ವಚನಗಳಿಗಿದೆ ಸಮಾಜದ ಡೊಂಕು ತಿದ್ದುವ ಶಕ್ತಿ: ಡಾ. ಅನ್ನದಾನೀಶ್ವರ ಸ್ವಾಮೀಜಿ

KannadaprabhaNewsNetwork |  
Published : Jun 20, 2026, 02:30 AM IST
ಕಾರ್ಯಕ್ರಮವನ್ನು ಶಸಾಪ ಜಿಲ್ಲಾಧ್ಯಕ್ಷ ಕೆ.ಎ. ಬಳಿಗೇರ ಉದ್ಘಾಟಿಸಿದರು. | Kannada Prabha

ಸಾರಾಂಶ

ಶಸಾಪದಿಂದ ಬಸವಾದಿ ಶಿವಶರಣರು ಮನುಕುಲಕ್ಕೆ ನೀಡಿದ ತತ್ತ್ವಾದರ್ಶಗಳನ್ನು ಸರ್ವರಿಗೂ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ವಚನ ಸಾಹಿತ್ಯವು ಮನುಸ್ಸನ್ನು ಪರಿಶುದ್ಧಗೊಳಿಸುವ ಕೆಲಸ ಮಾಡುತ್ತದೆ.

ಮುಂಡರಗಿ: ತಾಲೂಕಿನಲ್ಲಿ ಶರಣ ಸಾಹಿತ್ಯ ಸಮ್ಮೇಳನ ಆಯೋಜಿಸುವ ಮೂಲಕ ಶರಣ ಸಾಹಿತ್ಯ ಪರಂಪರೆಯು ಬೆಳೆಸಬೇಕು. ಶರಣರ ವಚನಗಳ ತಾತ್ಪರ್ಯವನ್ನು ಹೇಳುವುದರ ಮೂಲಕ ಶರಣರ ವಿಚಾರಗಳು ಯುವಕರಿಗೆ ತಲುಪಿಸಬೇಕು ಎಂದು ಡಾ. ಅನ್ನದಾನೀಶ್ವರ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಮಠದ ಶಿಲಾ ಪಂಟಪದಲ್ಲಿ ಗುರುವಾರ ಸಂಜೆ ಅಖಿಲ ಕರ್ನಾಟಕ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಆಶ್ರಯದಲ್ಲಿ ಜರುಗಿದ ತಾಲೂಕು ಶರಣ ಸಾಹಿತ್ಯ ಪರಿಷನ ನೂತನ ಪದಾಧಿಕಾರಿಗಳಿಗೆ ಸೇವಾ ದೀಕ್ಷಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ವಚನಗಳು ಸಮಾಜದ ಡೊಂಕನ್ನು ಎತ್ತಿ ತೋರಿಸುವುದರೊಂದಿಗೆ ಅವುಗಳನ್ನು ತಿದ್ದುವ ಶಕ್ತಿಯನ್ನು ಹೊಂದಿವೆ ಎಂದರು.

ಶಸಾಪ ಜಿಲ್ಲಾಧ್ಯಕ್ಷ ಕೆ.ಎ. ಬಳಿಗೇರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಸಾಪದಿಂದ ಬಸವಾದಿ ಶಿವಶರಣರು ಮನುಕುಲಕ್ಕೆ ನೀಡಿದ ತತ್ತ್ವಾದರ್ಶಗಳನ್ನು ಸರ್ವರಿಗೂ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ವಚನ ಸಾಹಿತ್ಯವು ಮನುಸ್ಸನ್ನು ಪರಿಶುದ್ಧಗೊಳಿಸುವ ಕೆಲಸ ಮಾಡುತ್ತದೆ ಎಂದರು.ತಾಲೂಕಾಧ್ಯಕ್ಷ ವೀರಣ್ಣ ಮಡಿವಾಳರ ಮಾತನಾಡಿ, ತಾಲೂಕಿನಲ್ಲಿ ಶಸಾಪನಿಂದ ಉಪಯುಕ್ತವಾದ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುವುದು. ಈಗ 6 ಇರುವ ದತ್ತಿಗಳನ್ನು12 ಆಗುವಂತೆ ಪ್ರೇರೆಪಿಸಲಾಗುವುದು. ತಾಲೂಕಿನಲ್ಲಿ ಶಸಾಪ ಸದಸ್ಯತ್ವ ಅಭಿಯಾನ ಹಾಕಿಕೊಂಡು ಹೆಚ್ಚು ಹೆಚ್ಚು ಸದಸ್ಯರನ್ನು ಮಾಡಲಾಗುವುದು ಎಂದರು.

ತಾಲೂಕು ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ, ಕದಳಿ ಮಹಿಳಾ ವೇದಿಕೆ ತಾಲೂಕಾಧ್ಯಕ್ಷೆ ಸೀತಾ ಬಸಾಪೂರ ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷ ಡಾ. ಸಂತೋಷ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಎಸ್.ಆರ್. ಬಸಾಪೂರ ಸೇವಾದೀಕ್ಷೆ ಬೋಧನೆ ನಡೆಸಿಕೊಟ್ಟರು. ಎಂ.ಕೆ. ಲಮಾಣಿ ಹಾಗೂ ಶಸಾಪ, ಕದಳಿ ಮಹಿಳಾ ವೇದಿಕೆ ಪದಾಧಿಕಾರಿಗಳು, ಶರಣ ಸಾಹಿತ್ಯಾಸಕ್ತರು ಉಪಸ್ಥಿತರರಿದ್ದರು. ಶಸಾಪ ತಾಲೂಕು ಗೌರವಾಧ್ಯಕ್ಷ ಆರ್.ಎಲ್. ಪೊಲೀಸಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಪಿ. ಶೀರನಹಳ್ಳಿ ಸ್ವಾಗತಿಸಿದರು. ಬಸವರಾಜ ಹೆಬಲಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ, ಬೀಜಗಳ ಕೃತಕ ಅಭಾವ ಉಂಟು ಮಾಡಬೇಡಿ: ಕೃಷಿ ಸಹಾಯಕ ನಿರ್ದೇಶಕ ಎಚ್ಚರಿಕೆ
ವಿದ್ಯುತ್ ಖಾಸಗೀಕರಣಕ್ಕೆ ಹಳಿಯಾಳದಲ್ಲಿ ರೈತರ ವಿರೋಧ