ವಾಲ್ಮೀಕಿ ಕಥೆ ಮನುಕುಲಕ್ಕೆ ಸ್ಪೂರ್ತಿ

KannadaprabhaNewsNetwork |  
Published : Oct 27, 2026, 03:00 AM IST
26ಬಿಎಸ್ವಿ01-ಬಸವನಬಾಗೇವಾಡಿಯ ವಾಲ್ಮೀಕಿ ಭವನದಲ್ಲಿ ತಾಲೂಕಾಡಳಿತ, ಸಮಾಜ ಕಲ್ಯಾಣ ಇಲಾಖೆ, ತಾಲೂಕು ಪಂಚಾಯತ, ಪುರಸಭೆ ಸೋಮವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವದಲ್ಲಿ ಅಧಿಕಾರಿಗಳು ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ನಮನಗಳನ್ನು ಸಲ್ಲಿಸಿದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ರಾಮಾಯಣವೆಂಬ ಮಹಾಕಾವ್ಯದ ಮೂಲಕ ಜಗತ್ತಿಗೆ ಸತ್ಯ, ಧರ್ಮ ಮತ್ತು ಆದರ್ಶ ಜೀವನದ ಮೌಲ್ಯಗಳನ್ನು ಸಾರಿದ ಆದಿಕವಿ ಮಹರ್ಷಿ ವಾಲ್ಮೀಕಿ ಕಥೆ ಮನುಕುಲಕ್ಕೆ ಸದಾ ಸ್ಪೂರ್ತಿ ಎಂದು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ರಾಮಾಯಣವೆಂಬ ಮಹಾಕಾವ್ಯದ ಮೂಲಕ ಜಗತ್ತಿಗೆ ಸತ್ಯ, ಧರ್ಮ ಮತ್ತು ಆದರ್ಶ ಜೀವನದ ಮೌಲ್ಯಗಳನ್ನು ಸಾರಿದ ಆದಿಕವಿ ಮಹರ್ಷಿ ವಾಲ್ಮೀಕಿ ಕಥೆ ಮನುಕುಲಕ್ಕೆ ಸದಾ ಸ್ಪೂರ್ತಿ ಎಂದು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಹೇಳಿದರು.

ಪಟ್ಟಣದ ವಾಲ್ಮೀಕಿ ಭವನದಲ್ಲಿ ತಾಲೂಕಾಡಳಿತ, ಸಮಾಜ ಕಲ್ಯಾಣ ಇಲಾಖೆ, ತಾಲೂಕು ಪಂಚಾಯತಿ ಹಾಗೂ ಪುರಸಭೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು, ವಾಲ್ಮೀಕಿ ಸಮಾಜದಲ್ಲಿ ಹಲಗಲಿ ಬೇಡರು, ಸುರಪುರ ವೆಂಕಟಪ್ಪ ನಾಯಕ ಸೇರಿದಂತೆ ಅನೇಕರು ನೀಡಿರುವ ಕೊಡುಗೆ ಸ್ಮರಣೀಯ. ವಾಲ್ಮೀಕಿ ಸಮಾಜ ಬಾಂಧವರು ಸರ್ಕಾರ ನೀಡಿರುವ ಮೀಸಲಾತಿ ಸೌಲಭ್ಯವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ತಾಪಮ ಇಒ ವೆಂಕಟೇಶ ವಂದಾಲ ಮಾತನಾಡಿ, ಮಹರ್ಷಿ ವಾಲ್ಮೀಕಿ ಒಂದೇ ಜಾತಿ, ವರ್ಗಕ್ಕೆ ಸಿಮೀತವಾಗಿಲ್ಲ. 5 ಸಾವಿರ ವರ್ಷಗಳ ಹಿಂದಿನ ಶ್ರೀರಾಮನ ಸಾಮ್ರಾಜ್ಯ ಕುರಿತು ರಾಮಾಯಣ ಕಾವ್ಯದಲ್ಲಿ ನಮಗೆ ಕಣ್ಣುಕಟ್ಟುವಂತೆ ಸಂಸ್ಕೃತ ಶ್ಲೋಕದಲ್ಲಿ ವಾಲ್ಮೀಕಿ ರಚಿಸಿದ್ದಾರೆ. ರಾಮಾಯಣ ಓದುವ ಮೂಲಕ ನಾವು ಜೀವನ ಮೌಲ್ಯಗಳನ್ನು ತಿಳಿದುಕೊಳ್ಳಬೇಕೆಂದರು.

