ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಮೌಲ್ಯಯುತ ಕವನಗಳು ಜನಸಾಮಾನ್ಯರ ಹೃದಯ ತಟ್ಟುತ್ತವೆ ಎಂದು ಹಿರಿಯ ಸಾಹಿತಿ ಪ್ರೊ.ಬಿ.ಎಂ.ಹಿರೇಮಠ ಹೇಳಿದರು. ಮುದ್ದೇಬಿಹಾಳ ಪಟ್ಟಣದ ಹೇಮರಡ್ಡಿ ಮಲ್ಲಮ್ಮ ಮಂಗಲ ಕಾಯಾ೯ಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಮುದ್ದೇಬಿಹಾಳ ಹಾಗು ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆ ಮುದ್ದೇಬಿಹಾಳ ಆಶ್ರಯದಲ್ಲಿ ಜರುಗಿದ ಶ್ರಾವಣ ಕಾವ್ಯ ಸಂಭ್ರಮ ಉದ್ಘಾಟಿಸಿ ಮಾತನಾಡಿದರು. ಕನ್ನಡಕ್ಕಾಗಿ ದುಡಿದವರನ್ನು ಸ್ಮರಿಸುವ ಕಾಯ೯ಕ್ರಮ ಶ್ಲಾಘನೀಯ ಎಂದರು.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಮೌಲ್ಯಯುತ ಕವನಗಳು ಜನಸಾಮಾನ್ಯರ ಹೃದಯ ತಟ್ಟುತ್ತವೆ ಎಂದು ಹಿರಿಯ ಸಾಹಿತಿ ಪ್ರೊ.ಬಿ.ಎಂ.ಹಿರೇಮಠ ಹೇಳಿದರು.ಮುದ್ದೇಬಿಹಾಳ ಪಟ್ಟಣದ ಹೇಮರಡ್ಡಿ ಮಲ್ಲಮ್ಮ ಮಂಗಲ ಕಾಯಾ೯ಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಮುದ್ದೇಬಿಹಾಳ ಹಾಗು ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆ ಮುದ್ದೇಬಿಹಾಳ ಆಶ್ರಯದಲ್ಲಿ ಜರುಗಿದ ಶ್ರಾವಣ ಕಾವ್ಯ ಸಂಭ್ರಮ ಉದ್ಘಾಟಿಸಿ ಮಾತನಾಡಿದರು. ಕನ್ನಡಕ್ಕಾಗಿ ದುಡಿದವರನ್ನು ಸ್ಮರಿಸುವ ಕಾಯ೯ಕ್ರಮ ಶ್ಲಾಘನೀಯ ಎಂದರು. ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಕನ್ನಡ ಸಾಹಿತ್ಯ ಗ್ರಾಮ ಮಟ್ಟದಲ್ಲಿಯು ಸೇವೆ ಮಾಡುವ ಹಂಬಲ ನನ್ನದು. ಜಿಲ್ಲೆಯಲ್ಲಿ ಎರಡು ನೂರು ಕವಿಗಳನ್ನು ಗುರುತಿಸಿದ್ದೇವೆ. ಅದರಲ್ಲಿ ಪ್ರಾಥಮಿಕ ಶಿಕ್ಷಕರೇ ಹೆಚ್ಚಿದ್ದು, ಅವರೆಲ್ಲರಿಗೂ ಕಸಾಪ ವೇದಿಕೆ ನೀಡಿ ಗೌರವಿಸುವ ಪ್ರಯತ್ನ ಮಾಡಿದ ಸಂತೃಪ್ತಿಯಿದೆ ಎಂದರು. ಪ್ರಾಸ್ತಾವಿಕವಾಗಿ ವೈ.ಎಚ್.ವಿಜಯಕರ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಖೇಮು ರಾಠೋಡ ಮಾತನಾಡಿ ಕಲಿಕೆ ಹಂತದಲ್ಲಿರುವ ವಿದ್ಯಾರ್ಥಿಗಳಿಗೆ ಈ ಕಾವ್ಯ ಗೋಷ್ಠಿ ಸ್ಪೂರ್ತಿ ನೀಡುತ್ತದೆ. ವಿದ್ಯಾರ್ಥಿಗಳಿಗೆ ಕವನ ಬರೆಯಲು ಪ್ರೋತ್ಸಾಹ ನೀಡುತ್ತದೆ ಎಂದರು. ತಾಲೂಕ ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಮಾತನಾಡಿದರು. ಸಾಹಿತಿ ಬುರಾಣ ರುದ್ರವಾಡಿ, ಗಣ್ಯರಾದ ಸುರೇಶಗೌಡ ಪಾಟೀಲ, ರಾಜೇಸಾಬ ಶಿವನಗುತ್ತಿ, ಚೈತನ್ಯ ಮುದ್ದೇಬಿಹಾಳ, ಸುಮಲತಾ ಗಡಿಯಪ್ಪನವರ, ಅಂಬಿಕಾ ಕರಕಪ್ಪಗೋಳ, ಶಾಂತಲಾ ಪಾಟೀಲ, ಮಡಿವಾಳಮ್ಮ ನಾಡಗೌಡ, ಸಿದ್ದನಗೌಡ ಕಾಶಿನಕುಂಟೆ, ವಿಶ್ವನಾಥ ಕುಲಕರ್ಣಿ, ಶಿವಪುತ್ರ ಅಜಮನಿ, ಸಾವಿತ್ರಿ ತಳವಾರ, ಜಾಹ್ನವಿ ದೇಶಪಾಂಡೆ, ಶೈಲಾ ಗೊಂಗಡಿ, ಬಸಮ್ಮ ಗದ್ಡಿ,
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.