ವಾಲ್ಮೀಕಿ ಜೀವನ ಸಂದೇಶಗಳು ಸಮಾಜಕ್ಕೆ ದಾರಿದೀಪ

KannadaprabhaNewsNetwork |  
Published : Oct 27, 2026, 02:15 AM IST
ಹಿರೇಕೆರೂರು ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ಸೋಮವಾರ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು. | Kannada Prabha

ಸಾರಾಂಶ

ವಾಲ್ಮೀಕಿ ಜೀವನ ಸಂದೇಶಗಳು ಇಂದಿನ ಸಮಾಜಕ್ಕೂ ದಾರಿದೀಪವಾಗಿವೆ. ರಾಮಾಯಣ ಕೇವಲ ರಾಮನ ಕಥೆಯಲ್ಲ, ಅದು ಮನುಷ್ಯನ ಗುಣ, ಕರ್ತವ್ಯ, ಪ್ರೀತಿ, ತ್ಯಾಗ, ಅಹಂಕಾರ ಮತ್ತು ಬದುಕಿನ ಆಯ್ಕೆಗಳ ಬಗ್ಗೆ ಆಳವಾದ ಒಳನೋಟ ನೀಡುವ ಮಹಾಕಾವ್ಯ. ಈ ಗುಣಗಳನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ್ ಹೇಳಿದರು.

ಹಿರೇಕೆರೂರು: ವಾಲ್ಮೀಕಿ ಜೀವನ ಸಂದೇಶಗಳು ಇಂದಿನ ಸಮಾಜಕ್ಕೂ ದಾರಿದೀಪವಾಗಿವೆ. ರಾಮಾಯಣ ಕೇವಲ ರಾಮನ ಕಥೆಯಲ್ಲ, ಅದು ಮನುಷ್ಯನ ಗುಣ, ಕರ್ತವ್ಯ, ಪ್ರೀತಿ, ತ್ಯಾಗ, ಅಹಂಕಾರ ಮತ್ತು ಬದುಕಿನ ಆಯ್ಕೆಗಳ ಬಗ್ಗೆ ಆಳವಾದ ಒಳನೋಟ ನೀಡುವ ಮಹಾಕಾವ್ಯ. ಈ ಗುಣಗಳನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ್ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಪಟ್ಟಣ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕು ವಾಲ್ಮೀಕಿ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತ ಅಶ್ರಯದಲ್ಲಿ ಸೋಮವಾರ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎನ್. ರವಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಾಲ್ಮೀಕಿಯವರ ಜೀವನವು ಆತ್ಮಪರಿವರ್ತನೆ, ಜ್ಞಾನಸಾಧನೆ ಮತ್ತು ಸತ್ಕಾರ್ಯಗಳ ಮೂಲಕ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು ಎಂಬ ಸಂದೇಶ ನೀಡುತ್ತದೆ. ವಿದ್ಯಾರ್ಥಿಗಳು ಸೋಲನ್ನು ಒಪ್ಪಿಕೊಳ್ಳದೆ ವ್ಯಕ್ತಿತ್ವ ರೂಪಿಸಿಕೊಳ್ಳುವ ಪಾಠವನ್ನು ಅವರಿಂದ ಕಲಿಯಬೇಕು ಎಂದರು.

