ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಅಂಗವಾಗಿ ಮೆರವಣಿಗೆಯಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ನೆರವೇರಿಸಿ ಮಾತನಾಡಿದರು.
ತಮ್ಮ ಕಾವ್ಯದ ಮೂಲಕ ಜೀವನದ ಮೌಲ್ಯಗಳು ಹಾಗೂ ಬದುಕಿನ ಶ್ರೇಷ್ಠತೆಯನ್ನು ಸಮಾಜಕ್ಕೆ ನೀಡಿದ್ದಾರೆ. ನಾವುಗಳು ಧೃಡವಾಗಿ ನಿಂತರೆ ಏನನ್ನಾದರೂ ಸಾಧಿಸಬಹುದು ಎಂದು ಸಮಾಜಕ್ಕೆ ತಿಳಿಸಿದ್ದಾರೆ. ಅವರ ಆದರ್ಶಗಳು ಇವತ್ತಿನ ಪೀಳಿಗೆಗಳಿಗೆ ಬಹುಮುಖ್ಯವಾಗಿದೆ ಎಂದರು.ಸಮಾರಂಭದಲ್ಲಿ ಪುರಸಭೆ ಪ್ರಭಾರ ಅಧ್ಯಕ್ಷ ಎಂ.ಎಲ್.ದಿನೇಶ್, ತಾಪಂ ಇಒ ವೇಣು, ಮುಖ್ಯಾಧಿಕಾರಿ ಸತೀಶ್ ನೇತೃತ್ವದಲ್ಲಿ ಪಟ್ಟಣದ ಮುಖ್ಯ ಬೀದಿ ಮೂಲಕ ಟಿಎಪಿಸಿಎಂಎಸ್ ವರೆಗೆ ಅಲಂಕೃತ ಬೆಳ್ಳಿ ರಥದ ಮೇಲೆ ವಾಲ್ಮೀಕಿ ಅವರ ಭಾವಚಿತ್ರ ವಿರಿಸಿದ್ದ ರಥ ಮಂಗಳವಾದ್ಯದೊಂದಿಗೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ನಗಾರಿ ಬಾರಿಸಿಕೊಂಡು ಮೆರವಣಿಗೆ ಸಾಗಿತು.
ನಂತರ ಟಿಎಪಿಸಿಎಂಎಸ್‍ನ ಸಭಾಂಗಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು. ಮೈಸೂರಿನ ಸಮಾಜಸ ಸೇವಕ ಜಿ.ಎಂ.ದೇವದತ್ತ ಮುಖ್ಯ ಭಾಷಣ ಮಾಡಿದರು. ವಾಲ್ಮೀಕಿ ಸಮಾಜದ ಮುಖಂಡರು, ವಿವಿಧ ಸಂಘಟನೆಗಳ ಮುಖಂಡರು , ಸಾರ್ವಜನಿಕರು ಭಾಗವಹಿಸಿದ್ದರು.ಹಾರೋಹಳ್ಳಿ ಎ.ಕೃಷ್ಣರಿಗೆ ಅಭಿನಂದನೆ
ಪಾಂಡವಪುರ:ತಾಲೂಕು ಟಿಎಪಿಸಿಎಂಎಸ್ ನ ನೂತನ ನಿರ್ದೇಶಕರಾಗಿ ಆಯ್ಕೆಯಾದ ಹಾರೋಹಳ್ಳಿ ಎ.ಕೃಷ್ಣರನ್ನು ತಾಲೂಕಿನ ಚಿಕ್ಕಮರಳಿ ಗ್ರಾಮದ 16 ಕೂಟದ ದೊರೆ ಶ್ರೀಚನ್ನಿಗರಾಯಸ್ವಾಮಿ ದೇವಸ್ಥಾನದ ಸನ್ನಿಧಿಯಲ್ಲಿ ಕುರುಬ ಸಮುದಾಯದ ಮುಖಂಡರು ಹಾಗೂ ಗ್ರಾಮಸ್ಥರು ಅಭಿನಂದಿಸಿದರು.
ಇದೇ ವೇಳೆ ಮುಖಂಡರಾದ ಗ್ರಾಪಂ ಮಾಜಿ ಅಧ್ಯಕ್ಷ ಪಿ.ರಮೇಶ್, ಮನ್ಮುಲ್ ಮಾಜಿ ನಿರ್ದೇಶಕ ಸಿ.ಸ್ವಾಮೀಗೌಡ, ಮುಖಂಡರಾದ ಸಿ.ಚನ್ನಪ್ಪ, ಪಿ.ಕೃಷ್ಣ, ಮರಿಚನ್ನಯ್ಯ, ಚೇತನ್, ನಂದೀಶ್, ಶಿವಣ್ಣ, ಚಂದ್ರಶೇಖರ್, ಕೃಷ್ಣೇಗೌಡ, ಹೇಮಂತ್, ಕಾಂತರಾಜ್, ಕೆ.ಬೆಟ್ಟಹಳ್ಳಿ ಸ್ವಾಮಿ, ಅರಳಕುಪ್ಪೆ ಮಹೇಶ್, ಚನ್ನಮಾದೇಗೌಡ, ಸಿ.ಆರ್.ಸಂತೋಷ್, ರಘು, ಲಕ್ಷ್ಮೇಗೌಡ, ನಂದೀಶ್, ಹಾರೋಹಳ್ಳಿ ಕರೀಗೌಡ ಸೇರಿದಂತೆ ಹಲವರು ಇದ್ದರು.