ರೇಬಿಸ್ ತಡೆಗೆ ಆಸ್ಪತ್ರೆಯಗಳಲ್ಲಿ ಲಸಿಕೆ ಲಭ್ಯ

KannadaprabhaNewsNetwork |  
Published : Oct 24, 2026, 01:15 AM IST
ಚಿತ್ರದುರ್ಗ ಎರಡನೇ ಪುಟಕ್ಕೆ   | Kannada Prabha

ಸಾರಾಂಶ

ಚಿತ್ರದುರ್ಗ ತಾಲೂಕಿನ ಬಜ್ಜಬೋರನಹಟ್ಟಿ ಗ್ರಾಮದಲ್ಲಿ ಆಯೋಜಿಸಿದ್ದ ರೇಬಿಸ್ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಡಾ.ಬಿ.ವಿ ಗಿರೀಶ್ ಕರಪತ್ರ ಪ್ರಚುರಪಡಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ರೇಬಿಸ್ ರೋಗ ತಡೆಗಟ್ಟಲು ಎಲ್ಲ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಉಚಿತವಾಗಿ ಲಸಿಕೆ ಲಭ್ಯವಿ ರೇಬಿಸ್ ತಡೆಗೆ ತಕ್ಷಣದ ಲಸಿಕೆ ಅಗತ್ಯ ಎಂದು ಚಿತ್ರದುರ್ಗ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ. ಗಿರೀಶ್ ಹೇಳಿದರು.

ಚಿತ್ರದುರ್ಗ ತಾಲೂಕಿನ ಬೆಳಗಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಬಚ್ಚಬೋರನಹಟ್ಟಿ ಗ್ರಾಮದಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಆಯೋಜಿಸಿದ್ದ ಸಾರ್ವಜನಿಕ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹುಚ್ಚುನಾಯಿ, ಬೆಕ್ಕು ಅಥವಾ ಇತರೆ ಸೋಂಕಿತ ಪ್ರಾಣಿಗಳು ಕಚ್ಚಿದಾಗ ಅಥವಾ ಪರಚಿದಾಗ ಲಾಲಾರಸದ ಮೂಲಕ ಈ ವೈರಸ್ ಮನುಷ್ಯನ ದೇಹವನ್ನು ಪ್ರವೇಶಿಸುತ್ತದೆ. ಪ್ರಾಣಿ ಕಚ್ಚಿದ ತಕ್ಷಣ ಕನಿಷ್ಟ 15 ನಿಮಿಷಗಳ ಕಾಲ ಸೋಪು ಹಾಗೂ ನೀರಿನಿಂದ ಕಚ್ಚಿದ ಭಾಗವನ್ನು ಚೆನ್ನಾಗಿ ತೊಳೆಯಬೇಕು. ಗಾಯಕ್ಕೆ ಯಾವುದೇ ಬ್ಯಾಂಡೇಜ್ ಅಥವಾ ಬಟ್ಟೆ ಕಟ್ಟದೆ, ತಕ್ಷಣವೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ತೆರಳಿ ಸೂಕ್ತ ಲಸಿಕೆ ಪಡೆಯಬೇಕು ಎಂದು ಸಲಹೆ ನೀಡಿದರು.

ರೇಬಿಸ್ ಲಕ್ಷಣಗಳು ಒಮ್ಮೆ ಕಾಣಿಸಿಕೊಂಡರೆ ಅದಕ್ಕೆ ಯಾವುದೇ ಚಿಕಿತ್ಸೆ ಇರುವುದಿಲ್ಲ. ಅದು ಶೇ.100ರಷ್ಟು ಮಾರಕವಾಗಿರುತ್ತದೆ. ಹೀಗಾಗಿ ಪ್ರಾಣಿಗಳು ಕಚ್ಚಿದ ತಕ್ಷಣವೇ ಲಸಿಕೆ ಪಡೆಯುವುದು ಅತ್ಯಗತ್ಯ ಎಂದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ಆಯಾಸ, ಗಂಟಲು ನೋವು, ವಾಂತಿ, ತಲೆನೋವು, ನೀರು ಕಂಡರೆ ಭಯ ಹಾಗೂ ಅಸಹಜ ನಡವಳಿಕೆ ರೇಬಿಸ್ ರೋಗದ ಪ್ರಮುಖ ಲಕ್ಷಣಗಳಾಗಿವೆ. ಆದಾಗ್ಯೂ ಇಲಿ, ಅಳಿಲು, ಮೊಲ ಹಾಗೂ ಪಕ್ಷಿಗಳಲ್ಲಿ ರೇಬಿಸ್ ಇರುವುದಿಲ್ಲ. ಸಾರ್ವಜನಿಕರು ಪ್ರಾಣಿಗಳಿಂದ ಸೂಕ್ತ ಅಂತರ ಕಾಯ್ದುಕೊಂಡು, ಕಚ್ಚಿಸಿಕೊಳ್ಳದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.

ಆರೋಗ್ಯ ನಿರೀಕ್ಷಣಾಧಿಕಾರಿ ಡಿ.ಮಹೇಶ್ ಕೀಟಜನ್ಯ ರೋಗಗಳ ಕುರಿತು ಜಾಗೃತಿ ಮೂಡಿಸಿ, ಸೊಳ್ಳೆ ಚಿಕ್ಕದಾದರೂ ಅದರಿಂದ ಬರುವ ರೋಗಗಳ ಕಾಟ ದೊಡ್ಡದು. ನೀರು ಸಂಗ್ರಹವಾಗುವ ತಾಣಗಳ ಸ್ವಚ್ಛತೆ ಕಾಪಾಡಿ, ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸಬೇಕು. ಪರಿಸರ ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಕೀಟಜನ್ಯ ರೋಗಗಳಿಂದ ದೂರವಿರಬಹುದು ಎಂದರು.

ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಶುಭಶ್ರೀ, ಸಮುದಾಯ ಆರೋಗ್ಯ ಅಧಿಕಾರಿ ಮಂಜುಶ್ರೀ, ಆಶಾ ಕಾರ್ಯಕರ್ತೆಯರಾದ ಉಮಾಶ್ರೀ, ಬೋರಮ್ಮ, ಅಂಗನವಾಡಿ ಕಾರ್ಯಕರ್ತೆ ಗೌರಮ್ಮ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೆಲಮಂಗಲ ತಾಲೂಕಲ್ಲಿ ಶೇ. 98 ಶಾಂತಿಯುತ ಮತದಾನ
ಅರವಿಂದ್ ಲಿಮಿಟೆಡ್ ಅರಸೀಕೆರೆ ಘಟಕಕ್ಕೆ ಪ್ರಶಸ್ತಿ