ಉಪನ್ಯಾಸಕ ಮಹಾಂತೇಶ ಚಿಕನರ್ತಿ ಉಪನ್ಯಾಸ ನೀಡಿದರು. ವಿದ್ಯಾರ್ಥಿನಿ ಸಾನಿಧ್ಯ ಮಡಿಕೇಶ್ವರ ವಾಲ್ಮೀಕಿ ಕುರಿತು ಮಾತನಾಡಿದಳು.

ವ್ಹಿಡಿಸಿಸಿ ಬ್ಯಾಂಕ್‌ ನಿರ್ದೇಶಕಿ ಸಂಯುಕ್ತಾ ಪಾಟೀಲ ಮಾತನಾಡಿ, ಮಹರ್ಷಿ ವಾಲ್ಮೀಕಿ ರಾಮಾಯಣ ಕಾವ್ಯವನ್ನು ರಚಿಸುವ ಮೂಲಕ ನಮ್ಮ ಧರ್ಮಕ್ಕೆ ಭದ್ರ ಬುನಾದಿ ಹಾಕಿದ್ದಾರೆ. ಇಂದಿನ ಆಧುನಿಕ ಯುಗದಲ್ಲಿ ನಾವೆಲ್ಲರೂ ಧರ್ಮದ ಮಾರ್ಗದಲ್ಲಿ ಸಾಗಲು ರಾಮಾಯಣ ಕೃತಿ ಮಾರ್ಗದರ್ಶನ ನೀಡುತ್ತದೆ ಎಂದರು. ಹುಚ್ಚಪ್ಪ ಮುತ್ಯಾ ಸಾನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಹಿಬೂಬ ನಾಯ್ಕೋಡಿ, ಪುರಸಭೆ ಕಂದಾಯ ನಿರೀಕ್ಷಕ ಶಬ್ಬೀರ ರೇವೂರಕರ ಇದ್ದರು. ಸಮಾಜ ಕಲ್ಯಾಣ ಇಲಾಖೆಯ ಗ್ರೇಡ್-1 ಸಹಾಯಕ ನಿರ್ದೇಶಕಿ ಮಂಜುಳಾ ಹಿರೇಮನಿ ಸ್ವಾಗತಿಸಿದರು. ವಿರೇಶ ಗೂಡ್ಲಮನಿ, ಶಾಂತಾ ಕಸ್ತೂರಿ ನಿರೂಪಿಸಿದರು. ಸಿದ್ದು ಮೇಟಿ ವಂದಿಸಿದರು.

ಬಸವೇಶ್ವರ ವೃತ್ತದಿಂದ ಸಾರೋಟದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ವಾಲ್ಮೀಕಿ ಭವನಕ್ಕೆ ತಲುಪಿತು. ಮೆರವಣಿಗೆಯಲ್ಲಿ ರವಿ ನಾಯ್ಕೋಡಿ, ಸಿದ್ದು ಮೇಟಿ, ಪ್ರಕಾಶ ಪಾಟೀಲ, ಮಲ್ಲಿಕಾರ್ಜುನ ರಾಜನಾಳ,ಬಸನಗೌಡ ಪಾಟೀಲ ಅಧಿಕಾರಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬು ಬೆಳೆಗಾರರ ಸಭೆ ವಿಫಲ: ಪರಿಹಾರವಿಲ್ಲ
ಸವದತ್ತಿ ಯಲ್ಲಮ್ಮ ಕ್ಷೇತ್ರಕ್ಕೆ ₹215 ಕೋಟಿ ಅಭಿವೃದ್ಧಿ ಯೋಜನೆ!