ಹೊಸಕೋಟೆ: ವಹ್ನಿಕುಲ ಸಮುದಾಯ ಮಠದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ವಹ್ನಿಕುಲ ಕ್ಷತ್ರಿಯರ ಗುರುಪೀಠ ಶಿವನಾಪುರ ಶಾಖೆಯ ಶ್ರೀ ಪರಮಪೂಜ್ಯ ಜಗದ್ಗುರು ಪ್ರಣವಾನಂದ ಪುರಿ ಸ್ವಾಮೀಜಿ ಹೇಳಿದರು.
ನೂತನ ಅಧ್ಯಕ್ಷ ಸಿ.ಮುನಿಯಪ್ಪ ಮಾತನಾಡಿ, ಸ್ವಾಮೀಜಿ ಆಶೀರ್ವಾದದಿಂದ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ನಾನು ಮಠದ ಅಭಿವೃದ್ಧಿ ಧ್ಯೇಯೋದ್ದೇಶಗಳಿಗೆ ಶ್ರಮಿಸುತ್ತೇನೆ. ಸ್ವಾಮೀಜಿ ಜೊತೆಗೂಡಿ ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಮಾಡಿ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಮುಂದಿನ ದಿನಗಳಲಿ ಜಿಲ್ಲಾ, ತಾಲೂಕು ಮಟ್ಟದಲ್ಲಿ ವಸತಿ ನಿಲಯಗಳನ್ನ ತೆರೆದು ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದರು.
ಸಭೆಯಲ್ಲಿ ಜನಾಂಗದ ಮುಖಂಡರಾದ ಎಚ್.ಆರ್.ಸೋಮನಾಥ್, ವಿಜಿಕುಮಾರ್, ಜೆ.ಎನ್.ನಾಗರಾಜ್, ಎನ್.ಮನೋಹರ್, ಬುಲ್ಲೆಟ್ ನಾರಾಯಣಸ್ವಾಮಿ, ಕೆ.ಆರ್.ಶ್ರೀನಿವಾಸ್, ಅರುಣ್‌ಕುಮಾರ್, ಮಾಕನಹಳ್ಳಿ ಮುನಿರಾಜು, ಮಾರ್ಕಂಡಪ್ಪ, ಮಣಿ, ಗೋಪಾಲ್ ಮುಖಂಡರು ಭಾಗವಹಿಸಿದ್ದರು.ಫೋಟೋ: 29 ಹೆಚ್‌ಎಸ್‌ಕೆ4
ಹೊಸಕೋಟೆ ತಾಲೂಕಿನ ವಹ್ನಿಕುಲ ಕ್ಷತ್ರಿಯರ ಗುರುಪೀಠದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಿ.ಮುನಿಯಪ್ಪ ಅವರನ್ನು ವಹ್ನಿಕುಲ ಕ್ಷತ್ರಿಯರ ಗುರುಪೀಠ ಶಿವನಾಪುರ ಶಾಖೆಯ ಶ್ರೀ ಪರಮಪೂಜ್ಯ ಜಗದ್ಗುರು ಪ್ರಣವಾನಂದ ಪುರಿ ಸ್ವಾಮೀಜಿ ಅಭಿನಂದಿಸಿದರು.