ಧಾರವಾಡ:
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಆಯೋಜಿಸಿದ್ದ 19ನೇ ಸಾಹಿತ್ಯ ಸಮ್ಮೇಳನದಲ್ಲಿ ಸಮಾರೋಪ ಭಾಷಣದಲ್ಲಿ ವಚನ ಪ್ರಜಾತಂತ್ರ, ಸಾಹಿತ್ಯ ಸಮ್ಮೇಳನದ ಸತ್ವ, ರಾಜಕೀಯ ಪ್ರಭಾವ ಹಾಗೂ ಸಾಹಿತ್ಯ ಪರಿಷತ್ತಿನ ಬೆಳವಣಿಗೆ ಕುರಿತು ಅವರು ಮಾತನಾಡಿದರು.
ಭಾರತಕ್ಕೆ ವಚನ ಪ್ರಜಾತಂತ್ರ ಮಾದರಿಯಾಗಬೇಕು. ಸಮ್ಮೇಳನದ ರಾಜಕಾರಣಿಗಳು ಮತ್ತು ಮಠಾಧಿಪತಿಗಳ ಪ್ರಸ್ತಾಪ ಬಂದಾಗ, ರಾಜಕಾರಣಿಗಳ ಆಗಮನ ಸಭೆಯ ಶಿಸ್ತು ಬದಲಾಗುತ್ತದೆ ಎಂದ ಅವರು, ನಮ್ಮವರು ಮರಾಠಿ ರಾಜಕಾರಣಿಗಳು ಅನುಸರಿಸಬೇಕು ಎಂಬ ಸಲಹೆ ನೀಡಿದರು.ಶರಣೋದ್ಯಮಿಗಳು, ಬಸವೋದ್ಯಮಿಗಳ ಹಾಗೂ ವ್ಯಾಪಾರೋದ್ಯಮಿಗಳು ಶರಣರ ವಚನ ಸಾಹಿತ್ಯಕ್ಕೆ ದೊಡ್ಡ ಅನ್ಯಾಯ ಬಗೆದಿದ್ದಾರೆ. ಅವರೆಲ್ಲರೂ ಈ ವಚನ ಸಾಹಿತ್ಯವನ್ನು ಬದುಕಿಗೆ ಅನ್ವಯಿಸಿಕೊಂಡು, ನೈಜವಾಗಿ ಮನಷ್ಯರಾಗಿ ಬಾಳಬೇಕು ಎಂದು ಸಾದರ ಕಿವಿಮಾತು ಹೇಳಿದರು.
ಧಾರವಾಡದ ಹಿಂದಿನ ಸಾಹಿತ್ಯ ಸಂಭ್ರಮದ ಶಿಸ್ತು ಮತ್ತು ಸಾಹಿತ್ಯಿಕ ವಾತಾವರಣವನ್ನು ಸ್ಮರಿಸಿದ ಅವರು, ತಮ್ಮ ಗುರುಗಳು, ದ.ರಾ. ಬೇಂದ್ರೆ ಅವರೊಂದಿಗಿನ ಭೇಟಿ, ಕವಿರಾಜ ಮಾರ್ಗ ಮತ್ತು ಹಳೆಗನ್ನಡದ ಕಾವ್ಯಗಳ ಹಿರಿಮೆಯನ್ನೂ ಡಾ. ಬಸವರಾಜ ಸಾದರ ಭಾಷಣದಲ್ಲಿ ಪ್ರಸ್ತಾಪಿಸಿದರು.
ಚಿಂತಕರಾದ ಡಾ. ರಂಜಾನ್ ದರ್ಗಾ ಅಧ್ಯಕ್ಷತೆ ವಹಿಸಿದ್ದರು. ಕವಿವಿ ಕುಲಪತಿ ಡಾ. ಎ.ಎಂ. ಖಾನ್ ಹಾಗೂ ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿ ಮಾತನಾಡಿದರು. ಸಮ್ಮೇಳನಾಧ್ಯಕ್ಷ ಡಾ. ವೀರಣ್ಣ ರಾಜೂರ ದಂಪತಿ ಸನ್ಮಾನಿಸಲಾಯಿತು. ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಹಾವೇರಿ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ಡಾ. ಜಿನದತ್ತ ಹಡಗಲಿ, ಎಸ್.ಎಂ. ದಾನಪ್ಪಗೌಡರ, ಪ್ರಾಚಾರ್ಯರಾದ ರೇಖಾ ಜೋಗಳ, ಪ್ರಮೀಳಾ ಜಕ್ಕಣ್ಣವರ, ವಿದ್ಯಾ ವಂಟಮನುರಿ, ಡಾ. ಎಸ್.ಎಸ್. ದೊಡ್ಡಮನಿ ಇದ್ದರು.