ವಚನ ಸಾಹಿತ್ಯಕ್ಕಿದೆ ಸಮಾಜ ತಿದ್ದುವ ಶಕ್ತಿ

KannadaprabhaNewsNetwork |  
Published : Apr 19, 2024, 01:06 AM IST
ಕಾರ್ಯಕ್ರಮದಲ್ಲಿ ಶ್ರೀಗಳು ಪುಷ್ಪನಮನ ಸಲ್ಲಿಸಿ ಗೌರವ ಸಲ್ಲಿಸಿದರು.  | Kannada Prabha

ಸಾರಾಂಶ

ದಾಸಿಮಯ್ಯ ನವರು ನೇಕಾರಿಗೆ ಉದ್ಯೋಗ ಮಾಡಿಕೊಂಡು ರಾಮನಾಥನ ಕೃಪೆಗೆ ಪಾತ್ರರಾಗಿ ಸಮಾಜದಲ್ಲಿನ ಅಂಕುಡೊಂಕು ತಿದ್ದುವಲ್ಲಿ ವಚನ ಸಾಹಿತ್ಯ ಹುಟ್ಟು ಹಾಕಿದರು

ಗದಗ: ವಚನ ಸಾಹಿತ್ಯ ಸಮಾಜದಲ್ಲಿ ಭಾವೈಕ್ಯತೆ ಸಮಾನತೆ ತೋರಿಸುವುದರ ಜತೆಗೆ ಬದುಕಿನ ರೀತಿ ತಿಳಿಸುತ್ತೇವೆ. ವಚನಗಳು ಸಮಾಜಕ್ಕೆ ಹತ್ತಿರವಾಗಬೇಕು, ವಚನಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಿಬೇಕು ಎಂದು ನೀಲಕಂಠ ಸ್ವಾಮಿಗಳು ಹೇಳಿದರು.

ಅವರು ವಚನಕಾರ ದೇವರು ದಾಸಿಮಯ್ಯನವರ ಜಯಂತಿ ಅಂಗವಾಗಿ ಬೆಟಗೇರಿ ಹಳೆ ಬನಶಂಕರಿ ದೇವಸ್ಥಾನದ ಆವರಣದಲ್ಲಿ ನಡೆದ ಆದ್ಯ ವಚನಕಾರ ದೇವರು ದಾಸಿಮಯ್ಯನವರ ಜಯಂತಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ ಮಾತನಾಡಿ, ವಚನ ಜನಮಾನಸಕ್ಕೆ ಹತ್ತಿರವಾಗಲು ಕಾರಣ ಜನರಿಗೆ ಅರ್ಥವಾಗುವ ರೀತಿಯಲ್ಲಿ ವಚನಗಳು ನಿರ್ಮಾಣವಾಗಿದ್ದರಿಂದ ಜನಪ್ರಿಯವಾಗಲು ಕಾರಣವಾಗಿದೆ ಏಕೆಂದರೆ 11ನೇ ಶತಮಾನದ ಪೂರ್ವದಲ್ಲಿ ಸಂಸ್ಕೃತ ರಾಜಾಶ್ರಯ ಪಡೆದ ಭಾಷೆಯಾಗಿತ್ತು. ಆಡುಭಾಷೆ ಸಂಸ್ಕೃತ ಕೇವಲ ಪಂಡಿತರ ಭಾಷೆ ಎಂದುಕೊಂಡಿದ್ದರು ದಾಸಿಮಯ್ಯ ನವರು ನೇಕಾರಿಗೆ ಉದ್ಯೋಗ ಮಾಡಿಕೊಂಡು ರಾಮನಾಥನ ಕೃಪೆಗೆ ಪಾತ್ರರಾಗಿ ಸಮಾಜದಲ್ಲಿನ ಅಂಕುಡೊಂಕು ತಿದ್ದುವಲ್ಲಿ ವಚನ ಸಾಹಿತ್ಯ ಹುಟ್ಟು ಹಾಕಿದರು. ಮುಂದಿನ ದಿನಮಾನದಲ್ಲಿ ಅದು ಜನಪ್ರಿಯ ಸಾಹಿತ್ಯವಾಯಿತು ಹಲವಾರು ಯುಗಪುರುಷರು ಸಾಹಿತ್ಯ ಹೆಮ್ಮರವಾಗುವಂತೆ ಬೆಳೆಸಿದರೆ ಮಕ್ಕಳಲ್ಲಿ ವಿದ್ಯಾರ್ಥಿಗಳಲ್ಲಿ ಇಂತಹ ವಚನ ಸಾಹಿತ್ಯವನ್ನು ಬೆಳೆಸಬೇಕಾಗಿದ್ದು ಉಳಿಸಬೇಕಾಗಿದ್ದು ನಮ್ಮೆಲ್ಲರ ಜವಾಬ್ದಾರಿ ಈ ವಿಷಯದಲ್ಲಿ ಸಮಾಜ ಸರ್ಕಾರ ಜವಾಬ್ದಾರಿ ನಡೆಕೊಳ್ಳಬೇಕು ಇಲ್ಲವಾದಲ್ಲಿ ಒಂದು ದಿನ ವಚನ ಸಾಹಿತ್ಯ ಕನಸಾಗಬಹುದು ಎಂದರು.

ದಶರಥರಾಜ ಕೊಳ್ಳಿ ಮಾತನಾಡಿ, ದೇವಾಂಗ ಸಮಾಜದ ಮೂಲಪುರುಷ ಹಾಗೂ ದೇವದಾನವ ಮಾನವರಿಗೆ ವಸ್ತ್ರ ನೀಡಿ ಮಾನವನ್ನು ಕಾಪಾಡಿದ ದೇವಾಂಗ ಮಹರ್ಷಿಯ ನಾಟಕವನ್ನು ಕೆರೂರಿನ ದಯಾನಂದ ಪುರಿ ನಾಟ್ಯ ಸಂಘದವರು ದೇವಲ ಮಹರ್ಷಿ ಮಹಾತ್ಮೆ ಎಂಬ ನಾಟಕ ಪ್ರದರ್ಶಿಸಿದರು. ತಮ್ಮ ನೇಕಾರಿಕೆ ಉದ್ಯೋಗದ ಜತೆ ನಾಟಕ ಬಯಲಾಟಗಳನ್ನು ಉಳಿಸಿ ಬೆಳೆಸುವಲ್ಲಿ ನೇಕಾರರ ಪಾತ್ರ ಹೆಚ್ಚಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಅಶೋಕ ಬಣ್ಣದ ಸಂಘ ನಡೆದು ಬಂದ ದಾರಿ ಹಾಗೂ ಬೈಲಾಟದ ಬಗ್ಗೆ ವಿವರಿಸಿದರು. ರಕ್ಷಿತಾ ಗಿಡ್ನಂದಿ ನಿರೂಪಿಸಿದರು. ನವೀನ ಮೇಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಪ್ರಭಾಕರ ಶಲ್ಲೇದ, ಕಿಟ್ಟಪ್ಪ ಗುಬ್ಬಿ, ನಾಗರಾಜ ಭೂತ, ಸುಭಾಷ ಗುಗ್ಗರಿ, ವಸಂತ ಇಂಜಿನಿ ಮುಂತಾದವರು ಹಾಜರಿದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