರೆ ನಗರಸಭೆ ಕಾರ್ಯಾಲಯ ಎದುರು ಕರವೇಯಿಂದ ಪೌರಾಯುಕ್ತರಿಗೆ ಮನವಿ

------

ಕನ್ನಡಪ್ರಭವಾರ್ತೆ ಚಳ್ಳಕೆರೆ

ಚಿತ್ರದುರ್ಗ, ಪಾವಗಡ, ಮಹಾದೇವಿ ರಸ್ತೆಯಲ್ಲಿರುವ ನಗರಸಭೆ ಮಳಿಗೆಗಳ ಬಾಡಿಗೆದಾರರನ್ನು ಕೂಡಲೇ ಖಾಲಿ ಮಾಡಿಸಿ ನೂತನ ಮಳಿಗಳನ್ನು ಶೀಘ್ರವೇ ನಿರ್ಮಿಸಬೇಕೆಂದು ಕರವೇ ಬಣದ ಪ್ರವೀಣ್ ಕುಮಾರಶೆಟ್ಟಿ ಒತ್ತಾಯಿಸಿದೆ.

ನಗರಸಭೆ ಪೌರಾಯುಕ್ತ ಜಗರೆಡ್ಡಿಗೆ ಮನವಿ ನೀಡಿ ಮಾತನಾಡಿದ ಸಂಘದ ಅಧ್ಯಕ್ಷ ಪಿ.ಮಂಜುನಾಥ, ನಗರಸಭೆ ವ್ಯಾಪ್ತಿಯ ಮಳಿಗೆ ಖಾಲಿ ಮಾಡಿಸಿ ನೂತನ ಮಳಿಗೆಗಳ ನಿರ್ಮಾಣಕ್ಕೆ ನಗರಸಭೆ ಮುಂದಾಗಿರುವುದು ಸ್ವಾಗತರ್ಹ. ಆದರೆ, ನಿಧಾನಗತಿ ಕಾರ್ಯ ಸರಿಯಲ್ಲ, ಕೂಡಲೇ ಮಳಿಗೆಯ ಬಾಡಿಗೆದಾರರನ್ನು ಖಾಲಿ ಮಾಡಿಸಿ ನೂತನ ಮಳಿಗೆ ನಿರ್ಮಿಸುವತ್ತ ಮುಂದಾಗಬೇಕು.

ನಗರಸಭೆಗೆ ಸಂಬಂಧಪಟ್ಟ ಎಲ್ಲಾ ಮಳೆಗೆಗಳಿಗೂ ಒಂದೇ ಮಾನದಂಡ ವಿಧಿಸುವ ಮೂಲಕ ಕೆಲಸ ಕಾರ್ಯ ನಡೆಸಬೇಕು. ನಗರಸಭೆ ಆದಾಯ ಹೆಚ್ಚಿಸಲು ನೂತನ ವಾಣಿಜ್ಯ ಮಳಿಗೆ ಸಹಕಾರಿ. ಬಾಡಿಗೆದಾರರು ಅಲ್ಪ ಹಣ ನೀಡಿ ನಗರಸಭೆಗೆ ವಂಚಿಸುತ್ತಿದ್ದಾರೆ. ನೂತನ ಮಳಿಗೆ ನಿರ್ಮಾಣದ ನಂತರ ಕಾನೂನು ಬದ್ಧ ಹೆಚ್ಚಿನ ದರಕ್ಕೆ ಮಳಿಗೆ ಬಾಡಿಗೆ ನೀಡುವ ಮೂಲಕ ನಗರದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಗೌರವಾಧ್ಯಕ್ಷ ಸಿ.ಬೋಜರಾಜ ಮಾತನಾಡಿ, ನಗರಸಭೆಯ ಎಲ್ಲಾ ಮಳಿಗೆಗಳಿಗೂ ನೋಟಿಸ್ ನೀಡಿ ಖಾಲಿ ಮಾಡಬೇಕು. ನಗರಸಭೆ ಆಡಳಿತ ಯಾವುದೇ ಲಾಭಿ, ಒತ್ತಡಕ್ಕೆ ಮಣಿಯದೆ ಎಲ್ಲರಿಗೂ ಒಂದೇ ಮಾನದಂಡದಲ್ಲಿ ಕ್ರಮವಹಿಸಬೇಕು. ಇಲ್ಲವಾದಲ್ಲಿ ಸಂಘಟನೆಯಿಂದ ಪ್ರತಿಭಟನೆ ಎಚ್ಚರಿಕೆ ನೀಡಿದರು. ನೂತನ ನಿರ್ಮಾಣಗೊಳಿಸುವ ವಾಣಿಜ್ಯ ಮಗಳಿಗೆಗಳನ್ನು ಸ್ಥಳೀಯರಿಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು.

ಪ್ರಧಾನ ಕಾರ್ಯದರ್ಶಿ ಚಂದ್ರಣ್ಣ, ಸಂಘಟನಾ ಕಾರ್ಯದರ್ಶಿ ಕೆ.ಮುರುಳಿ, ಯುವ ಘಟಕದ ಅಧ್ಯಕ್ಷ ರವಿಕುಮಾರ್, ಕಾರ್ಮಿಕ ಘಟಕದ ಅಧ್ಯಕ್ಷ ವಿ.ಮಂಜುನಾಥ, ಕೆಆರ್ ಎಸ್ ಪಕ್ಷದ ರಾಜ್ಯ ನಿರ್ವಾಹಕ ಸದಸ್ಯ ನಗರಂಗೆರೆ ಮಹೇಶ್, ಕಾನೂನು ಸಲಹೆಗಾರ ಮಂಜುನಾಥ ಭಾಗವಹಿಸಿದ್ದರು.

-----

ಪೋಟೋ: ಚಳ್ಳಕೆರೆ ನಗರದ ನಗರಸಭೆ ಕಾರ್ಯಾಲಯದ ಮುಂಭಾಗ ಕರ್ನಾಟಕ ರಕ್ಷಣಾ ವೇದಿಕೆ ಪೌರಾಯುಕ್ತರಿಗೆ ಮನವಿ ನೀಡಿದರು.

18clk2

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮರೋಪಾದಿಯಲ್ಲಿ ವಿಜಯೇಂದ್ರ ಪಕ್ಷ ಸಂಘಟನೆ
ಜಿ ರಾಮ್ ಜಿ ಪರ 15ರಿಂದ ಅಭಿಯಾನ: ವಿಜಯೇಂದ್ರ