- ಹೊನ್ನಾಳಿಯಲ್ಲಿ ವಾಲ್ಮೀಕಿ ಜಯಂತಿಯಲ್ಲಿ ಶಾಸಕ ಶಾಂತನಗೌಡ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ವಾಲ್ಮೀಕಿ ಮಹರ್ಷಿ ಇಡೀ ಜಗತ್ತಿಗೆ ಶ್ರೇಷ್ಠ ಮಹಾಕಾವ್ಯವಾದ ರಾಮಾಯಣ ಗ್ರಂಥ ನೀಡಿದ್ದಾರೆ. ಇಂತಹ ಮಹಾನ್ ಸತ್ಪುರುಷರ ಜೀವನ ಆದರ್ಶ ಇಂದಿಗೂ ನಮ್ಮೆಲ್ಲರಿಗೂ ಮೇಲ್ಪಂಕ್ತಿಯಾಗಿದೆ. ವಾಲ್ಮೀಕಿ ರಾಮಾಯಣದಿಂದ ಇಂದಿಗೂ ಅನುಸರಿಸಬಹುದಾದ ಸಂಗತಿ ಎಂದರೆ ಅದು ಪ್ರಜಾತಂತ್ರ ವ್ಯವಸ್ಥೆಯಾಗಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.ಪಟ್ಟಣದ ಪುರಸಭೆ ಆವರಣದ ಕನಕದಾಸ ರಂಗಮಂದಿರದಲ್ಲಿ ಮಂಗಳವಾರ ಸಮಾಜ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಆದಿಕವಿ ಹಾಗೂ ಶ್ರೇಷ್ಠ ಸಂತ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಹಾಗೂ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಾಲ್ಮೀಕಿ ಮಹರ್ಷಿ ಶ್ರೇಷ್ಠಕವಿ ಮತ್ತು ಋಷಿಮುನಿ. 24 ಸಾವಿರ ಶ್ಲೋಕಗಳೊಂದಿಗೆ 7 ಕಾಂಡಗಳನ್ನು ಒಳಗೊಂಡ ರಾಮಾಯಣ ಗ್ರಂಥವನ್ನು ದೇಶದ ಪ್ರತಿಯೊಬ್ಬರೂ ಪೂಜಿಸುತ್ತಾರೆ. ಅಂತಹ ಶ್ರೇಷ್ಠ ಗ್ರಂಥ ರಾಮಾಯಣವಾಗಿದೆ ಎಂಬ ಹಿರಿಮೆ ಭಾರತದಾಗಿದೆ. ಇಂಥ ಮಹಾನ್ ದಾರ್ಶನಿಕ ವಾಲ್ಮೀಕಿ ಅವರನ್ನು ಕೇವಲ ಒಂದು ಜಾತಿಗೆ ಸೀಮಿತಿಗೊಳಿಸುವುದು ಸಲ್ಲದು. ಎಲ್ಲರೂ ಸೇರಿ ಇಂತಹ ಮಹಾನ್ ಋಷಿಗಳ ಜಯಂತಿ ಆಚರಿಸಿದರೆ ಮಾತ್ರ ಇಂಥ ಕಾರ್ಯಕ್ರಮಗಳು ಸಾರ್ಥಕ ಪಡೆಯುತ್ತವೆ ಎಂದರು.ರಾಜ್ಯ ಬಯಲುಸೀಮೆ ಪ್ರದೇಶಾಭಿವೃದ್ಧಿ ನಿಗಮ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ, ಮಹರ್ಷಿ ವಾಲ್ಮೀಕಿಯವರು ಆದರ್ಶ ಸಮಾಜವನ್ನು ಕಟ್ಟಿಕೊಡುವ ಕೆಲಸ ತಮ್ಮ ಮಹಾಕಾವ್ಯದಲ್ಲಿ ಮಾಡಿದ್ದಾರೆ. ರಾಮಾಯಣ ಕೃತಿಯಲ್ಲಿ ಎಲ್ಲ ರೀತಿಯ ಉತ್ತಮ ಸಂದೇಶಗಳನ್ನು ಸಾರಿದ್ದಾರೆ ಎಂದರು.
ಉಪನ್ಯಾಸಕ ಬಸವರಾಜು ವಿಶೇಷ ಉಪನ್ಯಾಸ ನೀಡಿದರು. ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ನಾಗೇಂದ್ರಪ್ಪ, ತಹಸೀಲ್ದಾರ್ ರಾಜೇಶ್‌ಕುಮಾರ್ ಮಾತನಾಡಿದರು.ವಾಲ್ಮೀಕಿ ಸಮಾಜದ ಮುಖಂಡರಾದ ಕೋಣನತಲೆ ನಾಗಪ್ಪ, ಬೇಲಿಮಲ್ಲೂರು ಶಿವಾನಂದ್, ಕುಳಗಟ್ಟೆ ರಂಗನಾಥ್, ಮಾರಿಕೊಪ್ಪದ ತಿಮ್ಮಪ್ಪ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಉಮಾ, ಬಿಇಒ ನಿಂಗಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಅರುಣ್‌ಕುಮಾರ್, ಆರ್.ನಾಗಪ್ಪ ಇತರರು ಇದ್ದರು.
- - -(ಟಾಪ್ ಕೋಟ್) ವಾಲ್ಮೀಕಿ ಅವರೊಬ್ಬ ಬೇಟೆಗಾರ ಎಂದು ಇತಿಹಾಸ ಹೇಳುತ್ತಿದೆ. ಇನ್ನೂ ಕೆಲವರು ದರೋಡೆಕೋರರಾಗಿದ್ದರು, ಮುನಿಗಳ ಪುತ್ರ ಹೀಗೆ ಬೇರೆ ಬೇರೆ ರೀತಿಯಲ್ಲಿ ಪರಿಚಯಿಸುವುದು ಸಮಂಜಸವಲ್ಲ. ಇತಿಹಾಸಕಾರರು, ವಿದ್ಯಾಂಸರು ವಾಲ್ಮೀಕಿ ಮಹರ್ಷಿಗಳ ಬಗ್ಗೆ ಸಂಪೂರ್ಣ ಹಾಗೂ ನಿಖರ ಅಧ್ಯಯನ ಮಾಡಿ ಅವರ ಗೌರವದ ಜೀವನ ಇತಿಹಾಸವನ್ನು ಸಮಾಜಕ್ಕೆ ತಿಳಿಸಬೇಕು.
- ಸುನೀಲ್‌ಕುಮಾರ್, ಪೊಲೀಸ್ ಇನ್‌ಸ್ಪೆಕ್ಟರ್.- - -
-7ಎಚ್.ಎಲ್.ಐ1:ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿದರು.