ವಾಲ್ಮಿಕೀ ತತ್ವಗಳು ಮಾನವ ಜನಾಂಗಕ್ಕೆ ದಾರಿದೀಪ: ಭಾಗ್ಯಲಕ್ಷ್ಮಿಮೋಹನ್

KannadaprabhaNewsNetwork |  
Published : Oct 08, 2025, 01:00 AM IST
7 ಬೀರೂರು1ವಾಲ್ಮೀಕಿ ಜಯಂತಿ ಅಂಗವಾಗಿ ಬೀರೂರಿನ ಪುರಸಭಾ ಸಭಾಂಗಣದಲ್ಲಿ ಮಹರ್ಷಿ ವಾಲ್ಮಿಕಿ ಭಾವಚಿತ್ರಕ್ಕೆ ಪುರಸಭೆ ಅಧ್ಯಕ್ಷೆ ಭಾಗ್ಯಲಕ್ಷ್ಮಿಮೋಹನ್ ಪುಷ್ಪಾರ್ಚನೆ ಮಾಡಿದರು. ಮುಖ್ಯಾಧಿಕಾರಿ ಜಿ.ಪ್ರಕಾಶ್ ಸೇರಿದಂತೆ ಮತ್ತಿತರಿದ್ದರು. | Kannada Prabha

ಸಾರಾಂಶ

ಬೀರೂರು. ಮಹರ್ಷಿ ವಾಲ್ಮೀಕಿ ಅವರ ತತ್ವ ಮತ್ತು ಆದರ್ಶಗಳು ಮಾನವ ಜನಾಂಗಕ್ಕೆ ಸರ್ವಕಾಲಕ್ಕೂ ದಾರಿದೀಪವಾಗಲಿವೆ ಎಂದು ಪುರಸಭೆ ಅಧ್ಯಕ್ಷೆ ಭಾಗ್ಯಲಕ್ಷ್ಮಿ ಮೋಹನ್ ಹೇಳಿದರು.

ಪುರಸಭೆ ಸಭಾಂಗಣದಲ್ಲಿ ಮಂಗಳವಾರ ವಾಲ್ಮೀಕಿ ಜಯಂತಿ ಆಚರಣೆ

ಕನ್ನಡಪ್ರಭ ವಾರ್ತೆ, ಬೀರೂರು. ಮಹರ್ಷಿ ವಾಲ್ಮೀಕಿ ಅವರ ತತ್ವ ಮತ್ತು ಆದರ್ಶಗಳು ಮಾನವ ಜನಾಂಗಕ್ಕೆ ಸರ್ವಕಾಲಕ್ಕೂ ದಾರಿದೀಪವಾಗಲಿವೆ ಎಂದು ಪುರಸಭೆ ಅಧ್ಯಕ್ಷೆ ಭಾಗ್ಯಲಕ್ಷ್ಮಿ ಮೋಹನ್ ಹೇಳಿದರು.ಪುರಸಭೆ ಸಭಾಂಗಣದಲ್ಲಿ ಮಂಗಳವಾರ ವಾಲ್ಮೀಕಿ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಸರ್ಕಾರ ವಾಲ್ಮೀಕಿ ಜನಾಂಗಕ್ಕೆ ಅನೇಕ ಯೋಜನೆ ಜಾರಿಗೆ ತಂದಿದೆ. ಅದರ ಪ್ರಯೋಜನ ಪಡೆದು ಮುಂದೆ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕಿದೆ. ಮಹರ್ಷಿ ವಾಲ್ಮಿಕಿ ಕೇವಲ0 ವ್ಯಕ್ತಿಯಲ್ಲ, ಅವರೊಂದು ಶಕ್ತಿ. ರಾಮಾಯಣ ಗ್ರಂಥದ ಮೂಲಕ ಜಗತ್ತಿಗೆ ಜ್ಞಾನದ ಬೆಳಕು ನೀಡಿದ ಅವರು ಜಗತ್ತಿನ ಶ್ರೇಷ್ಠ ದಾರ್ಶನಿಕ ಎಂದು ಹೇಳಿದರು.

