ಶೈಕ್ಷಣಿಕ ಕೊರತೆಯಿಂದ ವಾಲ್ಮೀಕಿ ಸಮಾಜ ಹಿಂದುಳಿದಿದೆ: ಉಗ್ರಪ್ಪ

KannadaprabhaNewsNetwork |  
Published : Nov 09, 2024, 01:04 AM IST
ಯಾದಗಿರಿ ನಗರದ ಗಾಂಧಿ ವೃತ್ತದ ಪಂಪ ಮಹಾಕವಿ ಮಂಟಪದಲ್ಲಿ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾ ಯುವ ಘಟಕದಿಂದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮ ಜರುಗಿತು. | Kannada Prabha

ಸಾರಾಂಶ

Valmiki society is backward due to lack of education: Ugrappa

-ಸಮಾಜದ ಹಿನ್ನಡೆಗೆ ಸ್ವಾರ್ಥ, ಸಣ್ಣತನ ಕಾರಣ । ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಯಾದಗಿರಿ

ಪ್ರಜ್ಞಾವಂತಿಕೆ, ದೂರದೃಷ್ಟಿಯ ಕೊರತೆ ಹಾಗೂ ಶೈಕ್ಷಣಿಕ ಕೊರತೆಯಿಂದ ವಾಲ್ಮೀಕಿ ನಾಯಕ ಸಮಾಜ ಹಿಂದುಳಿದೆ ಎಂದು ಮಾಜಿ ಸಂಸದ, ಪರಿಷತ್ ಮಾಜಿ ವಿರೋಧ ಪಕ್ಷದ ನಾಯಕ ವಿ.ಎಸ್. ಉಗ್ರಪ್ಪ ಬೇಸರ ವ್ಯಕ್ತಪಡಿಸಿದರು.

ನಗರದ ಗಾಂಧಿ ವೃತ್ತದ ಪಂಪ ಮಹಾಕವಿ ಮಂಟಪದಲ್ಲಿ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾ ಯುವ ಘಟಕದಿಂದ ನಡೆದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾರ್ಥ ಮತ್ತು ಸಣ್ಣತನಗಳಿಂದಾಗಿ ನಾಯಕ ಸಮಾಜದ ಏಳಿಗೆಯಾಗದೆ ಹಿಂದುಳಿದಿದೆ. ಇದಕ್ಕೆ ಇಂದಿನ ಪರಿಸ್ಥಿತಿಗೆ ಸಮಾಜದ ಮುಖಂಡರಷ್ಟೇ ಅಲ್ಲದೇ ವಾಲ್ಮೀಕಿ ಪೀಠದ ಸ್ವಾಮಿಗಳೂ ಕಾರಣರಾಗಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮಹಾಸಭಾ ಯುವ ಘಟಕ ರಾಜ್ಯಾಧ್ಯಕ್ಷ ಡಾ. ತುಳಸಿರಾಮ್ ಮಾತನಾಡಿ, ಸಮಾಜ ಸಂಘಟನೆ ಮಾಡಬೇಕಾದ ಪೀಠಾಧಿಪತಿಗಳು ದಾರಿ ತಪ್ಪಿರುವುದಷ್ಟೇ ಅಲ್ಲದೇ ಸಮಾಜವನ್ನೇ ದಾರಿ ತಪ್ಪಿಸುವ ಕೆಲಸ ಮಾಡುವುದರ ಮೂಲಕ ರಾಜ್ಯದಲ್ಲಿ ಮುಂಚೂಣಿಯಲ್ಲಿರಬೇಕಾಗಿದ್ದ ಸಮಾಜವನ್ನು ಪಾತಾಳಕ್ಕೆ ತಳ್ಳುತ್ತಿರುವುದು ನಡೆಯುತ್ತಿದೆ ಎಂದರು.

ರಾಯಚೂರಿನ ವೆಂಕಟೇಶ ನಾಯಕ ಅಸ್ಕಿಹಾಳ, ಪ್ರಥಮ ದರ್ಜೆ ಗುತ್ತಿಗೆದಾರ ಹನುಮೇಗೌಡ ಬೀರನಕಲ್ ಮತ್ತು ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ ಮಾತನಾಡಿದರು.

