ಸಮಾಜದ ಓರೆಕೋರೆ ತಿದ್ದುವುದಕ್ಕಾಗಿಯೇ ವಚನ: ಮುನ್ನೂರ್‌

KannadaprabhaNewsNetwork |  
Published : Aug 30, 2024, 01:03 AM IST
 ಯಾದಗಿರಿ ನಗರದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಗುರುವಾರ ಆಯೋಜಿಸಿದ್ದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನ ಹಾಗೂ ಲಿಂ. ಡಾ. ಸುತ್ತೂರು ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 109 ನೇ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಹಿಪಾಲರೆಡ್ಡಿ ಮುನ್ನೂರ್‌ ಮಾತನಾಡಿದರು. | Kannada Prabha

ಸಾರಾಂಶ

Vachana: Munnoor for correcting society's bias

-ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನ । ಲಿಂ. ಡಾ. ಸುತ್ತೂರು ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 109 ನೇ ಜಯಂತ್ಯತ್ಸವ

-----

ಕನ್ನಡಪ್ರಭ ವಾರ್ತೆ, ಯಾದಗಿರಿ

ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ನಗರದ ಕನ್ನಡ ಸಾಹಿತ್ಯ ಪರಿಷತ್‌ ಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನ ಹಾಗೂ ಲಿಂ. ಡಾ. ಸುತ್ತೂರು ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 109 ನೇ ಜಯಂತಿ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಲು ಆಗಮಿಸಿದ್ದ ಹಿರಿಯ ಪತ್ರಕರ್ತ, ಸಾಹಿತಿ ಹಾಗೂ ಕಲಬುರಗಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಅವರು, "ಶರಣ ಸಾಹಿತ್ಯದಲ್ಲಿ ಮಾಧ್ಯಮದ ಪರಿಕಲ್ಪನೆ’ ಕುರಿತು ಮಾತನಾಡಿದರು.

ಸಮಾಜದಲ್ಲಿರುವ ಓರೆ ಕೋರೆಗಳನ್ನು ತಿದ್ದುವುದಕ್ಕಾಗಿ ಅಭಿವ್ಯಕ್ತಿಸಿದ್ದು ವಚನ, ಸತ್ಯದ ಮಾರ್ಗದಲ್ಲಿ ನಡೆಯುವಂತೆ ಜನಸಾಮಾನ್ಯರಿಗೆ ತಿಳಿಯುವ ಭಾಷೆಯಲ್ಲಿ ಹೇಳಿದ್ದು ಮೌಖಿಕ ಮಾಧ್ಯಮ; ಅದುವೇ ವಚನ ಎಂದರು.

12ನೇ ಶತಮಾನದಲ್ಲಿ ಅನುಭವ ಮಂಟಪದ ಮಾಹಿತಿಗಳನ್ನು, ಸಂಗತಿಗಳನ್ನು ಹಾಗೂ ವಿವರಗಳನ್ನು ಜನಸಾಮಾನ್ಯರಿಗೆ ತಲುಪಿಸುವ `ವಚನ’ವೇ, ಆ ಕಾಲಘಟ್ಟದ `ಓರಲ್ ಮೀಡಿಯಾ’ ಇದ್ದಂತಿತ್ತು ಎಂದು ಮುನ್ನೂರ್‌ ಉಪನ್ಯಾಸದಲ್ಲಿ ಹೇಳಿದರು.

ಅಂಚೆ ಕಚೇರಿ ಪ್ರಧಾನ ಅಂಚೆಪಾಲಕ, ಲೇಖಕ ಕುಪೇಂದ್ರ ವಠಾರ್‌ ಉದ್ಘಾಟನೆ ನುಡಿಗಳನ್ನಾಡಿದರು. ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಹಿರಿಯ ಪತ್ರಕರ್ತ ನಾಗಪ್ಪ ಮಾಲಿಪಾಟೀಲ್ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿದ್ದಪ್ಪ ಎಸ್. ಹೊಟ್ಟಿ, ವೆಂಕಟಗಿರಿ ದೇಶಪಾಂಡೆ, ಪ್ರಕಾಶ ಅಂಗಡಿ ಕನ್ನಳ್ಳಿ, ಅಯ್ಯಣ್ಣ ಹುಂಡೇಕಾರ, ಸಿ.ಎಂ. ಪಟ್ಟೇದಾರ್, ಆರ್. ಮಹಾದೇವಪ್ಪಗೌಡ ಅಬ್ಬೆತುಮಕೂರ, ಸೋಮಶೇಖರ್ ಮಣ್ಣೂರ, ಡಾ. ಭೀಮರಾಯ ಲಿಂಗೇರಿ, ಡಾ. ಎಸ್.ಎಸ್. ನಾಯಕ, ಬಸವರಾಜ ಅರಳಿ ಮೋಟ್ನಳ್ಳಿ, ಬಸವಂತ್ರಾಯ ಗೌಡ ಮಾಲಿ ಪಾಟೀಲ್, ನೂರಂದಪ್ಪ ಲೇವಡಿ, ನಾಗೇಂದ್ರ ಜಾಜಿ, ಪ್ರಶಾಂತ ಆಯರಕರ್, ಡಾ. ಗಾಳೆಪ್ಪ ಪೂಜಾರಿ ಇದ್ದರು.

------

29ವೈಡಿಆರ್14: ಯಾದಗಿರಿ ನಗರದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಆಯೋಜಿಸಿದ್ದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನ ಹಾಗೂ ಲಿಂ. ಡಾ. ಸುತ್ತೂರು ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 109 ನೇ ಜಯಂತಿ ಕಾರ್ಯಕ್ರಮದಲ್ಲಿ ಮಹಿಪಾಲರೆಡ್ಡಿ ಮುನ್ನೂರ್‌ ಮಾತನಾಡಿದರು.

-----

29ವೈಡಿಆರ್‌15 : ಯಾದಗಿರಿ ನಗರದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಆಯೋಜಿಸಿದ್ದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನ ಹಾಗೂ ಲಿಂ. ಡಾ. ಸುತ್ತೂರು ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 109 ನೇ ಜಯಂತಿ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ನಾಗಪ್ಪಾ ಮಾಲಿಪಾಟೀಲ್‌ ಅವರನ್ನು ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು