ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ವಾಲ್ಮೀಕಿ ಹೆಸರಿಡುತ್ತಿರುವುದು ಸ್ವಾಗತಾರ್ಹ: ಜಾರಕಿಹೊಳಿ

KannadaprabhaNewsNetwork |  
Published : Dec 31, 2023, 01:30 AM IST
14 | Kannada Prabha

ಸಾರಾಂಶ

ಅಯೋಧ್ಯೆಯಲ್ಲಿ ವಾಲ್ಮೀಕಿ ಮಂದಿರಕ್ಕಾಗಿಯೂ ನಾವು ಡಿಮ್ಯಾಂಡ್ ಮಾಡಿದ್ದು, ಅದು ಕೂಡ ನಿರ್ಮಾಣವಾಗಬೇಕು

ರಾಣಿಬೇನ್ನೂರು

ದೇಶದ ಬಹುಜನರ ನಿರೀಕ್ಷೆಯಂತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದ್ದು, ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ವಾಲ್ಮೀಕಿ ಹೆಸರಿಡುತ್ತಿರುವುದು ಸ್ವಾಗತಾರ್ಹ. ಇದನ್ನೇ ಈ ಹಿಂದೆ ನಾವು ಒತ್ತಾಯ ಮಾಡಿದ್ದೇವು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ವಾಲ್ಮೀಕಿ ಮಂದಿರಕ್ಕಾಗಿಯೂ ನಾವು ಡಿಮ್ಯಾಂಡ್ ಮಾಡಿದ್ದು, ಅದು ಕೂಡ ನಿರ್ಮಾಣವಾಗಬೇಕು ಎಂದು ಆಗ್ರಹಿಸಿದರು.

ಮುಂಬರುವ ಚುನಾವಣೆ ವೇಳೆ ಅಭಿವೃದ್ಧಿಗಿಂತ ಧಾರ್ಮಿಕ ವಿಚಾರ ಹೈಲೇಟ್ ಆಗುತ್ತಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಚುನಾವಣೆಯಲ್ಲಿ ಧಾರ್ಮಿಕ ಹಾಗೂ ಅಭಿವೃದ್ಧಿ ಎರಡೂ ವಿಚಾರ ಇದ್ದೇ ಇದೆ. ಆದರೆ ಅದರಿಂದ ಲಾಭವಾಗುತ್ತೋ ಅಥವಾ ನಷ್ಟವಾಗುತ್ತೋ ಎನ್ನುವುದು ಫಲಿತಾಂಶ ಬಂದ ಬಳಿಕ ಗೊತ್ತಾಗುತ್ತದೆ. ನಮ್ಮ ದೇಶದಲ್ಲಿ ಅದು ಹಾಗೇ ಬಂದಿದೆ. ಇಲ್ಲಿ ಎರಡು ವಿಚಾರಗಳೂ ನಡೆಯುತ್ತವೆ. ಅದಕ್ಕೆ ತಕ್ಷಣವೇ ಕಡಿವಾಣ ಹಾಕಲು ಕಷ್ಟ ಸಾಧ್ಯ ಎಂದರು.ಹಿಜಾಬ್ ಧರಿಸೋದು ಬಿಡೋದು ವಿದ್ಯಾರ್ಥಿಗಳ ಇಷ್ಟವಾಗಿದ್ದು, ಅದು ಆಯಾ ಜಾತಿ ಹಾಗೂ ಕೋಮಿಗೆ ಬಿಟ್ಟ ವಿಚಾರ. ಇಲ್ಲಿಯವರೆಗೂ ಅದು ನಡೆದುಕೊಂಡು ಬಂದಿದ್ದು, ಅದೇ ರೀತಿ ಮುಂದುವರಿಬೇಕು ಎಂದರು.

ಇನ್ನಿಬ್ಬರು ಡಿಸಿಎಂ ಆಯ್ಕೆ ವಿಚಾರ ಸದ್ಯ ಯಾವುದೂ ಪ್ರಸ್ತಾಪ ಇಲ್ಲ. ಅದು ಹೈಕಮಾಂಡ್‌ಗೆ ಬಿಟ್ಟ ವಿಚಾರವಾಗಿದ್ದು, ಅದರ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.

ಕಲ್ಲಡ್ಕರ್ ಪ್ರಭಾಕರ್ ಭಟ್ ವಿವಾದಾತ್ಮಕ ಹೇಳಿಕೆ ಕುರಿತು ಈಗಾಗಲೇ ಕೇಸ್ ದಾಖಲಾಗಿದ್ದು ಕೋರ್ಟ್ ನಿರ್ಣಯ ಮಾಡುತ್ತದೆ. ಯಾವ ಸಮಯದಲಿ ಎಲ್ಲಿ ಏನು ಹೇಳಿದ್ದಾರೆ ಎನ್ನುವುದನ್ನು ಕೋರ್ಟ್ ನೋಡುತ್ತದೆ ಎಂದರು.

ಚೆಕ್ ಬೌನ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಧು ಬಂಗಾರಪ್ಪ ಯಾಕೆ ರಾಜೀನಾಮೆ ಕೊಡಬೇಕು? ಚೆಕ್ ಬೌನ್ಸ್ ಅವರ ಖಾಸಗಿ ವಿಚಾರವಿದ್ದು, ವ್ಯವಹಾರದಲ್ಲಿ ಇದೆಲ್ಲ ಇರುತ್ತದೆ. ಇಂತಹ ಕೇಸ್‌ಗಳು ಸಾಕಷ್ಟು ಆಗಿರುತ್ತವೆ. ರಾಜಕೀಯವಾಗಿ ತಪ್ಪು ಮಾಡಿದರೆ ಬೇರೆ, ಬಿಸಿನೆಸ್ ಮಾಡೋರಿಗೆ ಇದೆಲ್ಲ ಇದ್ದೇ ಇರುತ್ತದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌
ಕರಗಕ್ಕೆ ವಿಶ್ವಪ್ರಸಿದ್ಧಿ ಪಡೆದ ಧರ್ಮರಾಯ ದೇಗುಲ ಚಿನ್ನ ಕಳವು