ಕೊಡೇಕಲ್: ವಾಲ್ಮೀಕಿ ಮಹರ್ಷಿ ಹಾಗೂ ರಾಮಾಯಣ ಮಹಾಕಾವ್ಯಗಳು ಜನಮಾನಸದಲ್ಲಿ ಜೀವಂತ ಉಳಿಯುವಂತದ್ದು ಎಂದು ಚಿನ್ನಪ್ಪ ಡೊಳ್ಳಿ ಹೇಳಿದರು. ನಾರಾಯಣಪುರ ಗ್ರಾಮದಲ್ಲಿ ಜರುಗಿದ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹರ್ಷಿ ವಾಲ್ಮೀಕಿ ಮೂರ್ತಿಗೆ ಪುರೋಹಿತರಾದ ಚಿಂದಬರಭಟ್ಟ ಜೋಶಿ ವಿಶೇಷ ಪೂಜೆ ನೆರವೇರಿಸಿದರು.
ತಿಪ್ಪಣ್ಣ ರೋಡಲಬಂಡಿ, ಪಿಎಸ್‌ಐ ರಾಜಶೇಖರ ರಾಠೋಡ್, ಹಣಮೇಶ ಕುಲಕರ್ಣಿ, ಹನುಮಗೌಡ ಪೊಲೀಸ್ ಪಾಟೀಲ್, ಚಂದಪ್ಪ ದೇಸಾಯಿ, ಬಸವರಾಜ ದೇಸಾಯಿ, ಅಂಬರೀಶ ಕೋಳೂರ, ಆಂಜನೇಯ ದೋರಿ, ಶಿವಪ್ಪ ಕಬಡರ, ಆಂಜನೇಯ ಗೋಳಸಂಗಿ, ಮಲ್ಲಣ್ಣ ಶೃಂಗೇರಿ, ವೈ.ಸಿ. ಗೌಡ್ರು, ರಮೇಶ ಗೌಡ್ರು, ಚಿದಂಬರ ದೇಸಾಯಿ, ಯಂಕಪ್ಪ ರೋಡಲಬಂಡಿ, ಸುರೇಶ ನಾಯಕ, ನಾಗಪ್ಪ ಜಂಜಿಗಡ್ಡಿ, ಲಕ್ಷ್ಮಣ ಜಂಜಿಗಡ್ಡಿ, ಜೆಟ್ಟೆಪ್ಪ ಗೊಳಸಂಗಿ, ಸೇರಿದಂತೆ ವಾಲ್ಮೀಕಿ ಸಂಘಟನೆಯ ಪದಾಧಿಕಾರಿಗಳು ಇದ್ದರು. ರಮೇಶ ಕೋಳೂರ ನಿರೂಪಿಸಿ, ವಂದಿಸಿದರು.----