ಜಿಪಂ ಮಾಜಿ ಸದಸ್ಯ ಎನ್.ಎಂ. ಈಟೇರ ಮಾತನಾಡಿ, ಕರ್ನಾಟಕದ ವಾಲ್ಮೀಕಿ ಸಮುದಾಯದ ಸರ್ವತೋಮುಖ ಪ್ರಗತಿಗೆ ಶಿಕ್ಷಣ, ಉದ್ಯೋಗ, ಆರ್ಥಿಕ ಸ್ವಾವಲಂಬನೆ ಮತ್ತು ಸಾಮಾಜಿಕ ಗೌರವ ಅತ್ಯಗತ್ಯ. ಜಯಂತಿ ಕೇವಲ ಭಾಷಣ, ಮೆರವಣಿಗೆ ಮತ್ತು ಪುಷ್ಪಾರ್ಚನೆಗೆ ಸೀಮಿತವಾಗದೆ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಯುವಜನರಿಗೆ ಕೌಶಲ ತರಬೇತಿ ಹಾಗೂ ಅರ್ಹ ಕುಟುಂಬಗಳಿಗೆ ಸರ್ಕಾರಿ ಸೌಲಭ್ಯ ತಲುಪುವಿಕೆಗೆ ವೇದಿಕೆಯಾಗಬೇಕು ಎಂದರು.

ಈ ವೇಳೆ ಸಮಾಜದ ಮುಖಂಡರಿಂದ ತಾಪಂ ಇಒ ಮೂಲಕ ಮುಖ್ಯಮಂತ್ರಿಗಳಿಗೆ ವಿವಿಧ ಬೇಡಿಕೆಗಳ ಕುರಿತು ಮನವಿ ಸಲ್ಲಿಸಲಾಯಿತು. ರಮೇಶ ಮೆಣಸಗೇರಿ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ವಾಲ್ಮೀಕಿ ತಾಲೂಕು ಸಮಾಜದ ಅಧ್ಯಕ್ಷ ಗೋವಿಂದಪ್ಪ ತಳವಾರ, ಸಿಪಿಐ ಮಂಜುನಾಥ ಪಂಡಿತ್, ಪಪಂ ಮುಖ್ಯಾಧಿಕಾರಿ ಎನ್.ಟಿ. ಕೋಡಿ, ಭೀಮಾರಾಯ್, ಬಿ.ಆರ್. ತೆವರಿ, ಹನುಮಂತಪ್ಪ ದೀವಿಗಿಹಳ್ಳಿ, ಆರ್.ಎಫ್. ಹುಲ್ಲತ್ತಿ, ಕೆ.ಡಿ.ದೀವಿಗಿಹಳ್ಳಿ, ಎಚ್.ಆಂಜನೇಯ, ಹುಚ್ಚಪ್ಪ ಗೋಣೆರ, ಸಮಾಜಕಲ್ಯಾಣ ಸಹಾಯಕ ನಿರ್ದೇಶಕ ಗಿರೀಶ ಮುಡಿಯಮ್ಮನವರ, ಎಚ್.ಎಚ್. ಜಾಡರ, ಅಂಜನಯ್ಯ ಬಿ.ಆರ್., ವೀರಭದ್ರಗೌಡ ಗೌಡರ, ಪ್ರೇಮಾ ಇಳಗೇರ, ಗಣೇಶ ನಾಯಕ, ಜೆ. ರೇಷ್ಮಾ, ಬಿ.ಆರ್‌ ರುದ್ರಗೌಡ, ದೊಡ್ಡಮಲ್ಲಪ್ಪನವರ, ಸಮಾಜದ ಮುಖಂಡರು ಸಿಬ್ಬಂದಿಗಳು ಇದ್ದರು.

ಸಮಾಜ ಕಲ್ಯಾಣ ಅಧಿಕಾರಿ ಗಿರೀಶ್ ಮುಡಿಯಮ್ಮನವರ ಸ್ವಾಗತಿಸಿದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಚ್.ಎಚ್. ಜಾಡರ ನಿರೂಪಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನುಕುಲಕ್ಕೆ ರಾಮಾಯಣ ಗ್ರಂಥ ಕೊಡುಗೆ ನೀಡಿದ ಆದಿಕವಿ: ಮಹಾಂತಗೌಡ
ಹುಣ್ಣಿಮೆ ದಿನ ಮಾತಂಗಿ ದೇವಿ ದರ್ಶನಕ್ಕೆ ನಿರ್ಬಂಧ!