ವಚನ ಸಾಹಿತ್ಯ ಎಂಬುದು ಕೊನೆಯಿಲ್ಲದ ತೀರ: ಬಸವ ಮರುಳಸಿದ್ಧ ಸ್ವಾಮೀಜಿ

KannadaprabhaNewsNetwork |  
Published : Jun 02, 2025, 12:52 AM IST
ಚಿಕ್ಕಮಗಳೂರಿನ ಕಲ್ಯಾಣ ನಗರದಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಅವರು ಉದ್ಘಾಟಿಸಿದರು. ಡಾ. ಬಸವ ಮರುಳಸಿದ್ದ ಸ್ವಾಮೀಜಿ, ಬಿ. ತಿಪ್ಪೇರುದ್ರಪ್ಪ, ಲೋಕೇಶಪ್ಪ ಇದ್ದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ವಚನ ಸಾಹಿತ್ಯ ಎಂಬುದು ಕೊನೆಯಿಲ್ಲದ ತೀರ. ಅದರಲ್ಲಿ ಮಾನವನ ನೆಮ್ಮದಿ ಜೀವನಕ್ಕೆ ಅಗತ್ಯವಿರುವ ಸಂಸ್ಕಾರ, ಸಂಸ್ಕೃತಿ ಅಡಗಿದೆ. ಅದನ್ನು ಅರಿತು ಮುನ್ನಡೆದವನೆ ನಿಜ ಶರಣನಾಗುತ್ತಾನೆ ಎಂದು ಬಸವ ತತ್ತ್ವ ಪೀಠದ ಶ್ರೀ ಡಾ.ಬಸವ ಮರುಳಸಿದ್ಧ ಸ್ವಾಮೀಜಿ ನುಡಿದರು.

ಚಿಕ್ಕಮಗಳೂರಿನ ಕಲ್ಯಾಣ ನಗರದಲ್ಲಿ ನಡೆದ ಕಾರ್ಯಕ್ರಮ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ವಚನ ಸಾಹಿತ್ಯ ಎಂಬುದು ಕೊನೆಯಿಲ್ಲದ ತೀರ. ಅದರಲ್ಲಿ ಮಾನವನ ನೆಮ್ಮದಿ ಜೀವನಕ್ಕೆ ಅಗತ್ಯವಿರುವ ಸಂಸ್ಕಾರ, ಸಂಸ್ಕೃತಿ ಅಡಗಿದೆ. ಅದನ್ನು ಅರಿತು ಮುನ್ನಡೆದವನೆ ನಿಜ ಶರಣನಾಗುತ್ತಾನೆ ಎಂದು ಬಸವ ತತ್ತ್ವ ಪೀಠದ ಶ್ರೀ ಡಾ.ಬಸವ ಮರುಳಸಿದ್ಧ ಸ್ವಾಮೀಜಿ ನುಡಿದರು.ಕಲ್ಯಾಣ ನಗರದಲ್ಲಿ ಭಾನುವಾರ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯ ಕುರಿತು ಸಂದೇಶಗಳಿವೆ. ಮನಸ್ಸಿನಿಂದ ಮನಸ್ಸಿನ ಸಂಪರ್ಕವೇ ಅನುಭಾವ. ಅದುವೇ ವಚನದ ಜೀವಾಳ. ಮನುಷ್ಯನಿಗೆ ಜ್ಞಾನಕ್ಕಿಂತ ದೊಡ್ಡ ಸಂಪತ್ತು ಇನ್ನೊಂದಿಲ್ಲ ಎಂದು ತೋರಿಸಿಕೊಟ್ಟ ವಚನ ಸಾಹಿತ್ಯದಿಂದ ಸಮಾಜ ಕಲಿಯುವುದು ಸಾಕಷ್ಟಿದೆ ಎಂದರು.

