ಗಣಿ ಅಗೆದು ಚಿನ್ನ ಹೊರತಂದಿರುವ ಡಾ.ಹಳಕಟ್ಟಿ

KannadaprabhaNewsNetwork |  
Published : Jul 13, 2025, 01:18 AM IST
4 | Kannada Prabha

ಸಾರಾಂಶ

ಹಳಕಟ್ಟಿ ಅವರ ಬಗ್ಗೆ ನನಗೆ ಮೊದಲಿನ ಗ್ರಹಿಕೆಗೂ, ನಂತರದ ಗ್ರಹಿಕೆಗೆ ವ್ಯತ್ಯಾಸಗಳಿವೆ.

---ಕನ್ನಡಪ್ರಭ ವಾರ್ತೆ ಮೈಸೂರುಡಾ.ಫ.ಗು. ಹಳಕಟ್ಟಿ ಅವರು ವಚನ ಸಾಹಿತ್ಯದಲ್ಲಿ ಮಾಡಿರುವ ಸಾಹಸ, ಸಾಧನೆ ನೋಡಿದರೆ ಗಣಿ ಅಗೆದು ಚಿನ್ನ ಹೊರತಂದಿದ್ದಾರೆ ಎಂದು ಚಿಂತಕ ಡಾ. ಅರವಿಂದ ಮಾಲಗತ್ತಿ ಹೇಳಿದರು.ನಟರಾಜ ಸಭಾಭವನದಲ್ಲಿ ಜಾಗತೀಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಮತ್ತು ವಚನಸಂಗ್ರಹ ಪಿತಾಮಹ ಡಾ.ಫ.ಗು. ಹಳಕಟ್ಟಿ ಸಂಶೋಧನ ಕೇಂದ್ರದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ವಚನಸಂಗ್ರಹ ಪಿತಾಮಹ ಶರಣ ಡಾ. ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಅವರ ಜಯಂತುತ್ಸವ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಹಳಕಟ್ಟಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.ಹಳಕಟ್ಟಿ ಅವರ ಬಗ್ಗೆ ನನಗೆ ಮೊದಲಿನ ಗ್ರಹಿಕೆಗೂ, ನಂತರದ ಗ್ರಹಿಕೆಗೆ ವ್ಯತ್ಯಾಸಗಳಿವೆ. ಹಳಕಟ್ಟಿ ಅವರನ್ನು ವಚನ ಪಿತಾಮಹ ಹಾಗೂ ಮತ್ತೊಂದೆಡೆ ವಚನ ಪ್ರಕಟಣೆಗಳ ಆದ್ಯರು ಎನ್ನುವ ವಾಡಿಕೆ ಇದೆ. ಆದರೆ ಅವರ ಕುರಿತು ಅಧ್ಯಯನದ ನಂತರದಲ್ಲಿ ನನ್ನ ಗ್ರಹಿಕೆಗೆ ಅವರು ಚಿನ್ನದ ಗಣಿಕಾರರು ಅನ್ನಿಸುತ್ತದೆ. ಅವರು ವಚನ ಸಾಹಿತ್ಯದಲ್ಲಿ ಮಾಡಿರುವ ಸಾಹಸ, ಸಾಧನೆ ನೋಡಿದರೆ ಗಣಿ ಅಗೆದು ಚಿನ್ನ ಹೊರತಂದಿದ್ದಾರೆ ಎಂದರು.ವಚನ ಪಿತಾಮಹ ಅನ್ನುವುದಕ್ಕೂ ಮಿಗಿಲಾದ ಗೌರವ, ಅರ್ಥ ನೀಡಿದರು ಅವೆಲ್ಲವಕ್ಕೂ ಅವರು ಅರ್ಹರು. ಸಂಶೋಧನೆ ಎನ್ನುವುದು ಅದರ ವ್ಯಾಖ್ಯಾನ, ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಹೋಗಿದೆ. ಆಲೋಚನಾ ಮಜಲು ಬದಲಾಗುತ್ತಿವೆ. ಬದಲಾದ ಕಾಲಘಟ್ಟದಲ್ಲಿ ಅರ್ಥೈಸುವಿಕೆಯಲ್ಲಿ ವ್ಯತ್ಯಾಸ ಕಾಣಿಸುತ್ತಿವೆ. ಒಂದು ಕಾಲಕ್ಕೆ ಸಂಶೋಧನೆ ಎಂದರೆ ಮುಚ್ಚಿ ಹೋಗಿರುವುದನ್ನು ಕೆದಕಿ ಹೊರತೆಗೆಯುವುದು ಎಂಬುದಾಗಿತ್ತು ಎದು ಅವರು ಹೇಳಿದರು.ನನ್ನ ಸಂಶೋಧನಾ ದಿನಗಳಲ್ಲಿ, ನಾನು ಅವರ ವಚನ ಸಂಗ್ರಹವನ್ನು ಓದಿದಾಗ ಅದರಲ್ಲೇನಿದೆ ಎಂಬ ಭಾವನೆ ಮೂಡಿತ್ತು. ಈ ರೀತಿಯ ಚಿಂತನೆಗಳು ಅರೆಬರೆ ತಿಳುವಳಿಗಳು ನಮ್ಮ ಅವಿವೇಕಕ್ಕೆ ಎಡೆ ಮಾಡಿಕೊಡುತ್ತದೆ. ಚರಿತ್ರೆಯಲ್ಲಾದಂತ ಬದಲಾವಣೆಗಳ ಪರಿಪೂರ್ಣ ಜ್ಞಾನ ಇಲ್ಲದಿದ್ದಾಗ, ಅಪವ್ಯಾಖ್ಯಾನಗೆ ಆಸ್ಪದವಾಗುತ್ತವೆ ಎಂದು ಅವರು ಅವಲೋಕಿಸಿದರು.ಗಾವಡಗೆರೆ ಗುರುಲಿಂಗ ಜಂಗಮ ಮಠದ ಶ್ರೀ ನಟರಾಜ ಸ್ವಾಮೀಜಿ ಅವರು ಡಾ.ಪ.ಗು. ಹಳಕಟ್ಟಿ ಕುರಿತ ಕೃತಿ ಬಿಡುಗಡೆಗೊಳಿಸಿದರು.ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ, ಬೇಬಿ ಬೆಟ್ಟದ ರಾಮೋಂಗೀಶ್ವರ ಮಠದ ಶ್ರೀ ಶಿವಬಸವ ಸ್ವಾಮೀಜಿ, ನಟರಾಜ ಪ್ರತಿಷ್ಠಾನ ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಅಧ್ಯಕ್ಷ ಶರಣ ಮಹಾದೇವಪ್ಪ, ಕಾರ್ಯದರ್ಶಿ ಬಿ.ಎಂ. ಮರಪ್ಪ ಇದ್ದರು.

PREV

Latest Stories

ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣದೊಂದಿಗೆ ಸಂಸ್ಕಾರ ಅಗತ್ಯ
ಕುಮ್ಕಿ ಹಕ್ಕು ರದ್ದುಪಡಿಸಿ ದಲಿತರಿಗೆ ಹಂಚಿ: ಶ್ಯಾಮರಾಜ್‌ ಬಿರ್ತಿ ಆಗ್ರಹ
ದಲಿತರನ್ನು ಭೂಮಿ ಹಕ್ಕಿನಿಂದ ಹೊರಗಟ್ಟಲು ಕುತಂತ್ರ