ಪುರಸಭೆ ಮಾಜಿ ಅಧ್ಯಕ್ಷ ಎಂ.ಪಿ.ಸುದರ್ಶನ್ ಮಾತನಾಡಿ, ರಾಮಾಯಣದಲ್ಲಿ ಸುಸಂಕೃತ ಸಮಾಜ ಕುಟುಂಬ ಪದ್ಧತಿ, ಸಾಮಾಜಿಕ ವ್ಯವಸ್ಥೆ, ಆರ್ಥಿಕ ವ್ಯವಸ್ಥೆಯನ್ನು ಅಂದೇ ಪರಿಚಯಿಸಿದ್ದಾರೆ. ಕಲೆ ಸಾಹಿತ್ಯ ಸಾಂಸ್ಕೃತಿಕ ಪದ್ಧತಿ, ಯುದ್ಧ ಕಲೆ, ನೌಕಾಯಾನ, ವಿಮಾನಯಾನದಂತಹ ವೈಜ್ಞಾನಿಕ ಪದ್ಧತಿ ಪರಿಕಲ್ಪನೆ ನೀಡಿದ್ದರೂ ಎಂದರು.ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಬಿ.ಆರ್.ಮೋಹನ್ ಕುಮಾರ್ ಮಾತನಾಡಿ, ವಾಲ್ಮೀಕಿ ರಾಮಾಯಣದಿಂದ ಇಂದಿಗೂ ಅನುಸರಿಸಬಹುದಾದ ಒಂದು ಮುಖ್ಯ ಸಂಗತಿ ‘ಪ್ರಜಾತಂತ್ರ’. ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳಿಗಿರುವ ಅಧಿಕಾರ ಬಹಳ ದೊಡ್ಡದು. ಇಂದು ಪ್ರಜಾಪ್ರಭುತ್ವ ರಾಜ ಪ್ರಭುತ್ವವಾಗಿ ಬದಲಾದಂತೆ ಭಾಸವಾಗುತ್ತಿರುವ ಸಂಕೀರ್ಣ ಸ್ಥಿತಿಯಲ್ಲಿ ನಾವಿದ್ದೇವೆ. ಹಣಕ್ಕೊ, ಧರ್ಮಕ್ಕೊ ತಮ್ಮ ಮತ ಮಾರಿಕೊಳ್ಳುವವರೇ ಹೆಚ್ಚು. ಹೀಗಿರುವಾಗ ಇದಕ್ಕೊಂದು ಪರಿಹಾರವಾದರೂ ನಾವು ನಡೆದು ಬಂದ ಇತಿಹಾಸದಿಂದಲೇ ಹುಡುಕಬೇಕಲ್ಲವೇ? ಅದರಲ್ಲೂ ವಾಲ್ಮೀಕಿ ವಿರಚಿತ ರಾಮಾಯಣ ಮಹಾಕಾವ್ಯದಲ್ಲಿ ಪ್ರಜಾತಂತ್ರಕ್ಕೆ ಅತ್ಯುತ್ತಮ ನಿದರ್ಶನಗಳಿವೆ ಎನ್ನಬಹುದು. ಪ್ರಜೆಗಳಿಂದ ರಾಜನ ಆಯ್ಕೆ ಎನ್ನುವುದೊಂದು ನ್ಯಾಯಯುತ ರಾಜಕೀಯ ಪರಿಕಲ್ಪನೆ. ವಾಲ್ಮೀಕಿ ರಾಮಾಯಣದಲ್ಲಿ ರಾಮನಿಗೆ ಪಟ್ಟ ವಾಗುವುದು ಹಿರಿತನದಿಂದ ಸರಿಯಾದುದಾಗಿದ್ದರೂ, ಯುವರಾಜನನ್ನು ಘೋಷಿಸುವಾಗ ಪ್ರಜೆಗಳ ಇಂಗಿತ ಅರಿತೇ ಆಯ್ಕೆ ಮಾಡಲಾಗಿತ್ತು ಎಂಬುದನ್ನು ಕವಿ ನೇರವಾಗಿಯೇ ಹೇಳಿದ್ದಾನೆ. ‘ತಮೇವಂ ವೃತ್ತಸಂಪನ್ನ ಅಪ್ರಧೃಷ್ಯಪರಾಕ್ರಮ, ಲೋಕ ಪಾಲೋಪಮಂ ನಾಥಮಕಾಮಯತ ಮೇದಿನೀ’ ಹಾಗಾಗಿ ಇಲ್ಲಿ ರಾಜನ ಆಯ್ಕೆ ಜನರ ಇಚ್ಛೆಯಾಗಿದೆ ಎಂದು ತಿಳಿಸಿದರು.ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಆರ್.ರಘು, ಸದಸ್ಯೆ ಸಹನಾ ವೆಂಕಟೇಶ್ ಮಾತನಾಡಿದರು. ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಎನ್. ಎಂ.ನಾಗರಾಜ್, ಸದಸ್ಯರಾದ ರವಿಕುಮಾರ್, ಹಿರಿಯ ಆರೋಗ್ಯ ನಿರೀಕ್ಷಕ ವೈ.ಎಂ.ಲಕ್ಷ್ಮಣ್ , ಪುರಸಭೆ ಪೌರ ನೌಕರರ ಅಧ್ಯಕ್ಷೆ ಜಯಮ್ಮ, ಸ್ವರೂಪರಾಣಿ, ರೇಣುಕಾ, ಶಿಲ್ಪಾ ಸೇರಿದಂತೆ ಪುರಸಭೆ ಸಿಬ್ಬಂದಿಗಳು ಇದ್ದರು

7 ಬೀರೂರು1ವಾಲ್ಮೀಕಿ ಜಯಂತಿ ಅಂಗವಾಗಿ ಬೀರೂರಿನ ಪುರಸಭಾ ಸಭಾಂಗಣದಲ್ಲಿ ಮಹರ್ಷಿ ವಾಲ್ಮಿಕಿ ಭಾವಚಿತ್ರಕ್ಕೆ ಪುರಸಭೆ ಅಧ್ಯಕ್ಷೆ ಭಾಗ್ಯಲಕ್ಷ್ಮಿಮೋಹನ್ ಪುಷ್ಪಾರ್ಚನೆ ಮಾಡಿದರು. ಮುಖ್ಯಾಧಿಕಾರಿ ಜಿ.ಪ್ರಕಾಶ್ ಸೇರಿದಂತೆ ಮತ್ತಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸ್ಟೆಲ್ ಮಕ್ಕಳಿಗೆ ಹೊಸ ಜಾತಿ ಪ್ರಮಾಣಪತ್ರ ಶಾಕ್‌
₹400 ಕೋಟಿ ಇದ್ದ 2 ಕಂಟೇನರ್‌ ಲಾರಿಗಳೇ ಬೆಳಗಾವೀಲಿ ನಾಪತ್ತೆ!