ಗೋಲಪಲ್ಲಿಯ ವಾಲ್ಮೀಕಿ ಪೀಠದ ವರದಾನೇಶ್ವರ ಸ್ವಾಮೀಜಿ, ಮಸ್ಕಿ ತಾಲೂಕಿನ ಉಸ್ಕಿಹಾಳದ ವಾಲ್ಮೀಕಿ ಗುರುಪೀಠದ ಆತ್ಮಾನಂದ ಶ್ರೀಗಳ ಸಮ್ಮುಖದಲ್ಲಿ ಕಾರ್ಯಕ್ರಮ ನೆರವೇರಿತು. ಕುಷ್ಟಗಿ ತಾಲೂಕಿನ ಹಿರೇಮನ್ನಾಪುರದ ವಾಲ್ಮೀಕಿ ಆಶ್ರಮದ ಪವನಕುಮಾರ ಶ್ರೀಗಳು, ಯುವ ಘಟಕದ ಜಿಲ್ಲಾಧ್ಯಕ್ಷ ನರಸಪ್ಪ ನಾಯಕ ಬುಡಾಯಿನೋರ, ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಸುಭಾಸ ನಾಯಕ ಹೆಡಗಿಮುದ್ರಿ ಉಪಸ್ಥಿತರಿದ್ದರು.

ಪಂಚಾಯಿತಿ ಮಾಜಿ ಸದಸ್ಯ ಮರಲಿಂಗಪ್ಪ ಕರ್ನಾಳ, ಸಮಾಜ ಕಲ್ಯಾಣ ಅಧಿಕಾರಿ ಡಿ. ರಾಜಕುಮಾರ, ನೋಟರಿ, ನ್ಯಾಯವಾದಿ ಎಸ್. ಬಿ. ನಾಯಕ, ಪುರಸಭೆ ಮಾಜಿ ಅಧ್ಯಕ್ಷ ಅಜೀಜ ಅಹ್ಮದ್ ಶೆಹನಾ, ಹಣಮಂತ ಖಾನಳ್ಳಿ, ದಾವಣಗೆರೆಯ ಕರಿಯಪ್ಪ ನಾಯಕ, ಮಲ್ಲಿಕಾರ್ಜುನ ಬಟಗಿ, ಹಲಗಲಿ ಬೇಡರ ವಂಶಸ್ಥರಾದ ವೀರಣ್ಣ ನಾಯಕ ಅತಿಥಿಗಳಾಗಿ ಆಗಮಿಸಿದ್ದರು.

ತಾಲೂಕಾಧ್ಯಕ್ಷ ದೇವೀಂದ್ರನಾಯಕ ವರ್ಕನಳ್ಳಿ, ಉಪಾಧ್ಯಕ್ಷ ಶರಣು ನಾಯಕ ನಗಲಾಪುರ, ಶಹಾಪುರ ತಾಲೂಕಾಧ್ಯಕ್ಷ ಮಹಾದೇವ ದೇಸಾಯಿ, ನಗರ ಮುಖಂಡ ತಿಮ್ಮಣ್ಣ ಪರಸನಾಯಕ, ನಗರ ಅಧ್ಯಕ್ಷ ನಗರಾಜ ಪಿಲ್ಲಿ, ಶಿವು ವರ್ಕನಳ್ಳಿ, ಅಶೋಕ ಮೈಲಾಪುರ ಅಗಸಿ ಇದ್ದರು.

------

ಫೋಟೋ: ಯಾದಗಿರಿ ನಗರದ ಗಾಂಧಿ ವೃತ್ತದ ಪಂಪ ಮಹಾಕವಿ ಮಂಟಪದಲ್ಲಿ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾ ಯುವ ಘಟಕದಿಂದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮ ಜರುಗಿತು.

-----

7ವೈಡಿಆರ್11

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ದ್ವೇಷ ಮಸೂದೆಯಿಂದ ಭಿನ್ನ ದನಿ ದಮನ ಆಗಲ್ಲ ''
3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