ರಟ್ಟೀಹಳ್ಳಿ: ಸಾಮಾಜಿಕ ಹಾಗೂ ಆಡಳಿತ ವ್ಯವಸ್ಥೆಯಲ್ಲಿ ಸಮಾಜಕ್ಕಾಗಿ ತ್ಯಾಗ, ಬಲಿದಾನ ಹಾಗೂ ಮೌಲ್ಯಯುತ ಆದರ್ಶಗಳನ್ನು ಸಮಾಜಕ್ಕೆ ನೀಡಿದ ಮಹಾನ್ ಶರಣರ ಜಯಂತಿಗಳನ್ನು ಆಚರಿಸಲಾಗುತ್ತದೆ. ಅಂತಹ ಜಯಂತಿಗಳು ಕೇವಲ ಆಚರಣೆಗೆ ಸೀಮಿತವಾಗದೆ ಅವರ ಮೌಲ್ಯಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೋಳ್ಳೋಣ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ಅದೇ ರೀತಿ ರಟ್ಟೀಹಳ್ಳಿ ಪಟ್ಟಣಕ್ಕೆ ಅತೀ ಅವಶ್ಯವಿರುವ ಪರಿಶಿಷ್ಟ ಜಾತಿಯ ಹಾಸ್ಟೆಲ್ ಹಾಗೂ ಏಕಲವ್ಯ ವಸತಿ ಶಾಲೆಗೆ ಬೇಡಿಕೆ ಇಟ್ಟಿದ್ದು, ಸಂಬಂಧ ಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ಯಾವುದಾದರು ಒಂದು ವಸತಿ ಹಾಸ್ಟೆಲ್ ನಿರ್ಮಾಣಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಿ ನಿರ್ಮಾಣ ಮಾಡಲಾಗುವುದು ಎಂದರು.
ತಾಲೂಕು ವಾಲ್ಮೀಕಿ ಸಮಾಜದ ತಾಲೂಕಾಧ್ಯಕ್ಷ ಮಂಜುನಾಥ ತಳವಾರ ಮಾತನಾಡಿ, ವಾಲ್ಮೀಕಿ ಸಮಾಜಕ್ಕೆ ಎಲ್ಲ ರಾಜಕೀಯ ಜನ ಪ್ರತಿನಿಧಿಗಳು ಪ್ರಾತಿನಿಧ್ಯ ನೀಡುತ್ತಿದ್ದು, ಅದರ ಲಾಭ ಪಡೆಯಲು ಸಮಾಜದವರು ಮೊದಲು ಶಿಕ್ಷಿತರಾಗಿ ಒಗ್ಗಟ್ಟಾಗಿ ಹೋರಾಡಿ ಮಾಡಿದರೆ ಮಾತ್ರ ಸಮಾಜ ಮುಖ್ಯ ವಾಹಿನಿಗೆ ಬರಲು ಸಾಧ್ಯ ಎಂದರು.ವಾಲ್ಮೀಕಿ ಜಯಂತ್ಯುತ್ಸವದ ಅಂಗವಾಗಿ ವಾಲ್ಮೀಕಿ ಅವರ ಭಾವಚಿತ್ರದೊಂದಿಗೆ ಬೇಡರ ಕಣ್ಣಪ್ಪ ದೇವಸ್ಥಾನದಿಂದ ಮೆರವಣಿಗೆ ಆರಂಭವಾಗಿ ಮಹಾಲಕ್ಷ್ಮೀ ವೃತ್ತ, ಭಗತ್‍ಸಿಂಗ್ ವೃತ್ತ, ಶಿವಾಜಿ ವೃತ್ತ, ಹಳೇ ಬಸ್ಟ್ಯಾಂಡ್ ವೃತ್ತದ ಮೂಲಕ ಪ್ರಿಯದರ್ಶಿನಿ ಕಾಲೇಜ್ ಆವರಣದಲ್ಲಿ ಸಂಪನ್ನಗೊಂಡಿತು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ರಮೇಶ ಮಡಿವಾಳರ, ಮಾಜಿ ಮುಖ್ಯ ಸಚೇತಕ ಡಿ.ಎಂ. ಸಾಲಿ, ಅಣಜಿ ಮಾರುತಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರವಿಕುಮಾರ ಎಚ್., ತಹಸೀಲ್ದಾರ್ ಶ್ವೇತಾ ಅಮರಾವತಿ, ತಾಲೂಕು ಪಂಚಾಯತ್ ಇಓ ರವಿಕುಮಾರ ಎನ್., ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಗಿರೀಶ ಮುಡಿಯಮ್ಮನವರ, ರಮೇಶ ಹೊಳಜೋಗಿ, ಪಟ್ಟಣ ಪಂಚಾಯತ್ ಸದಸ್ಯ ರವಿ ಹದಡೇರ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ಶ್ರೀಧರ, ರವಿ ಮುದ್ನಳ್ಳಿ, ಅಶೋಕ ಹೆಡಿಯಾಲ, ಹನಮಂತಪ್ಪ ದ್ವೀಗಿಹಳ್ಳಿ, ತಾಲೂಕು ವೈದ್ಯಾಧಿಕಾರಿ ಝೆಡ್.ಎಂ. ಮಕನದಾರ, ಮಾರುತಿ ವಾಲ್ಮೀಕಿ, ಪ್ರಿಯದರ್ಶಿನಿ ಕಾಲೇಜ್ ಪ್ರಾಚಾರ್ಯ ಎ.ಜಿ. ರಾಘವೇಂದ್ರ, ಕಿರಣಕುಮಾರ ವಾಲ್ಮೀಕಿ, ಹಿರೇಕೆರೂರ ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಜಗದೀಶ ಕಡೆಮನಿ, ಬೀರೇಶ ಕರಡೆಣ್ಣನವರ, ಮಂಜು ತಳವಾರ, ಹನಮಂತಗೌಡ ಭರಮಣ್ಣನವರ, ಗಣೇಶ ವೇರ್ಣೇಕರ್, ಕೆ.ಡಿ. ದೀವಗಿಹಳ್ಳಿ ಮುಂತಾದವರು ಇದ್ದರು.