ಮೌಲ್ಯವರ್ಧಿತ ಬಿಳಿ ರಾಗಿ ಕ್ಷೇತ್ರೋತ್ಸವ-ಪ್ರಾತ್ಯಕ್ಷಿಕೆ

KannadaprabhaNewsNetwork |  
Published : Dec 07, 2025, 02:15 AM IST
ದೊಡ್ಡಬಳ್ಳಾಪುರ ತಾಲೂಕಿನ ಹಾಡೋನಹಳ್ಳಿಯಲ್ಲಿರುವ ಬೆಂ.ಗ್ರಾ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದಿಂದ ಬಿಳಿ ರಾಗಿ ಪ್ರಾತ್ಯಕ್ಷಿಕೆ-ಕ್ಷೇತ್ರೋತ್ಸವ ನಡೆಯಿತು. | Kannada Prabha

ಸಾರಾಂಶ

ದೊಡ್ಡಬಳ್ಳಾಪುರ: ಭಾರತೀಯ ಕೃಷಿ ಸಂಶೋಧನಾ ಪರಿಷತ್ತು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ವಿಜ್ಞಾನ ಸಂಸ್ಥೆಯ ಸಹಯೋಗದಲ್ಲಿ ನರಗನಹಳ್ಳಿ ಗ್ರಾಮದ ಲಕ್ಷ್ಮಮ್ಮ ಅವರ ತಾಕಿನಲ್ಲಿ ಮೌಲ್ಯವರ್ಧನೆಗಾಗಿ ಬಿಳಿರಾಗಿ ತಳಿ ಕೆ.ಎಂ.ಆರ್-340 ಪ್ರಾತ್ಯಕ್ಷಿಕೆಯ ಕುರಿತು ಕ್ಷೇತ್ರೋತ್ಸವ ಹಮ್ಮಿಕೊಳ್ಳಲಾಗಿತ್ತು.

ದೊಡ್ಡಬಳ್ಳಾಪುರ: ಭಾರತೀಯ ಕೃಷಿ ಸಂಶೋಧನಾ ಪರಿಷತ್ತು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ವಿಜ್ಞಾನ ಸಂಸ್ಥೆಯ ಸಹಯೋಗದಲ್ಲಿ ನರಗನಹಳ್ಳಿ ಗ್ರಾಮದ ಲಕ್ಷ್ಮಮ್ಮ ಅವರ ತಾಕಿನಲ್ಲಿ ಮೌಲ್ಯವರ್ಧನೆಗಾಗಿ ಬಿಳಿರಾಗಿ ತಳಿ ಕೆ.ಎಂ.ಆರ್-340 ಪ್ರಾತ್ಯಕ್ಷಿಕೆಯ ಕುರಿತು ಕ್ಷೇತ್ರೋತ್ಸವ ಹಮ್ಮಿಕೊಳ್ಳಲಾಗಿತ್ತು.

ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನಿ ಡಾ. ಗೋಪಿಕಾ ಸಿ.ಮುತ್ತಗಿ ಮಾತನಾಡಿ, ರಾಗಿಯು ಪೋಷಕಾಂಶಗಳ ಆಗರವಾಗಿದ್ದು, ಇತ್ತೀಚಿನ ದಿನಗಳಲ್ಲಿ ರಾಗಿಯ ಮೌಲ್ಯವರ್ಧಿತ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ತಳಿಯನ್ನು 2016 ರಲ್ಲಿ ಮಂಡ್ಯದ ವಲಯ ಕೃಷಿ ಸಂಶೋಧನಾ ಕೇಂದ್ರದದಿಂದ ಬಿಡುಗಡೆ ಮಾಡಲಾಗಿದೆ. ಕಾಂಡ ಕೊರಕದ ಬಾಧೆಗೆ ನಿರೋಧಕ ತಳಿಯಾಗಿದೆ ಇದಾಗಿದೆ ಎಂದರು.

ಕೆ.ಎಂ.ಆರ್-340 ಬಿಳಿ ರಾಗಿ ತಳಿಯು ಮೌಲ್ಯವರ್ಧನೆಗೆ ಸೂಕ್ತವಾಗಿದ್ದು ಐದು ರೈತರ ತಾಕಿನಲ್ಲಿ ಈ ಪ್ರಾತ್ಯಕ್ಷಿಕೆಯನ್ನು ಕೈಗೊಳ್ಳಲಾಗಿತ್ತು. ಈ ತಳಿಯು ಪೋಷಕಾಂಶಗಳ ಆಗರವಾಗಿದ್ದು, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶಗಳು ಹೇರಳವಾಗಿವೆ. ಈ ತಳಿಯು 95-100 ದಿನಗಳಲ್ಲಿ ಕಟಾವಿಗೆ ಬರುವುದರಿಂದ ಇದನ್ನು ತಡವಾದ ಮುಂಗಾರಿನಲ್ಲಿ ಬೆಳೆಯ ಬಹುದು, ಪ್ರತಿ ಹೆಕ್ಟೇರಿಗೆ 30-35 ಕ್ವಿಂಟಾಲ್ ಕಾಳಿನ ಇಳುವರಿ ಹಾಗೂ 4-5 ಟನ್ ಹುಲ್ಲಿನ ಇಳುವರಿಯನ್ನು ಪಡೆಯಬಹುದೆಂದು ತಿಳಿಸಿದರು. ಪ್ರಾಧ್ಯಾಪಕ ಡಾ. ಜಿ. ಈಶ್ವರಪ್ಪ, ಕೃಷಿಕರು ಪಾಲ್ಗೊಂಡಿದ್ದರು.6ಕೆಡಿಬಿಪಿ1-

ದೊಡ್ಡಬಳ್ಳಾಪುರ ತಾಲೂಕಿನ ಹಾಡೋನಹಳ್ಳಿಯಲ್ಲಿರುವ ಬೆಂ.ಗ್ರಾ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದಿಂದ ಬಿಳಿ ರಾಗಿ ಪ್ರಾತ್ಯಕ್ಷಿಕೆ-ಕ್ಷೇತ್ರೋತ್ಸವ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೈಲಲ್ಲೂ ದರ್ಶನ್‌ಗೆ ‘ಅಭಿಮಾನಿಗಳು’ ಕಾಟ!
ನಾಳೆ ಹಲವು ಸಾಧಕರಿಗೆ ಗಾಂಧಿ ಪುರಸ್ಕಾರ ಪ್ರದಾನ