ಕನ್ನಡಪ್ರಭ ವಾರ್ತೆ ಚಿತ್ತಾಪುರ
ತಾಲೂಕಿನ ಡೊಣಗಾಂವ ಅಂಗನವಾಡಿ ಕೇಂದ್ರದಲ್ಲಿ ನಡೆದ ಪೋಲಿಯೋ ಹನಿ ಕಾರ್ಯಕ್ರಮದಲ್ಲಿ ಮಗುವಿಗೆ ಹನಿ ಹಾಕಿ ಮಾತನಾಡಿ ಸರ್ಕಾರವು ಜಾರಿಗೆ ತಂದಿರುವ ಯೊಜನೆಯಿಂದ ಬಹುಪಾಲು ಮಕ್ಕಳು ಪೋಲಿಯೋದಿಂದ ಮುಕ್ತರಾಗಿದ್ದಾರೆ. ೨ ಹನಿ ಹಾಕುವದರಿಂದ ತಮ್ಮ ಮಕ್ಕಳಿಗೆ ಪೋಲಿಯೋ ಮುಕ್ತರಾಗಿಸಬಹುದು ತಮ್ಮ ೫ ವರ್ಷದ ಒಳಗಿನ ಎಲ್ಲಾ ಮಕ್ಕಳಿಗೂ ಹನಿ ಹಾಕಿಸಬೇಕು. ಮತ್ತು ಅಲ್ಲದೇ ಅಂಗನವಾಡಿ ಕಾರ್ಯಕರ್ತರು ಎಲ್ಲಾ ಮಕ್ಕಳಿಗೂ ತಪ್ಪದೇ ಹನಿ ಹಾಕಲು ಪ್ರಯತ್ನಿಸಬೇಕು ಎಂದು ಹೇಳಿದರು.
ಹಿರಿಯ ಆರೊಗ್ಯ ನಿರೀಕ್ಷಕ ಗುಲಾಮ ಗೌಸ್, ಆರೊಗ್ಯ ಕಾರ್ಯಕರ್ತೆ ನೀಲಮ್ಮ ಕೊಳ್ಳಿ, ಸಂಗೀತಾ, ಅಂಗನವಾಡಿ ಕಾರ್ಯಕರ್ತೆ ಕಾಶಮ್ಮ ಚೌರಿ, ಬಸಮ್ಮ, ಜಯಶ್ರೀ, ಜ್ಯೋತಿ, ಈರಮ್ಮ, ಜಮುನಾಬಾಯಿ, ಉಮಶ್ರೀ, ಭಾಗಮ್ಮ ಮತ್ತು ಮಕ್ಕಳ ತಾಯಂದಿರು ಇದ್ದರು.