ಗಂಗಾವತಿ: ನಗರದ ವಾಲ್ಮೀಕಿ ವೃತ್ತದಲ್ಲಿ ಸೋಮವಾರ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಲಾಯಿತು.
ಸಮಾಜದ ಮುಖಂಡ ಜೋಗದ ನಾರಾಯಣಪ್ಪ ನಾಯಕ ಅವರು, ಮಹರ್ಷಿ ವಾಲ್ಮೀಕಿ ಅವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಸಮಾಜದಲ್ಲಿ ಸೌಹಾರ್ದತೆ, ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಲು ಪ್ರೇರಣೆ ನೀಡುತ್ತವೆ. ಅವರ ಜೀವನ ಮತ್ತು ಸಾಧನೆಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಸಮಾಜದ ಮುಖಂಡರಾದ ವೀರಭದ್ರಪ್ಪ ನಾಯಕ, ಜೋಗದ ಹನುಮಂತ ನಾಯಕ, ಎಚ್. ಗಿರೇಗೌಡ, ವಿರೂಪಾಕ್ಷಪ್ಪ ಸಿಂಗನಾಳ, ತಹಸೀಲ್ದಾರ್ ವಿನಾಯಕ ಗೋಡಬಳೆ, ಡಿವೈಎಸ್ಪಿ ಜಾಯಪ್ಪ ನ್ಯಾಮಗೌಡ, ಪಿಐ ಪ್ರಕಾಶ ಯಾತನೂರು, ತಿಪ್ಪೇರುದ್ರಸ್ವಾಮಿ ವಕೀಲರು, ಎಂ. ಸರ್ವೇಶ್, ಸೋಮನಾಥ ಪಟ್ಟಣಶೆಟ್ಟಿ, ದುರಗಪ್ಪ ದಳಪತಿ, .ಜೆ. ರಂಗನಾಥ, ಬಸಪ್ಪ ನಾಯಕ, ರಮೇಶ ನಾಯಕ, ರಮೇಶ ಚೌಡ್ಕಿ, ಯಮನೂರ ಚೌಡ್ಕಿ, ಹನುಮಂತಪ್ಪ ಚೌಡ್ಕಿ, ಶಿವಪುತ್ರಪ್ಪ ನಾಯಕ, ಮಳ್ಳಿಕೇರಿ ಮಂಜುನಾಥ ಭಾಗವಹಿಸಿದ್ದರು.ನವಲಿ ಗ್ರಾಪಂನಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ: ನವಲಿ ಗ್ರಾಪಂ ಕಚೇರಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಪಿಡಿಒ ವೀರಣ್ಣ ಎಸ್. ನಕ್ರಳ್ಳಿ, ಗ್ರಾಪಂ ಮಾಜಿ ಸದಸ್ಯ ವೀರೇಶ ಆದಾಪುರ, ವಾಲ್ಮೀಕಿ ಮಹಾಸಭಾ ಯುವ ಘಟಕದ ಅಧ್ಯಕ್ಷ ಹನುಮೇಶ ನಾಯಕ, ಗ್ರಾಪಂ ಸಿಬ್ಬಂದಿ ಡಿಇಒ ನಾಗನಗೌಡ, ಕರವಸೂಲಿಗಾರ ಹನುಮಂತಪ್ಪ, ಅಮರೇಶಪ್ಪ, ಮಲ್ಲಪ್ಪ, ಯಮನೂರ, ಶರಣಪ್ಪ, ದೇವೇಂದ್ರಪ್ಪ, ನಾಗರಾಜ ಹಾಗೂ ಜಾವೀದ್ ಹುಸೇನ್ ಉಪಸ್ಥಿತರಿದ್ದರು.