ಸಂಸ್ಕಾರದಿಂದ ಬದುಕು ಸಾರ್ಥಕವಾಗುತ್ತದೆ. ಆಧುನಿಕತೆ ಭರಾಟೆಯಲ್ಲಿ ಕಳೆದು ಹೋಗುತ್ತಿರುವ ಇಂದಿನ ಪೀಳಿಗೆ ಯವರಿಗೆ ಸಂಸ್ಕಾರ ಅಗತ್ಯವಿದೆ. ಈ ನಿಟ್ಟಿನಲ್ಲಿ ತಾಯಂದಿರ ಪಾತ್ರ ಮಹತ್ತರವಾಗಿದೆ. ಜೀವನದ ನಿಜ ಸತ್ಯ, ಅಂಕು ಡೊಂಕು ಗಳನ್ನು ತಿದ್ದಿ ಹೇಳುವುದು ಹಿರಿಯರ ಕೆಲಸ. ಅದನ್ನು ಪಾಲಿಸುವುದು, ಆಚರಣೆಗೆ ತರುವುದು ಕಿರಿಯರ ಜವಾಬ್ದಾರಿ ಎಂದು ಹೇಳಿದರು.ಬಸವಾದಿ ಶರಣರು ತಮ್ಮ ವಚನ ಸಾಹಿತ್ಯದಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಕೊಟ್ಟು ಕನ್ನಡ ಭಾಷೆಯ ಹಿರಿಮೆ ಗರಿಮೆ ಹೆಚ್ಚಿಸಿದರು. ವಚನಗಳಲ್ಲಿ ಜೀವನ ಮೌಲ್ಯ ಅಡಗಿದೆ ಮತ್ತು ಅದರಿಂದ ತಿಳಿಯುವುದು ಪ್ರಸ್ತುತ ಸಮಾಜದ ಬಹಳಷ್ಟಿದೆ ಎಂದು ತಿಳಿಸಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಮಾತೃ ಭಾಷೆಯಿಂದಲೇ ಭಾವನೆ, ಸಂತಸ ಹಾಗೂ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಸಾಧ್ಯ. ಆ ನಿಟ್ಟಿನಲ್ಲಿ ಇಂದು 100ನೇ ದತ್ತಿ ಉಪನ್ಯಾಸ ವೈವಿದ್ಯಮಯ ಮತ್ತು ವಿಶೇಷವಾಗಿ ಆಚರಿಸುತ್ತಿರುವುದು ಸಂತಸ ಸಂಗತಿ ಎಂದರು.ಸಾಹಿತಿ ಬಿ.ತಿಪ್ಪೇರುದ್ರಪ್ಪ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಹಣದಾಸೆಯಿಂದ ಗುಣ, ನಡವಳಿಕೆ, ಆಚಾರ ವಿಚಾರಗಳು ಅಪಮೌಲ್ಯವಾಗುತ್ತಿದೆ. ಧರ್ಮದ ಹೆಸರಿನಲ್ಲಿ ಮತಾಂತಧೆ ತಾಂಡವ, ಮಾನವೀಯ ನೆಲೆ ಹಾಗೂ ಮನುಷ್ಯತ್ವ ನಶಿಸು ತ್ತಿದ್ದು ಇವುಗಳನ್ನು ಮರುಕಳಿಸುವಲ್ಲಿ ವಚನ ಸಾಹಿತ್ಯಗಳು ಪೂರಕವಾಗಿದೆ ಎಂದು ತಿಳಿಸಿದರು.ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಪರಿಷತ್ ಈಗಾಗಲೇ ವೇದಿಕೆಗಳಲ್ಲಿ ಕಾರ್ಯಕ್ರಮ ಆಯೋಜಿಸುವ ಜೊತೆಗೆ ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸಲು ಶಾಲಾ ಕಾಲೇಜುಗಳಲ್ಲಿ ಕಾರ್ಯಾಗಾ ರ ಹಮ್ಮಿಕೊಂಡಿದೆ. ಬಾಲ್ಯ ದಿಂದಲೇ ಎಳೆಮನಸ್ಸಿಗೆ ಕನ್ನಡ ಕಂಪು ರಸದೌತಣ ಉಣಬಡಿಸಿದರೆ ಭವಿಷ್ಯದಲ್ಲಿ ಹೆಮ್ಮರವಾಗಿ ಬೆಳೆದು ನೂರಾರು ಯುವ ಕವಿಗಳಿಗೆ ನೆರಳಾಗಲಿದೆ ಎಂದರು.ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ಪ್ರಧಾನ ಸಂಚಾಲಕ ಎಸ್.ಎಂ. ಲೋಕೇಶಪ್ಪ, ನಿವೃತ್ತ ಮುಖ್ಯ ಶಿಕ್ಷಕ ಎಸ್.ಎಂ.ಮಲ್ಲೇಶಪ್ಪ, ತಾಲೂಕು ಅಧ್ಯಕ್ಷ ಮಾವಿನಕೆರೆ ದಯಾನಂದ್, ನಿಕಟಪೂರ್ವ ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್, ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮೀ, ಪತ್ರಕರ್ತ ರಮೇಶ್ ನಾರಿನಿಂಗಜ್ಜಿ ಉಪಸ್ಥಿತರಿದ್ದರು.1 ಕೆಸಿಕೆಎಂ 1ಚಿಕ್ಕಮಗಳೂರಿನ ಕಲ್ಯಾಣ ನಗರದಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಅವರು ಉದ್ಘಾಟಿಸಿದರು. ಡಾ. ಬಸವ ಮರುಳಸಿದ್ದ ಸ್ವಾಮೀಜಿ, ಬಿ. ತಿಪ್ಪೇರುದ್ರಪ್ಪ, ಲೋಕೇಶಪ್ಪ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುನೀತರಾಜಕುಮಾರ ಪುತ್ಥಳಿ ಅನಾವರಣ
ಬೆಂಗಳೂರು ನಗರದಲ್ಲಿ ಮತ್ತೊಂದು ಮೇಲ್ಸೇತುವೆ ನಿರ್ಮಾಣ