ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿಯಂತ್ರಣ ವಿಭಾಗ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಂಯುಕ್ತಾಶ್ರಯದಲ್ಲಿ ಹೊರಪೇಟೆ ಗಲ್ಲಿಯ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಮುಂದೆ ಹಮ್ಮಿಕೊಂಡಿದ್ದ ವಯಸ್ಕರರಿಗೆ ಬಿಸಿಜಿ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತದೆ. ಲಸಿಕೆ ತೆಗೆದುಕೊಳ್ಳಲು ಬರುವಾಗ ಫಲಾನುಭವಿಗಳು ಕಡ್ಡಾಯವಾಗಿ ಆಧಾರ್ ಕಾರ್ಡ್‌ನ್ನು ತರಬೇಕು. ಲಸಿಕೆ ನೀಡಿದ ನಂತರ ಟಿ.ಬಿ.ವಿನ್ ಪೋರ್ಟಲ್ ಆನ್‌ಲೈನ್‌ನಲ್ಲಿ ನೋಂದಣಿ ಮಾಡಲಾಗುವುದೆಂದು ತಿಳಿಸಿದರು.
ನಗರ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್.ಗೌಡರ ಮಾತನಾಡಿದರು. ಸಾಂಕೇತಿಕವಾಗಿ 18 ಫಲಾನುಭವಿಗಳಿಗೆ ಬಿಸಿಜಿ ಲಸಿಕೆ ನೀಡಲಾಯಿತು. ವೈದ್ಯಾಧಿಕಾರಿಗಳಾದ ಡಾ.ಸಂಗಮೇಶ ದಶವಂತ, ಡಾ.ತೈಸನ್, ಮೇಲ್ವಿಚಾರಕರಾದ ಎ.ಎಸ್.ತೆರದಾಳ, ಐ.ಸಿ.ಮಾನಕರ್, ಯಲ್ಲಪ್ಪ ಚಲವಾದಿ, ಫಾರ್ಮಸಿ ಅಧಿಕಾರಿ ಎ.ಐ.ಕೇಶಾಪೂರ, ಕ್ಷಯರೋಗ ಘಟಕದ ಶಿವರಾಜ್ ದೀಕ್ಷಿತ್, ಝೆಡ್.ಎಂ.ಬೀಳಗಿ, ವ್ಹಿ.ಕೆ.ಪಾಟೀಲ್, ಆರೋಗ್ಯ ನಿರೀಕ್ಷಣಾಧಿಕಾರಿ ಇಸ್ಮಾಯಿಲ್ ವಾಲಿಕಾರ, ಸಂಗೀತಾ ಬಸರಕೋಡ, ಆಶಾ ಮೇಲ್ವಿಚಾರಕಿ ಪ್ರತಿಭಾರಾಣಿ ಆಶಾ ಕಾರ್ಯಕರ್ತೆಯರು ಹಾಜರಿದ್ದರು.